ಮಡಿಕೇರಿ ದಸರಾ ಅಲಂಕಾರ ಸ್ಪರ್ಧೆಗಳಿಗೆ ಆಹ್ವಾನ

ವಿಜಯ ದರ್ಪಣ ನ್ಯೂಸ್

ಮಡಿಕೇರಿ ದಸರಾ ಅಲಂಕಾರ ಸ್ಪರ್ಧೆಗಳಿಗೆ ಆಹ್ವಾನ

ಮಡಿಕೇರಿ ಅಕ್ಟೋಬರ್ 12: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಸಂಪ್ರದಾಯಿಕವಾಗಿ ನಡೆಯುತ್ತಿದು ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ನವರಾತ್ರಿ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ

 

ಅಕ್ಟೋಬರ್ 15 ರಂದು ಕರಗ ಸಾಗುವ ರಸ್ತೆಯಲ್ಲಿ ರಂಗೋಲಿ ಸ್ಪರ್ಧೆ ಆಯೋಜಿತವಾಗಿದ್ದು ಚುಕ್ಕಿ,, ಪುಡಿ. ಎಳೆ.ಮತ್ತು ಪುಷ್ಪ ರಂಗೋಲಿ ವಿಭಾಗಗಳ ಸ್ಪರ್ಧೆಗಳು ಜರುಗಲಿದೆ.

ಅಕ್ಟೋಬರ್ 23 ರಂದು ಆಯುಧ ಪೂಜೆ ಅಂಗವಾಗಿ ಗಾಂಧಿ ಮೈದಾನದಲ್ಲಿ ವಾಹನ ಅಲಂಕಾರ ಸ್ಪರ್ಧೆ ಆಯೋಜಿತವಾಗಿದ್ದು. ಲಾರಿ. ಬಸ್.ಕಾರ್. ಸೈಕಲ್.ಬೈಕ್. ಆಟೋ. ಟಾಟಾಏಸ್. ಜೀಪ್. ಪಿಕ್ಅಪ್. ಜೆಸಿಬಿ ಹಾಗೂ ಇನ್ನಿತರ ವಾಹನ ಅಲಂಕಾರ ಸ್ಪರ್ಧೆ ಜರುಗಲಿದೆ.

ನವರಾತ್ರಿಯ ಪ್ರಯುಕ್ತ ಮಡಿಕೇರಿ ನಗರಾಲಂಕಾರ ಸ್ಪರ್ಧೆಯ ಅಂಗವಾಗಿ ನಗರದ ವಿವಿಧ ಕಟ್ಟಡಗಳ ಅಲಂಕಾರ ಸ್ಪರ್ಧೆ ಜರುಗಲಿದ್ದು

ನವರಾತ್ರಿಯ 9 ದಿನವೂ ಮಡಿಕೇರಿ ನಗರದ ದಶ ದೇವಾಲಯಗಳು. ಸರಕಾರಿ. ಅರೆ ಸರಕಾರಿ ಕಚೇರಿಗಳು. ವಿವಿಧ ಕಟ್ಟಡಗಳು. ಚಿನ್ನದ ಅಂಗಡಿ. ಬಟ್ಟೆ ಅಂಗಡಿ. ಬೇಕರಿ.ಹೋಟೆಲ್. ಬ್ಯಾಂಕ್. ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಟ್ಟಡಗಳು ಸಾಂಪ್ರಾದಾಯಕವಾಗಿ 9 ದಿನವೂ ಮಡಿಕೇರಿ ನಗರದ ಎಲ್ಲಾ ಮಳಿಗೆಗಳು ಹಾಗೂ ಕಟ್ಟಡಗಳು ನವರಾತ್ರಿಯ 9 ದಿನ ಕೂಡ ದೀಪಾಲಂಕಾರ ಮಾಡಬೇಕಾಗಿ ದಸರಾ ಅಲಂಕಾರ ಸಮಿತಿ ಸದಸ್ಯರ ಮನವಿ ಮಾಡಿದ್ದಾರೆ

ಈ ಬಾರಿ ನವರಾತ್ರಿಯ ಪ್ರಯುಕ್ತ ಮನೆಗಳಲ್ಲಿ ವಿವಿಧ ಬಗೆಯ ಗೊಂಬೆಗಳ ಜೋಡಣೆಯ ಅಲಂಕಾರ ಪ್ರದರ್ಶನ ಮಾಡುವವರಿಗೂ ಬಹುಮಾನ ನೀಡಲು ನಿರ್ಧರಿಸಲಾಗಿದೆ.

ಈ ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಿ ಕೊಳ್ಳುವವರು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಎಂದು ಅಲಂಕಾರ ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ
ಅಲಂಕಾರ ಸಮಿತಿ ಉಪಾಧ್ಯಕ್ಷ ರವಿಗೌಡ 9611101070.
ಸಂಘಟನಾ ಕಾರ್ಯದರ್ಶಿ ಪುನೀತ್ ಜಿ.ಎನ್ 7022685868
ಪ್ರಧಾನ ಸಲಹೆಗಾರರು ಪಿ.ಜಿ. ಮಂಜುನಾಥ್ 94490 92442
ಪ್ರಧಾನ ಕಾರ್ಯದರ್ಶಿ ಅರ್ಜುನ್ ರಾಜೇಂದ್ರ 9632948085