ಮಡಿಕೇರಿ ಮಹಿಳಾ ದಸರಾ – ಸ್ಥಧಿ೯ಗಳು ಸ್ಥಳದಲ್ಲಿಯೇ ಅಕ್ಟೋಬರ್ 22ರಂದು ಹೆಸರು ನೋಂದಾಯಿಕೊಳ್ಳಲು ಆಹ್ವಾನ..

ವಿಜಯ ದರ್ಪಣ ನ್ಯೂಸ್ 

ಮಡಿಕೇರಿ ಅ.15- ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಯೋಗದಲ್ಲಿ ಅಕ್ಟೋಬರ್ 22 ರಂದು ಭಾನುವಾರ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿರುವ ಮಹಿಳಾ ದಸರಾದ ವಿವಿಧ ಸ್ಪಧೆ೯ಗಳಿಗೆ ಸ್ಲಳದಲ್ಲಿಯೇ ಹೆಸರು ನೋಂದಾಯಿಸಬಹುದಾಗಿದೆ.

ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ಜಂಟಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಅ.22 ರಂದು ಬೆಳಗ್ಗೆ 10 ಗಂಟೆಯಿಂದಲೇ ನಗರದ ಗಾಂಧಿ ಮೈದಾನದಲ್ಲಿ 8ನೇ ವಷ೯ದ ಮಹಿಳಾ ದಸರಾವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ವಿವಿಧ ಸ್ಪಧೆ೯ಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ.

ಮಹಿಳಾ ದಸರಾ ಅಂಗವಾಗಿನ ಸ್ಪಧೆ೯ಗಳ ವಿವರ ಇಂತಿದೆ.

ಎಥ್ ನಿಕ್ ಫ್ಯಾಷನ್ ಶೋ 20 ರಿಂದ 30 ವಯೋಮಾನದವರಿಗೆ, ಹಾಗೂ31 ರಿಂದ 55 ವಷ೯ ವಯೋಮಿತಿಯ ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆ ಸ್ಪಧೆ೯. ( ಕನಾ೯ಟಕದ ವಿವಿಧ ಉಡುಗೆಗಳಿಗೆ ಆದ್ಯತೆ . ಉಡುಗೆ, ಆಭರಣ, ವಸ್ತ್ರ, ನಡುಗೆ, ಕೇಶ ವಿನ್ಯಾಸ, ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.) ಈ ಸ್ಪಧೆ೯ ವೈಯಕ್ತಿಕ ವಿಭಾಗದಲ್ಲಿ ಆಯೋಜಿಸಲ್ಪಟ್ಟಿದೆ.

ಗಾರ್ಭಾ ನೃತ್ಯ ಸ್ಪಧೆ೯ – 20 ರಿಂದ 30 ವಷ೯ದ ಮಹಿಳೆಯರಿಗಾಗಿ .

30 ರಿಂದ 40 ವರ್ಷ ವಯೋಮಿತಿ ಮಹಿಳೆಯರಿಗೆ-

100 ಮೀಟರ್ ಓಟದ ಸ್ಪರ್ಧೆ , ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ , (ವೈಯಕ್ತಿಕ ) ಹಾಗೂ ಹಗ್ಗ ಜಗ್ಗಾಟ, (ಒಂದು ಗುಂಪಿನಲ್ಲಿ 10 ಜನ ಇರಬೇಕು),

40 ರಿಂದ 50 ವರ್ಷ ವಯೋಮಿತಿ ಮಹಿಳೆಯರಿಗೆ –
100 ಮೀಟರ್ ಓಟದ ಸ್ಪರ್ಧೆ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯುವುದು., ಬಕೆಟ್ ಗೆ ಚೆಂಡನ್ನು ಹಾಕುವುದು.

50 ರಿಂದ 60 ವರ್ಷ ವಯೋಮಿತಿ ಮಹಿಳೆಯರಿಗೆ –
ಬಕೆಟ್ ಗೆ ಚಂಡು ಹಾಕುವ ಸ್ಪಧೆ೯, ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು

60 ರಿಂದ 70 ವರ್ಷ ವಯೋಮಿತಿ ಮಹಿಳೆಯರಿಗೆ –
ನಿಧಾನವಾಗಿ ನಡೆಯುವುದು. ಸೂಜಿಗೆ ನೂಲನ್ನು ಹಾಕುವುದು. ಬಾಂಬ್ ಇನ್ ಸಿಟಿ,

70 ರಿಂದ 80 ವರ್ಷ ವಯೋಮಿತಿ ಮಹಿಳೆಯರಿಗೆ –
ಸೂಜಿಗೆ ನೂಲನ್ನು ಹಾಕುವುದು, ಚೆಂಡನ್ನು ವರ್ಗಾಯಿಸುವುದು, ನಿಧಾನವಾಗಿ ನಡೆಯುವುದು .

ವೇದಿಕೆ ಮೇಲೆ ನಡೆಯುವ ಇತರ ಸ್ಪಧೆ೯ಗಳು –
ಎಲ್ಲಾ ವಯಸ್ಸಿನ ಮಹಿಳೆಯರಿಗಾಗಿ ಮೆಹೆಂದಿ ಹಾಕುವುದು, ಸೀರೆಯ ನಿಖರವಾದ ಬೆಲೆ ಹೇಳುವುದು, ಮತ್ತು ವಾಲಗ ಕುಣಿತ.

ಮಹಿಳಾ ದಸರಾ ಅಂಗವಾಗಿನ ಸ್ಪಧೆ೯ಗಳಿಗೆ ಅ.22 ರಂದು ಭಾನುವಾರ ಬೆಳಗ್ಗೆ 10 ಗಂಟೆಯೊಳಗಾಗಿ ಸ್ಪಧೆ೯ಗಳು ನಡೆಯುವ ಮಡಿಕೇರಿ ಗಾಂಧಿ ಮೈದಾನದ ಸ್ಪಧಾ೯ ಸ್ಥಳದಲ್ಲಿಯೇ ಸ್ಪಧಿ೯ಗಳು ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಹಿಳಾ ದಸರಾ ಸಂಬಂಧಿತ ಹೆಚ್ಚಿನ ಮಾಹಿತಿಗೆ ಸಂಪಕ೯ ಸಂಖ್ಯೆಗಳು – 9535898352, 8310891269, 7760840754