ಅಕ್ಟೋಬರ್ 13ರಂದು ದಾಳಿಂಬೆ ಬೆಳೆ ಕಾರ್ಯಾಗಾರ ಮತ್ತು ಕ್ಷೇತ್ರೋತ್ಸವ

ವಿಜಯ ದರ್ಪಣ ನ್ಯೂಸ್

ಅಕ್ಟೋಬರ್ 13ರಂದು ದಾಳಿಂಬೆ ಬೆಳೆ ಕಾರ್ಯಾಗಾರ ಮತ್ತು ಕ್ಷೇತ್ರೋತ್ಸವ

ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 10 : ತೋಟಗಾರಿಕೆ ಇಲಾಖೆವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯ ಬಿಜ್ಜವಾರ ಗ್ರಾಮದ ರಾಮಕೃಷ್ಣಪ್ಪನವರ ಜಮೀನಿನಲ್ಲಿ (ಬಿಜ್ಜವಾರ ಫ್ರೌಢಶಾಲೆ ಹಿಂಭಾಗ) ದಿನಾಂಕ 13-10-2023 ರಂದು ಬೆಳಿಗ್ಗೆ 10.30 ಗಂಟೆಗೆ “ದಾಳಿಂಬೆ ಬೆಳೆ ಕಾರ್ಯಾಗಾರ ಮತ್ತು ಕ್ಷೇತ್ರೋತ್ಸವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ರೈತ ಫಲಾನುಭವಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳನ್ನು ಸಂಪರ್ಕಿಸುವುದು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ದೇವನಹಳ್ಳಿ- 9480461234. ಸಹಾಯಕ ತೋಟಗಾರಿಕೆ ಅಧಿಕಾರಿ ಕಸಬಾ- 7975888212, ಸಹಾಯಕ ತೋಟಗಾರಿಕೆ ಅಧಿಕಾರಿ ವಿಜಯಪುರ- 8722487173.
ಸಹಾಯಕ ತೋಟಗಾರಿಕೆ ಅಧಿಕಾರಿ ಚನ್ನರಾಯಪಟ್ಟಣ – 7259612750.
ಸಹಾಯಕ ತೋಟಗಾರಿಕೆ ಅಧಿಕಾರಿ ಕುಂದಾಣ- 8867413260 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕ ಜೆ.ಗುಣವಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

&&&&&&&&&&£££££££&&&&&&&&&

ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 10 : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ 2023-24ನೇ ಸಾಲಿಗೆ ಬುದ್ಧಿಮಾಂದ್ಯರು, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲತೆಗೆ ಒಳಗಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿಕಲಚೇತನರಿಗೆ “ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ” ಅರ್ಜಿ ಆಹ್ವಾನಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಬರುವ ತಾಲ್ಲೂಕು ಪಂಚಾಯತಿಯ ಎಂ.ಆರ್.ಡಬ್ಲ್ಯೂ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ವಿ.ಆರ್.ಡಬ್ಲ್ಯೂ ಹಾಗೂ ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಯು.ಆರ್.ಡಬ್ಲ್ಯೂ ಗಳಿಂದ ನಿಗಧಿತ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ 25ರ ಒಳಗಾಗಿ ಸಲ್ಲಿಸಲು ಕೋರಿದೆ.

ಬುದ್ಧಿಮಾಂದ್ಯರು, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲತೆಗೆ ಒಳಗಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿಕಲಚೇತನರಿಗೆ ನಿರಾಮಯ ಆರೋಗ್ಯ ವಿಮಾ ಯೋಜನೆಯ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳ ವಿವರ.

1. ಅರ್ಜಿಯೊಂದಿಗೆ ಎಲ್ಲಾ ದಾಖಲಾತಿಗಳ ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು.
2. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ) ಕಾರ್ಡ್.
3. ಆದಾಯ ಪ್ರಮಾಣ ಪತ್ರ (ರೂ 11.500 ಮಿತಿಗೊಳಪಟ್ಟು) ಬಿ.ಪಿ.ಎಲ್, ಪಡಿತರ ಕಾರ್ಡ್.
4. ವಾಸಸ್ಥಳ ಪ್ರಮಾಣ ಪತ್ರ (ಕನಿಷ್ಠ ಹಿಂದಿನ 10 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರುವ ಕುರಿತು ಸಂಬಂದಪಟ್ಟ ತಹಶೀಲ್ದಾರ ರವರಿಂದ ಪಡೆದಿರಬೇಕು).
5. ವಿಕಲಚೇತನ ವ್ಯಕ್ತಿಯ ಪೊಟೋ-1.
6. ಬ್ಯಾಂಕ್ ಪಾಸ್ ಪುಸ್ತಕ (ಅಂಚೆ ಕಛೇರಿ ಪಾಸ್ ಪುಸ್ತಕ ಹೊರತುಪಡಿಸಿ).
7. ಈಗಾಗಲೇ ಸದರಿ ಯೋಜನೆಯಡಿ ನೊಂದಾಯಿತರಲ್ಲದ ಬಗ್ಗೆ ದೃಢೀಕರಣ ಪತ್ರ.
8. ಫಲಾನುಭವಿಯ ಪಾಲಕರು/ಪೋಷಕರ ಹೆಸರು ಮತ್ತು ವಿಳಾಸ.
9. ಫಲಾನಿಭವಿಯ ವಿದ್ಯಾರ್ಹತೆ ಕುರಿತು ದೃಢೀಕರಣ (ಲಭ್ಯವಿದ್ದಲ್ಲಿ).
10. ನಿಗಧಿತ ಅರ್ಜಿ ನಮೂನೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಮಟ್ಟದ ವಿಕಲಚೇತನರ ನೋಡಲ್ ಅಧಿಕಾರಿಗಳನ್ನು ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಠಡಿ ಸಂಖ್ಯೆ-03 ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ ಕುಂದಾಣ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೂರವಾಣಿ ಸಂಖ್ಯೆ 080-29787441 ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ.ಎನ್.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.