ವಿಜಯ ದರ್ಪಣ ನ್ಯೂಸ್…..
ಸಾಂಸ್ಕೃತಿಕ ಕಲೆಗಳು ಮರೆಯಾಗುತ್ತಿರುವ ದಿನಗಳಲ್ಲಿ ಮತ್ತೆ ಕೋಲಾಟ ಕಲೆ ಮರುಕಳಿಸಿದೆ

ಶಿಡ್ಲಘಟ್ಟ : ಗ್ರಾಮಗಳಲ್ಲಿ ಸಾಂಸ್ಕೃತಿಕ ಕಲೆಗಳು ಮರೆಯಾಗುತ್ತಿರುವ ದಿನಗಳಲ್ಲಿ ಮತ್ತೆ ನಮ್ಮ ಗ್ರಾಮದಲ್ಲಿ ಕೋಲಾಟ ಕಲೆ ಮರುಕಳಿಸಿದೆ ನಾನು ಸಹ ಅವರೊಂದಿಗೆ ಕೋಲಾಟ ಕಲಿತು ಪ್ರದರ್ಶನ ನೀಡಿದ್ದು ಸಂತಸದ ಸಂಗತಿಯಾಗಿದೆ ಎಂದು ಜನಪದ ಕಲಾವಿದ ಈಧರೆ ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ 13ನೇ ವರ್ಷದ ಶ್ರೀಭಕ್ತಾಂಜನೇಯಸ್ವಾಮಿ ದೇವಾಲಯದ ವಾರ್ಷಿಕೋತ್ಸವದಲ್ಲಿ ವರದನಾಯಕನಹಳ್ಳಿ, ಹನುಮಂತಪುರ, ಶಿಡ್ಲಘಟ್ಟ ಮತ್ತು ಚೀಮನಹಳ್ಳಿಗೆ ಸೇರಿದ ಸುಮಾರು ಇಪ್ಪತ್ತು ಜನರು ಕೋಲಾಟದ ಗುರುಗಳಾದ ಹಾರೋಹಳ್ಳಿ ಇ.ಮುನಿಶಾಮಪ್ಪ ಮತ್ತು ಎಚ್.ಎನ್.ಸುಬ್ಬರಾಯಪ್ಪ ಅವರಿಂದ ಕೋಲಾಟ ಕಲಿತು ಪ್ರದರ್ಶನ ನೀಡಿದರು.
ಈ ಹಿಂದೆ ಗ್ರಾಮೀಣ ಬಾಗದ ಜನರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳು ಮುಗಿಸಿ ರಾತ್ರಿ ವೇಳೆ ಜನಪದ ಕಲೆಗಳನ್ನು ಪ್ರದರ್ಶಿಸುತ್ತಿದ್ದರು,ಇತ್ತೀಚೆಗೆ ಜನಪದ ಸಾಂಸ್ಕೃತಿಕ ಮಲೆಗಳು ಮರೆಯಾಗುತ್ತಿವೆ ಎಂದು ವಿಷಾದಿಸಿದರು.
ಹನುಮಂತಪುರ ಗ್ರಾಮದ ಶ್ರೀಕೃಷ್ಣಸ್ವಾಮಿ ದೇವಾಲಯದ ಬಳಿ ಕಳೆದ ಒಂದು ತಿಂಗಳಿನಿಂದ ತರಬೇತಿ ಪಡೆದು ಮೊದಲ ಬಾರಿಗೆ ಕೋಲಾಟ ಪ್ರದರ್ಶನ ನೀಡಲಾಯಿತು.
ಕೋಲಾಟ ತರಬೇತಿ ಪಡೆದು ಪ್ರದರ್ಶನ ನೀಡಿದ ಹನುಮಂತಪುರ ಗಾಯಿತ್ರಮ್ಮ, ವಿಮಲಮ್ಮ, ನಾಗಮ್ಮ, ಭವ್ಯಶ್ರಿ,ಹನುಮಂತರೆಡ್ಡಿ ,ಹಾರ್ಮೋನಿಯಂ ಕಲಾವಿದ ಮುನಿರೆಡ್ಡಿ, ವರದನಾಯಕನಹಳ್ಳಿ ಪ್ರಭಾಕರ್, ದ್ಯಾವಣ್ಣ, ನೇತ್ರ, ಇನಿ, ವಿ.ಟಿ.ಜವನಿ, ಚೀಮನಹಳ್ಳಿ ರಾದಮ್ಮ, ಭಾಗ್ಯಮ್ಮ, ಶಾಮಲಮ್ಮ, ಮಂಜಮ್ಮ, ತಬಲಾ ಕಲಾವಿದ ರಮೇಶ್, ಶಿಡ್ಲಘಟ್ಟ ನಗರದ ಮಂಗಳ, ಗಿರಿಜಮ್ಮ, ಗೀತಾ,ಕನ್ಯಪ್ಪ ಪಾಲ್ಗೊಂಡಿದ್ದರು.










