ಮಂಡಿಬೆಲೆ ಎಂ ಪಿ ಸಿ ಎಸ್ ಅಧ್ಯಕ್ಷರಾಗಿ ಎಸ್ ಶಿವಣ್ಣ ಉಪಾಧ್ಯಕ್ಷರಾಗಿ ಕೆ ತಮ್ಮಣ್ಣ ಆಯ್ಕೆ.

ವಿಜಯ ದರ್ಪಣ ನ್ಯೂಸ್ 

ಮಂಡಿಬೆಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್ ಶಿವಣ್ಣ ಉಪಾಧ್ಯಕ್ಷರಾಗಿ ಕೆ ತಮ್ಮಣ್ಣ ಅವಿರೋಧವಾಗಿ ಆಯ್ಕೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು, ಮಂಡಿಬೆಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ  ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಎಸ್ ಶಿವಣ್ಣ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೆ. ತಮ್ಮಣ್ಣ ಇಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದರು. ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರು ಸಹ ನಾಮಪತ್ರಗಳನ್ನು ಸಲ್ಲಿಸಿರುವುದಿಲ್ಲ.

ನಾಮಪತ್ರಗಳನ್ನು ಪರಿಶೀಲಿಸಿದ ರಿಟರ್ನಿಂಗ್ ಆಫೀಸರ್ ನಾಗಭೂಷಣ್ ಎಂ ರವರು ಅಧ್ಯಕ್ಷರಾಗಿ ಎಸ್ ಶಿವಣ್ಣ ಮತ್ತು ಉಪಾಧ್ಯಕ್ಷರಾಗಿ ಕೆ ತಮ್ಮಣ್ಣ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಎಸ್ ಶಿವಣ್ಣನವರು ಮಾತನಾಡುತ್ತಾ ಮಂಡಿಬೆಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಮತ್ತು ಹಾಲು ಉತ್ಪಾದಕರಿಗೆ ಬೆಂಗಳೂರು ಸಹಕಾರಿ ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುವುದಾಗಿ ತಿಳಿಸಿದರು ಹಾಗೇ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ಆಡಳಿತ ಮಂಡಳಿಯ ಸದಸ್ಯರಿಗೆ ಅಭಿನಂದನೆಗಳನ್ನ ತಿಳಿಸಿದರು ‌

ಚುನಾವಣಾ ಪ್ರಕ್ರಿಯೆಯಲ್ಲಿ ಮಂಡಿಬೆಲೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರಾದ ಎನ್ ವಿಜಯಕುಮಾರ್, ವಿ ನಾರಾಯಣ ರೆಡ್ಡಿ, ಎಂ ರಾಮಕೃಷ್ಣಪ್ಪ, ಎಂ ಮಾರಪ್ಪ, ಡಿ ರೆಡ್ಡಿ ಕುಮಾರ್, ಎನ್ ನವೀನ್ ಕುಮಾರ್, ಮುನಿ ಚಿನ್ನಪ್ಪ, ಶ್ರೀಮತಿ ದೇವಮ್ಮ, ಶ್ರೀಮತಿ ರತ್ನಮ್ಮ, ಶ್ರೀಮತಿ ಲಕ್ಷ್ಮೀದೇವಮ್ಮ ಇವರುಗಳು ಭಾಗವಹಿಸಿದ್ದರು.