--Ads--

ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ದಾಸರಾಗುತ್ತಿದ್ದಾರೆ: ಶಿಕ್ಷಕ ಎಚ್ಎಸ್ ರುದ್ರೇಶ್ ಮೂರ್ತಿ

On: April 13, 2026 5:36 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ದಾಸರಾಗುತ್ತಿದ್ದಾರೆ: ಶಿಕ್ಷಕ ಎಚ್ಎಸ್ ರುದ್ರೇಶ್ ಮೂರ್ತಿ

ಶಿಡ್ಲಘಟ್ಟ : ಈಗಿನ ಡಿಜಿಟಲ್ ಯುಗದಲ್ಲಿ ಮಕ್ಕಳದಿಸೆಯಿಂದಲೇ ಮೊಬೈಲ್ , ಸಾಮಾಜಿಕ ಜಾಲತಾಣಗಳ ಬಗೆಗೆ ಒಲವು ಹೆಚ್ಚಿ ದಾಸರಾಗುತ್ತಿರುವುದರಿಂದ ಶಿಬಿರಗಳು ಅಕ್ಷರ ಜ್ಞಾನ ಮತ್ತು ಕ್ರೀಡೆಗಳ ನಡುವಿನ ಸೇತುವೆಯಾಗಿ ಆಟ, ಚಿತ್ರಕಲೆ, ನಾಟಕ, ಕೃತಕಬುದ್ಧಿಮತ್ತೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಕೂಲವಾಗಲಿದೆ
ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಜ್ಞಾನದೀಪ ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಂಕಗಳನ್ನು ಗಳಿಸುವುದೇ ಶಿಕ್ಷಣವಾಗದೇ ಸೋಲು-ಗೆಲುವುಗಳ ಸಮಾನ ಸ್ವೀಕಾರ, ನಾಯಕತ್ವಗುಣ ವೃದ್ಧಿ ಮತ್ತು ಸಹಬಾಳ್ವೆ, ಸಹಕಾರದಂತಹ ಗುಣಗಳ ವೃದ್ಧಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದರು.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವವಿಕಸನಕ್ಕೆ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದ್ದು, ವಿದ್ಯಾರ್ಥಿದಿಸೆಯಲ್ಲಿ ಸೃಜನಶೀಲತೆಯನ್ನು ಬಡಿದೆಬ್ಬಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದರು.

ಶಿಕ್ಷಕ ಎ.ಬಿ.ನಾಗರಾಜ ಮಾತನಾಡಿ,ಶಿಸ್ತು, ಸಮಯಪ್ರಜ್ಞೆಯಂತಹ ಮೌಲ್ಯಗಳನ್ನು ಶಿಬಿರಗಳು ಬೆಳೆಸುವಂತಹ ಚಟುವಟಿಕೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್ ಅದ್ಯಕ್ಷತೆ ವಹಿಸಿದ್ದರು.
೮ ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಮೋಜು ಗಣಿತ, ವೇದಗಣಿತ, ಪರಿಸರ ಸಂರಕ್ಷಣೆ ಕುರಿತ ಚಟುವಟಿಕೆಗಳು, ಯೋಗ, ಧ್ಯಾನ, ಸ್ಪೋಕನ್ ಇಂಗ್ಲೀಷ್ ಮತ್ತು ಗ್ರಾಮರ್, ಚಿತ್ರಕಲೆಯಂತಹ ಅನೇಕ ಚಟುವಟಿಕೆಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯ ಎಸ್.ಎಲ್.ನಾರಾಯಣಸ್ವಾಮಿ, ಎಂ.ನಾಗೇಶ್, ಬಿ.ಆರ್.ಸಾವಿತ್ರಮ್ಮ, ಬಿ.ಎನ್.ಮಂಜುಳಾ, ಶಿಕ್ಷಕ ಬಿ.ನಾಗರಾಜು, ರಕ್ಷಿತಾ, ನಾರಾಯಣಸ್ವಾಮಿ, ಮಾರಪ್ಪ, ವೆಂಕಟೇಶಪ್ಪ,ಸಾವಿತ್ರಮ್ಮ, ಸರಸ್ವತಮ್ಮ, ಅಶ್ವಿನಿ,
ಬಿ.ನಾಗರಾಜು, ಶಿಕ್ಷಕ ಎ.ಬಿ.ನಾಗರಾಜ ಮತ್ತಿತರರು
ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರೋಗಿಗಳಿಗೆ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಣೆ ಮಾಡಿದ  ಪೂಲಕುಂಟಲಹಳ್ಳಿ ರಘುನಾಥರೆಡ್ಡಿ 

ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ: ಪಾಳುಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಣೆ

ರಾಜ್ಯದಲ್ಲಿ ಕರವೇ ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ : ಕರವೇ ಅಧ್ಯಕ್ಷ ಮುನಿರಾಜ್(ಕುಟ್ಟಿ)

ಬೆಸ್ಕಾಂ ಖಾಸಗೀಕರಣಕ್ಕೆ ನೌಕರರು ,ಗುತ್ತಿಗೆದಾರರಿಂದ ವಿರೋಧ !

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು 3 ವರ್ಷ ಮುಗಿದಿದೆ ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡರ ಕೊಡುಗೆ ಏನು :  ಪೂಲಕುಂಟಲಹಳ್ಳಿ ರಘುನಾಥ್ ರೆಡ್ಡಿ

ರೈತರಿಗೆ ಹನಿ ನೀರಾವರಿ ಹಾಗು ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡಬೇಕು :  ಹಿತ್ತಲಹಳ್ಳಿ ಗೋಪಾಲಗೌಡ ಒತ್ತಾಯ