ವಿಜಯ ದರ್ಪಣ ನ್ಯೂಸ್…..
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ 9 ಮಂದಿ ಅವಿರೋಧವಾಗಿ ಆಯ್ಕೆ

ಶಿಡ್ಲಘಟ್ಟ : ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿಡ್ಲಘಟ್ಟ ತಾಲ್ಲೂಕು ಶಾಖೆಯ 2026-31 ರ ಅವಧಿಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೇ ಏ-19 ರಂದು ನಿಗಧಿಯಾಗಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಒಟ್ಟು 27 ಮಂದಿ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಹಿಂಪಡೆಯಲು ಕೊನೆ ದಿನವಾದ ಏ-14 ರಂದು 18 ಮಂದಿ ನಾಮಪತ್ರ ವಾಪಸ್ ಪಡೆದಿದ್ದರಿಂದ ಉಳಿದ 9 ಮಂದಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀ ಕೃಷ್ಣ ಪರಮಾತ್ಮ ತಿಳಿಸಿದ್ದಾರೆ.
ಸಾಮಾನ್ಯ ಸ್ಥಾನದಿಂದ ಪಿಲ್ಲಗುಂಡ್ಲಹಳ್ಳಿ ಸರ್ಕಾರಿ ಶಾಲೆಯ ಪಿ.ನಾಗರಾಜ,ತಾತಹಳ್ಳಿ ಸರ್ಕಾರಿ ಶಾಲೆಯ ಪಿ.ಸುದರ್ಶನ್,ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಪಿ. ಪಿಳ್ಳಣ್ಣ ,ಗೊರಮಿಲ್ಲಹಳ್ಳಿ ಸರ್ಕಾರಿ ಶಾಲೆಯ ಎಂ. ಬಾಲಚಂದ್ರ, ಕಂಬದಹಳ್ಳಿ ಸರ್ಕಾರಿ ಶಾಲೆಯ ಸುಂದರಾಚಾರಿ, ಎಸ್.ದೇವಗಾನಹಳ್ಳಿಯ ಸರ್ಕಾರಿ ಶಾಲೆಯ ಎಸ್.ಸುರೇಶ್‌ಬಾಬು , ಮಹಿಳಾ ಮೀಸಲು ಕ್ಷೇತ್ರದಿಂದ ಪಿಂಡಿಪಾನಹಳ್ಳಿ ಸರ್ಕಾರಿ ಶಾಲೆಯ ಎನ್.ಪದ್ಮಾವತಮ್ಮ, ಚೀಮಂಗಲ ಸರ್ಕಾರಿ ಶಾಲೆಯ ಎಂ.ಲಕ್ಷ್ಮೀಕಾಂತಮ್ಮ, ಕಾಕಚೊಕ್ಕಂಡನಹಳ್ಳಿ ಸರ್ಕಾರಿ ಶಾಲೆಯ ಕೆ.ಸುಮ.ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಕಾರ್ಯದರ್ಶಿ ಅಪ್ಪೇಗೌಡನಹಳ್ಳಿ ಎಂ.ಕೆಂಪೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಎಂ.ಮುನಿರಾಜು, ಬಿ.ಆರ್.ನಾರಾಯಣಸ್ವಾಮಿ, ಸರಸ್ವತಮ್ಮ ಮಾಜಿ ಖಜಾಂಚಿ ಕೆ.ಮುನಿಯಪ್ಪ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್.ನಾಗರಾಜ್, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ನರಸಿಂಹರಾಜು, ಮೇಲೂರು ಎಂ. ಮಂಜುನಾಥ್, ಎಸ್.ನಾಗೇಶ್ ಮುಂತಾದವರು ಹಾಜರಿದ್ದರು.










