ಸ್ವಚ್ಛ ಗಂಗಾ ಯೋಜನೆ

ವಿಜಯ ದರ್ಪಣ ನ್ಯೂಸ್

ಸ್ವಚ್ಛ ಗಂಗಾ ಯೋಜನೆ

ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ:- ನಿಮ್ಮ ಆರೋಗ್ಯ ನಿಮ್ಮ ಅಂಗೈಯಲ್ಲಿ ಎಂಬ ನಾಣ್ಣೂಡಿಯಂತೆ ಕಲ್ಯಾಣಿ ಗಳನ್ನು ಸ್ವಚ್ಛಗೊಳಿಸಿದರೆ ಪರಿಸರ ಚೆನ್ನಾಗಿರುತ್ತದೆ. ಕಲ್ಯಾಣಿಯಲ್ಲಿ ಕಸಗಳನ್ನು ಹಾಕಬಾರದು. ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರೆ ನಮ್ಮ ಆರೋಗ್ಯವು ತುಂಬಾ ಚೆನ್ನಾಗಿರುತ್ತದೆ ಎಂದು ಪುರಸಭಾ ಆರೋಗ್ಯ ಅಧಿಕಾರಿ ಲಾವಣ್ಯ ರವರು ತಿಳಿಸಿದರು.

ಅವರು ವಿಜಯಪುರ ಪಟ್ಟಣದಲ್ಲಿರುವ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಜೇ ಸಿ ಐ ಶ್ರೀ ಓಂಕಾರೇಶ್ವರ ಭಕ್ತ ಮಂಡಳಿ ಪುರಸಭಾ ಕಾರ್ಯಾಲಯ ವತಿಯಿಂದ ಸ್ವಚ್ಛ ಯೋಜನೆಯಾಡಿಯಲ್ಲಿ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರು ಜೇಸಿಐ ಅಧ್ಯಕ್ಷ ಬೈರೇಗೌಡ ಮಾತನಾಡುತ್ತಾ ಇದು ಕಾಡು ಪ್ರದೇಶವಾಗಿತ್ತು . ದೇವಾಲಯಕ್ಕೆ ಬಂದವರಿಗೆ ಮೂಲಭೂತ ಸೌಕರ್ಯ ಇರಲಿಲ್ಲ ಅದನ್ನರಿತ್ತ ಗುರಪ್ಪ ಸ್ವಾಮಿಗಳು ಕಲ್ಯಾಣಿಯನ್ನು ನಿರ್ಮಿಸಿದ ಬಗ್ಗೆ ಪುರಾಣದಿಂದ ತಿಳಿಯುತ್ತದೆ. ವಿಜಯಪುರ ಪಟ್ಟಣ ದಲ್ಲಿಯೇ ಮೊದಲ ಕಲ್ಯಾಣಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷ ಕೆ ವೆಂಕಟೇಶ್ ಮಾತನಾಡುತ್ತಾ ಊರಿಗೊಂದು ಕೆರೆ ಇದ್ದರೆ ಪ್ರಾಣಿ ಪಕ್ಷಿಗಳಿಗೂ ಸುಂದರವಾದ ಪರಿಸರಕ್ಕೂ ಅನುಕೂಲವಾಗುತ್ತದೆ . ಕೆರೆಯನ್ನು ಸ್ವಚ್ಛವಾಗಿದ್ದರೆ ಆರೋಗ್ಯವು ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪುರಸಭಾ ಆರೋಗ್ಯಾಧಿಕಾರಿ  ಲಾವಣ್ಯ ಪುರಸಭಾ ಸದಸ್ಯ ನಂದಕುಮಾರ್ ಮುನಿರಾಜು ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿದರು.

 ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಎಂ ಶಿವಕುಮಾರ್ ರಾಷ್ಟ್ರೀಯ ಸಂಯೋಜಕ ಜಯರಾಮ್ ನಿಕಟ ಪೂರ್ವ ಅಧ್ಯಕ್ಷ ವಿ ವೆಂಕಟೇಶ್ ಜೇಸಿ ಐ ವಲಯ 14ರ ಕಾರ್ಯಕ್ರಮಗಳ ಅನುಷ್ಠಾನ ನಿರ್ದೇಶಕ ಎನ್ ಸಿ ಮುನಿವೆಂಕಟರಮಣ ಗೌರವ ಕಾರ್ಯದರ್ಶಿ ಚಿದಾನಂದಮೂರ್ತಿ ಸಂಘಟನಾ ಕಾರ್ಯದರ್ಶಿ ವಿ ಆನಂದ್ ಶ್ರೀ ಓಂಕಾರೇಶ್ವರ ಭಕ್ತ ಮಂಡಳಿ ಅಧ್ಯಕ್ಷ ಬಚ್ಚೇಗೌಡ ಪುರಸಭಾ ಸದಸ್ಯ ನಂದಕುಮಾರ್ ಸಮಾಜ ಸೇವಕರಾದ ಮುನಿರಾಜು ಮಾಜಿ ಕಾರ್ಯದರ್ಶಿ ಸೀನಿಯರ್ ವಸಂತಕುಮಾರ್ ತಿಗ ಪತ್ರಕರ್ತ ಜೆಆರ್ ಮುನಿವೀರಣ್ಣ ಮಾರ್ಕೆಟ್ ವೆಂಕಟೇಶ್ ರವರು ಉಪಸ್ಥಿತರಿದ್ದರು.