--Ads--

ಕಾಂಗ್ರೆಸ್ ‘ಮಹಿಳಾ ಮೀಸಲಾತಿ ವಿರೋಧಿ ನಿಲುವನ್ನು’  ಖಂಡಿಸಿ, ಮೀಸಲಾತಿ ಕಡ್ಡಾಯವಾಗಿ ಜಾರಿಯಾಗಲಿ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ 

On: April 29, 2026 5:14 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕಾಂಗ್ರೆಸ್ ‘ಮಹಿಳಾ ಮೀಸಲಾತಿ ವಿರೋಧಿ ನಿಲುವನ್ನು’  ಖಂಡಿಸಿ, ಮೀಸಲಾತಿ ಕಡ್ಡಾಯವಾಗಿ ಜಾರಿಯಾಗಲಿ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ 

ಶಿಡ್ಲಘಟ್ಟ : ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಈ ‘ಮಹಿಳಾ ಮೀಸಲಾತಿ ವಿರೋಧಿ ನಿಲುವನ್ನು’ ನಾವು ಖಂಡಿಸುತ್ತೇವೆ ಮೀಸಲಾತಿ ಕಡ್ಡಾಯವಾಗಿ ಜಾರಿಯಾಗಲಿ, ಮಹಿಳೆಯರ ಹೋರಾಟವು ಮುಖ್ಯವಾಹಿನಿಯಾಗಿ ಬರಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದ ‘ಸೇವಾ ಸೌಧ’ ಬಿಜೆಪಿ ಕಾರ್ಯಾಲಯದಿಂದ ಕೋಟಿ ವೃತ್ತದ ಮೂಲಕ ಸರ್ಕಾರಿ ಬಸ್ ನಿಲ್ದಾಣ ,ತಾಲ್ಲೂಕು ಕಛೇರಿವರೆಗೂ ಸಾಗಿ ನಾರಿ ಶಕ್ತಿ ವಂದನಾ ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ವಿರೋಧಿಸಿರುವ ಕಾರಣ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇಶದ ಮಹಿಳೆ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆಯಿದೆ ಅಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲುವಂತೆ ಮಾಡಿದ
ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ನಡೆ ಮಹಿಳೆಯರ ರಾಜಕೀಯ ಮುಖ್ಯವಾಹಿನಿಗೆ ಬರುವ ಮಾರ್ಗವನ್ನೇ ಮುಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಮೀಸಲಾತಿ ಮಸೂದೆಗೆ ವಿರೋಧಿಸಿರುವ ಕಾಂಗ್ರೆಸ್ ,ದೇಶದ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ ಈ ಒಂದೇ ಬೇಡಿಕೆಯನ್ನು ನಾವು ದೇಶದ ಮುಂದೆ ಹೊತ್ತು ನಿಲ್ಲುತ್ತೇವೆ ಬಿಜೆಪಿ ಸರ್ಕಾರ ಮಹಿಳೆಗೆ ಗೌರವ, ಕೊಡುವ ಪಕ್ಷವಾಗಿದೆ ಎಂದು ನುಡಿದರು.
ದೇಶದ ಸೇನೆಗೆ ಬೆಂಬಲ ನೀಡುವ ಸ್ಪಷ್ಟ ನಿಲುವು ಬಿಜೆಪಿಯದೇ ಇರುತ್ತಿದೆ ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದ್ದು, ಮುಂದಿನ ದಿನಗಳಲ್ಲಿ ಜನರು, ಅದರಲ್ಲಿಯೂ ಮಹಿಳೆಯರು ಕಾಂಗ್ರೆಸ್‌ನ ದ್ವಿಮುಖ ನೀತಿಗೆ ತಕ್ಕ ಪಾಠ ಕಲಿಸುವರು ಎಂದು ಹೇಳಿದರು.

“ಆಪರೇಷನ್ ಸಿಂದೂರ್‌ “ನಂತಹ ದೇಶ ಸುರಕ್ಷೆತೆಗೆ ಬೇಕಾದ ಕ್ರಮಗಳನ್ನೂ ಕಾಂಗ್ರೆಸ್ ಹಿಂದಿನಿಂದಲೂ ವಿರೋಧ ಮಾಡುತ್ತಾ ಬಂದಿದೆ, ಕಾರ್ಯಾಚರಣೆ ನಡೆದ ತಕ್ಷಣ ಅವರು ವ್ಯಂಗ್ಯ, ನಂತರ ಪ್ರಶ್ನೆ, ನಂತರ ವಿರೋಧ ಆದರೆ ಕಾಲ ಬದಲಾದಾಗ ಮೀಟೂ ಮುಖವಾಡ ಹಾಕುತ್ತಾರೆ ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಒಬಿಸಿ ಅಧ್ಯಕ್ಷ ಆಂಜನೇಯಗೌಡ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರ್ಮದಾರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ನಿಕಟಪೂರ್ವ ಅಧ್ಯಕ್ಷ ಕೆ.ಸುರೇಂದ್ರಗೌಡ, ನಗರ ಘಟಕದ ಅಧ್ಯಕ್ಷ ದೇವರಾಜ್, ನಿಕಟಪೂರ್ವ ಅದ್ಯಕ್ಷ ನರೇಶ್ , ನಗರಸಭೆ
ಮಾಜಿ ಸದಸ್ಯ ನಾರಾಯಣಸ್ವಾಮಿ. ಗ್ರಾಮಾಂತರ ಮಂಡಲ ಅಧ್ಯಕ್ಷೆ ಚಾತುರ್ಯ, ನಗರ ಘಟಕ ಅಧ್ಯಕ್ಷೆ ತ್ರಿವೇಣಿ ,ಕಾರ್ಯಕರ್ತರಾದಪುರುಷೋತ್ತಮ್, ಕೊತ್ತನೂರು ಜಗದೀಶ್ ರೆಡ್ಡಿ , ತಲದುಮ್ಮನಹಳ್ಳಿ ಮಧು,ಮಂಜುಳಾ,ರೂಪಾ, ರಾಗಿಣಿ, ನಂದಿನಿ ಮುಂತಾದವರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now