ನೂತನ ವರ್ಷಾರಂಭದ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತರು
- ವಿಜಯ ದರ್ಪಣ ನ್ಯೂಸ್….
ನೂತನ ವರ್ಷಾರಂಭದ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತರು

ತಾಂಡವಪುರಮೈಸೂರು: ಜನವರಿ 12025 ನೇ ಸಂವತ್ಸರ ಮುಗಿದು 2026 ನೇ ಸಂವತ್ಸರಕ್ಕೆ ಕಾಲಿಟ್ಟ ಇಂದು ಸಾಂಸ್ಕೃತಿಕ ನಗರ ಮೈಸೂರು ಸೇರಿದಂತೆ ಜಿಲ್ಲೆಯಜನತೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಮುಂಜಾನೆ ಎದ್ದು ಮೈಸೂರಿನ ಅದಿ ದೇವತೆ,ನಾಡದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನಕ್ಕೆ ಸಹಸ್ರಾರು ಜನ ದಾಂಗುಡಿ ಇಟ್ಟಿದ್ದರು.
ಹೊಸ ವರ್ಷದ ಮೊದಲ ದಿನ ಧಾರ್ಮಿಕ ಕೇಂದ್ರಗಳಿಗೆ ಭೇಟಿ ಕೊಟ್ಟು ವರ್ಷ ಪೂರ್ತಿ ದೇವರು ಸ್ನನ್ಮಂಗಳವನ್ನುಟು ಮಾಡಲಿ,ಸಕಲ ಇಷ್ಟಾರ್ಥ ಸಿದ್ದಿಯಾಗಲಿ ಎಂದು ನಗರ ಹಲವೆಡೆ ಇರುವ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾಗಿ ಎಂದಿನಂತೆ ತಮ್ಮ ಕೆಲಸಕಾರ್ಯಗಳನ್ನು ಆರಂಭಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷದ ಹಿನ್ನೆಲೆ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿದ್ದವು. ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ದಕ್ಷಿಣ ಕಾಶಿ, ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಚಿಕ್ಕಯ್ಯನ ಛತ್ರ ಗ್ರಾಮದ ಬಳಿ ಇರುವ ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಾಲಯ ತಾಂಡವಪುರ ಗ್ರಾಮದ ಮಾರಮ್ಮ ದೇವಾಲಯ ಸೇರದಂತೆ ಇನ್ನು ಹಲವಾರು ಕಡೆ ದೇವಾಲಯಗಳಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂರಿ ಸಲ್ಲಿಸಿ ದೇವರನ್ನು ಪ್ರಾರ್ಥಿಸಿದರು.
ಎಲ್ಲಾ ಕಡೆ ಜನವೋ ಜನ ಸಾಗರವೇ ನೆರೆದಿತ್ತು.ಇಂದು ಚಾಮುಂಡಿ ಬೆಟ್ಟದಲ್ಲಿ ಮುಂಜಾನೆಯಿಂದಲೇ ಜನರು ಭೇಟಿ ಕೊಟ್ಟು ಭಾರಿ ವಾಹನ ದಟ್ಟಣೆ ಉಂಟಾಗಿತ್ತು.ಬೆಟ್ಟಕ್ಕೆ ಹೋಗುವ ಮಾರ್ಗ ಸಾಲು ಸಾಲು ವಾಹಗಳು ಸಾಗಿದ್ದವು.ಹಾಗಾಗಿ ಸಹಜವಾಗಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೆಟ್ಟದ ಮೇಲೆ ತಾಯಿಯ ದರ್ಶನಕ್ಕಾಗಿ ಸಹಸ್ರಾರು ಜನ ಸರದಿ ಸಾಲಿನಲ್ಲಿ ನಿಂತು 200,100 ರೂ ಗಳ ಟಿಕೆಟ್ ಮತ್ತು ಧರ್ಮ ದರ್ಶನದ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ತಾಯಿಯ ದರ್ಶನ ಪಡೆದರು.ಚಾಮುಂಡೇಶ್ವರಿ ದೇವಿಗೆ ಮುಂಜಾನೆಯಿಂದಲೇ ವಿವಿಧ ಪೂಕಾಕೈಂಕರ್ಯಗಳು ನೆರವೇರಿದ್ದು.ಸಾರ್ವಜನಿಕರಿಗೆ ಬುಧವಾರ ಸಂಜೆ 7 ಗಂಟೆಯಿಂದ ಗುರುವಾರ ಬೆಳಗ್ಗೆ 6 ಗಂಟೆವರಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಏರಲಾಗಿತ್ತು.
ಗುರುವಾರ ಬೆಳಗ್ಗೆ 6 ನಂತರ ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿತು.ಬಳಿಕ ಮುಂಜಾನೆಯಿಂದ ನಿರಂತರವಾಗಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಾಡಿನ ಮೂಲೆ ಮೂಲೆಗಳಿಂದ ಹಾಗೂ ದೇಶ ವಿದೇಶಗಳಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಜೊಸ ವರ್ಷ ದಿನ ದೇವರು ಸುಖ,ಶಾಂತಿ,ನೆಮ್ಮದಿ ಕೊಡಲಿ,ಆರೋಗ್ಯ ಕರುಣಿಸಲಿ ಎಂದು ಮುಂದಿನ ಗುರಿ ಧ್ಯೇಯಗಳು ಈಡೇರಲಿ ಎಂದು ತಾಯಿಯಲ್ಲಿ ಕೇಳಿಕೊಂಡು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಈ ವೇಳೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಸರದಿ ಸಾಲಿನ ಬ್ಯಾರಿಕೇಟ್ ವ್ಯವಸ್ಥೆ ಮಾಡಲಾಗಿತ್ತು. 200,1000 ರೂ ಟಿಕೆಟ್ ಪಡೆದು ದರ್ಶನ ಪಡೆದವರಿಗೆ ಉಚಿತ ಲಡ್ಡು, ಪ್ರಸಾದ ವಿತರಣೆ ಮಾಡಲಾಯಿತು.ದಾಸೋಹ ಭವನದಲ್ಲಿ ಬಂದಂತಹ ಭಕ್ತಾದಿಗಳಿಗೆ ನಿರಂತರವಾಗಿ ದಾಸೋಹ ವ್ಯವಸ್ಥೆಯನ್ನೂ ಮಾಡಲಾಗಿತ್ತು.
