ಮಡಿಕೇರಿಯಲ್ಲಿ ಅಮೃತ ಕಳಸ ಯಾತ್ರೆ

ವಿಜಯ ದರ್ಪಣ ನ್ಯೂಸ್ 

ಮಡಿಕೇರಿ :ಭಾರತ ಸರ್ಕಾರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ ಜಿಲ್ಲಾ ಆಡಳಿತ .ಜಿಲ್ಲಾ ಪಂಚಾಯತ್ ಕೊಡಗು ನೆಹರು ಯುವಕೇಂದ್ರ ಕೊಡಗು ಮಡಿಕೇರಿ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು. ಹಾಗೂ ಕೊಡಗು ಜಿಲ್ಲಾ ಯುವ ಒಕ್ಕೂಟ ಕೊಡಗು.ಮಡಿಕೇರಿ ಮತ್ತುತಾಲೋಕು ಯುವ ಒಕ್ಕೂಟ ಮಡಿಕೇರಿ.ಹಾಗೂ ಫೀಲ್ಡ್ ಮಾರ್ಷಲ್ ಕೆ. ಎಂ ಕಾಲೇಜು ಮಡಿಕೇರಿ ರಾಷ್ಟ್ರಿಯ ಸೇವಾ ಯೋಜನಾ ಘಟಕ ಇವರ ಅಶ್ರಯದಲ್ಲಿ ಮಣ್ಣು ,ನನ್ನ ದೇಶ ಅಭಿಯಾನವನ್ನು ಆಯೋಜಿಸಲಾಗಿತ್ತು.

ಮಡಿಕೇರಿ ತಾಲ್ಲೂಕು ಮಟ್ಟದ ಅಮೃತ ಕಳಸ ಯಾತ್ರೆಯಲ್ಲಿ ಕಾಲೇಜ್ ವಿದ್ಯಾರ್ಥಿಗಳು. ಉಪನ್ಯಾಸಕ ವೃಂದ ಹಾಗೂ ಗ್ರಾಮಸ್ಥರು ತಾಲೋಕು ಯುವ ಒಕ್ಕೂಟದವರು ಮನೆಮನೆಗೆ ತೆರಳಿ ಮಣ್ಣನ್ನು ಸಂಗ್ರಹಿಸಿದರು. ಜೊತೆಗೆ ಗಣ್ಯರು ,ವಿದ್ಯಾರ್ಥಿಗಳು ,ಬೋಧಕರು ಮತ್ತು ಬೋಧಕೇತರವೃಂದದವರು ಅಮೃತ ಕಳಸಕ್ಕೆ ಮಣ್ಣನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮ ಪದ್ಮ ಶ್ರೀ ಪ್ರಶಸ್ತಿ ಪುರಸ್ಕಾರ ಪಡೆದ ಶ್ರೀಮತಿ ರಾಣಿ ಮಾಚಯ್ಯ ನವರು ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ಅಮೃತ ಕಳಸದಲ್ಲಿ ಸಂಗ್ರಹಿಸಿದ ಮಣ್ಣನ್ನು ಜಿಲ್ಲಾ ಯುವ ಒಕ್ಕೂಟ ಮುಕಾಂತರ ನೆಹರು ಯುವ ಕೇಂದ್ರ ಕ್ಕೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮ ನೇತೃತ್ವ ವಹಿಸಿದ ಜಿಲ್ಲಾ ಯುವ ಒಕ್ಕೂಟ ಕೊಡಗು ಒಕ್ಕೂಟದ ಅಧ್ಯಕ್ಷ  ಪಿ ಪಿ ಸುಕುಮಾರ್ ಕಾರ್ಯಕ್ರಮ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ಸ್ವತಂತ್ರ್ಯ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಹುತಾತ್ಮ ಯೋಧರ ಸ್ಮಾರಕದ ಆವರಣದಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಕುರಿತು ಕಾರ್ಯಕಲ್ಪವನ್ನು ರೂಪಿಸಿದು ಭಾರತದ ಪ್ರತಿಮನೆಮನೆಯಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಯ ಹುತಾತ್ಮರ ಸ್ಮಾರಕದ ಉದ್ಯಾನವನಕ್ಕೆ ರವಾನಿಸಲಾಗುತ್ತದೆ.ಅಲ್ಲಿ ಔಷಧಿಯ ಗಿಡ ನೆಡಲಾಗುವುದು.

ಆದುದರಿಂದ ಈ ಕಾರ್ಯಕ್ರಮವು ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡುವ ಕಾರ್ಯಕ್ರಮವಾಗಿದ್ದು ಸಂಗ್ರಹ ವಾದ ಮಣ್ಣನ್ನು ಜಿಲ್ಲಾ ಯುವ ಒಕ್ಕೂಟ ಮುಖoತರ ನೆಹರು ಯುವ ಕೇಂದ್ರ ಮೂಲಕ ದೆಹಲಿಯಲ್ಲಿ ನಡೆಯುವ ಅಮೃತ ಕಳಸ ಯಾತ್ರೆ ಗೆ ತೆರಳುವ ಜಿಲ್ಲೆಯಿಂದ ರಾಯಭಾರಿಗಳ ಮೂಲಕ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ದೇಶದ ಐಕ್ಯತೆಯ ಧ್ಯೋತಕವಾದ ಪ್ರತಿಜ್ಞಾ ವಿಧಿಯನ್ನು ಬೊದಿಸಲಾಯಿತು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ರಾಷ್ಟ್ರಿಯ ಸೇವಾ ಯೋಜನಾ ಘಟಕದ ಶ್ರೀಮತಿ ಗಾಯತ್ರಿ ಹಾಗೂ ತಾಲೋಕು ಯುವ ಒಕ್ಕೂಟ ಅಧ್ಯಕ್ಷ ಬಾಳಡಿ ದಿಲೀಪ್ ಕುಮಾರ್ ಖಜಾಂಚಿ ಕೆ. ಎಂ ಮೋಹನ್ .ಬೋಧಕ ,ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿವೃಂದದವರು ಹಾಗೂ ನೆಹರು ಯುವ ಕೇಂದ್ರ ದ ಕಚೇರಿ ಸಿಬ್ಬಂದಿ ದೀಪ್ತಿ ಹಾಗೂ ಸ್ವಯಂ ಸೇವಕರಾದ ರಂಜಿತಾ,ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಿಬಂದಿಗಳಾದ ಕವಿತ,ಮಮತಾ, ಸ್ವಾತಿ, ಉಪಸ್ಥಿತರಿದ್ದರು. ಇದೆ ಸಂದರ್ಭ ವಿದ್ಯಾರ್ಥಿಗಳಿoದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಅಮೃತ ಕಳಸ ಯಾತ್ರೆ

ದೇಶದ ಪ್ರತಿ ಮನೆಯಿಂದ ಅಮೃತ ಕಳಸದಲ್ಲಿ ಮಣ್ಣು ಮತ್ತು ಅಕ್ಕಿಯನ್ನು ಸಂಗ್ರಹಿಸಲಾಗುತ್ತಿದ್ದು , ಇದರಿಂದ ಅಮೃತ ವಾಟಿಕ ಮತ್ತು ಆಜಾದಿ ಅಮೃತ ಮಹೋತ್ಸವ ಸ್ಮಾರಕವನ್ನು ಕರ್ತವ್ಯ ಪಥ್ ಗೇಟ್ ನಲ್ಲಿ ಸ್ಥಾಪಿಸಲಾಗುವುದು.

.. ಶ್ರೀಧರ್ ನೆಲ್ಲಿತ್ತಾಯ