ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕಮಾಂಡರ್ ಆಗಿ ಪುಣ್ಯಪೊನ್ನಮ್ಮ ಆಯ್ಕೆ.

ವಿಜಯ ದರ್ಪಣ ನ್ಯೂಸ್

ಜನವರಿ 23: ಮಡಿಕೇರಿಯ ಪುಣ್ಯ ಪೊನ್ನಮ್ಮ ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪೆರೆಡ್ ನಲ್ಲಿ ಎನ್‌.ಸಿ.ಸಿ.ಯ ಅಖಿಲ ಭಾರತ ಯುವತಿಯರ ವಿಭಾಗದ ಕಮಾಂಡರ್ ಆಗಿ ಪಾಲ್ಗೊಳ್ಳುತ್ತಿದ್ದಾಳೆ.

ಪುಣ್ಯ ಪೊನ್ನಮ್ಮ ಮಡಿಕೇರಿಯ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ ಮಾದಪ್ಪ ಮತ್ತು ಫೀಲ್ಡ್ ಕಾರ್ಯಪ್ಪ ಕಾಲೇಜು ಉಪನ್ಯಾಸಕಿ ವಿನಿತ ದೇಚಮ್ಮ ದಂಪತಿಯ ಪುತ್ರಿಯಾಗಿದ್ದಾಳೆ.

ಎನ್‌ಸಿಸಿ ಕೆಡೆಟ್ ಆಗಿ ಹಲವಾರು ಕ್ಯಾಂಪ್ ಗಳಲ್ಲಿ ಪಾಲ್ಗೊಂಡು ಅತ್ಯುತ್ತಮ ಸಾಧನೆ ತೋರಿದ್ದಾಳೆ. ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಮೂರನೇ ವರ್ಷದ ಲಾ ಶಿಕ್ಷಣ ಪಡೆಯುತ್ತಿದ್ದಾಳೆ.