ಹಲಗನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸುರಗಹಳ್ಳಿ ವೀಣಾ ವೆಂಕಟೇಶ್ ಮತ್ತು ಉಪಾಧ್ಯಕ್ಷರಾಗಿ ಮೀನಾಕ್ಷಿ ಆಯ್ಕೆ..

ವಿಜಯ ದರ್ಪಣ ನ್ಯೂಸ್ 

ಪಿರಿಯಾಪಟ್ಟಣ,ಮೈಸೂರು ಜಿಲ್ಲೆ 

  ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸುರಗಹಳ್ಳಿ ವೀಣಾ ವೆಂಕಟೇಶ್ ಮತ್ತು ಉಪಾಧ್ಯಕ್ಷರಾಗಿ ಮೀನಾಕ್ಷಿರವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರಗಹಳ್ಳಿ ವೀಣಾ ವೇಕಟೇಶ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಾಜನ ಬೆಳಗುಲಿ ಸಂತೋಷ್ ಸ್ಪರ್ಧಿಸಿದ್ದರು. ಸುರಗಹಳ್ಳಿ ವೀಣಾ ವೇಕಟೇಶ್ 10 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಪ್ರತಿಸ್ಪರ್ಧಿ ರಾಜನ ಬಿಳಗೂಲಿ ಸಂತೋಷ್ 8 ಮತಗಳನ್ನು ಪಡೆದು ಪರಭವಗೊಂಡರು. ಉಪಾಧ್ಯಕ್ಷರ ಸ್ಥಾನಕ್ಕೆ ಮೀನಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು.

ಸುರಗಹಳ್ಳಿ ವೀಣಾ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಗ್ರಾಮ ಪಂಚಾಯಿತಿ ಮುಂದೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.

ಬೆಟ್ಟದಪುರ ಹಾರಂಗಿ ಪುನರ್ವಸತಿ ಉಪ ವಿಭಾಗದ ಸಹಾಯಕ ಕಾರ್ಯಪಲಕ ಅಭಿಯಂತರ ಲೋಹಿತ್ ಚುನಾವಣೆ ಅಧಿಕಾರಿ ಕರ್ತವ್ಯ ನಿರ್ವಹಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಂಕರೆಗೌಡ ಮಾತನಾಡಿ ಈ ಈ ಹಿಂದೆ ಕಳೆದ ಎರಡು ವರ್ಷಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ನಡೆಸಿದರು. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ವೀಣಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೀನಾಕ್ಷಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಗ್ರಾಮ ಪಂಚಾಯತಿ ಸದಸ್ಯರಿಗೆ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕುಡಿಯುವ ನೀರು, ವಿದ್ಯುತ್ ದೀಪ, ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುಹೇಲ್ ಪಾಸಾ, ರಫೀಕ್ ಅಹ್ಮದ್, ನಜೀಬ್ ಖಾನ್, ವಸಂತ, ಪದ್ಮ, ನೂರ ಆಸ್ಮ, ಆರ್. ಟಿ.ವೆಂಕಟೇಶ್, ಸನೋಬಿಯ , ಸಂತೋಷ್, ಸಫೀರ ಅಹ್ಮದ್, ನಾಗಮ್ಮ, ಗೀತಾ, ಪುಟ್ಟಸ್ವಾಮಿಗೌಡ,, ವಸಂತ,ಸುರೇಶ್, ಕಾಂಗ್ರೆಸ್ ಮುಖಂಡರಾದ ನಪಿಜ್ ಖಾನ್, ಮಜರ್ ಪಾಸ, ಸಫಿವುಲ್ಲಾ ಅಬ್ದುಲ್ ಜಾವಿದ್, ಅಸ್ಲಾಂ ಪಾಸ, ಹೆಚ್ಎಸ್. ಬಾಬು ಹಾಜರಿದ್ದರು.

ಹುಣಸೂರು ಡಿವೈಎಸ್ಪಿ ಮಹೇಶ್, ಬೆಟ್ಟದಪುರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಪ್ರಕಾಶ್,ಠಾಣಾಧಿಕಾರಿ ಪ್ರಕಾಶ್ ಎಂ. ಎತ್ತಿನಮನಿ ಬಿಗಿ ಬಂದೋಬಸ್ತ್  ಏರ್ಪಡಿಸಿದ್ದರು.