20 ಬಾರಿ ರಕ್ತದಾನ ಮಾಡಿರುವ ಫ್ರಾನ್ಸಿಸ್ ಡಿಸೋಜ.

ವಿಜಯ ದರ್ಪಣ ನ್ಯೂಸ್ .                               ಕೊಡಗು …

ಸಂಕಷ್ಟಕ್ಕೆ ಸಿಲುಕಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ಈವರೆಗೂ 20 ಬಾರಿ ಯಾವುದೇ ಫಲಾಪೇಕ್ಷೆ ಇಲ್ಲದೇ ಫ್ರಾನ್ಸಿಸ್ ಡಿಸೋಜ ರಕ್ತದಾನ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು  ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಇವರು ಆಪರೇಷನ್ಗೆ ವ್ಯಕ್ತಿಯೊಬ್ಬರಿಗೆ ರಕ್ತ ಬೇಕಾಗಿರುವುದನ್ನು ಮನಗಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಉತ್ಸುಕತೆಯಿಂದ ಹೋಗಿ ರಕ್ತದಾನ ಮಾಡಿ ಬಂದಿರುತ್ತಾರೆ.

ಇದುವರಿಗೂ 20 ಬಾರಿ ರಕ್ತದಾನ ಮಾಡಿರೋದು ಇವರ ವಿಶೇಷವಾಗಿರುತ್ತದೆ. ಇವರ ಸಾಮಾಜಿಕ ಕಳಕಳಿಗೆ ನಮ್ಮದೊಂದು ಸೆಲ್ಯೂಟ್.