ಶಾಲಾ ಮಕ್ಕಳಿಂದ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕ ಪ್ರದರ್ಶನ

ವಿಜಯ ದರ್ಪಣ ನ್ಯೂಸ್…

ಶಾಲಾಮಕ್ಕಳಿಂದ ಶ್ರೀ ಕೃಷ್ಣ ಸಂಧಾನ  ಪೌರಾಣಿಕ ನಾಟಕ ಪ್ರದರ್ಶನ

 ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  ಮೇ: ಪೌರಾಣಿಕ ಕನ್ನಡ ನಾಟಕವನ್ನು ಮಕ್ಕಳು ಪ್ರದರ್ಶಿಸಿರುವುದು ರಾಜ್ಯದಲ್ಲಿ ಮೊದಲನೆಯದು ಎಂದು ಭಾವಿಸುತ್ತಾ ಮಕ್ಕಳು ರಂಗಭೂಮಿ ಕಲೆ ಬಗ್ಗೆ ಎಷ್ಟು ಆಸಕ್ತಿ ವಹಿಸುತ್ತಿರೋ ಓದಿನ ಕಡೆ ಅಷ್ಟೇ ಆಸಕ್ತಿ ವಹಿಸಬೇಕೆಂದು ಕರೆ ನೀಡುತ್ತಾ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶಿಸಲು ಅನುವು ಮಾಡಿಕೊಡುತ್ತೇವೆ ಎಂದು ಜಿಲ್ಲಾ ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ ತಿಳಿಸಿದರು

 

ವಿಜಯಪುರ ಗ್ರಾಮದೇವತೆ ಗಂಗಾ ತಾಯಿ ಅಮ್ಮನವರ 54ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಶಾರದಾ ಕೃಪಾಪೋಷಿತ ನಾಟಕ ಮಂಡಳಿಯ ವತಿಯಿಂದ ಗಂಗಾಮತಸ್ಥರ ಸಂಘದ ಆಶ್ರಯದಲ್ಲಿ ರಂಗ ಕಲಾವಿದ ದಿವಂಗತ ಎಂ ರಾಮಕೃಷ್ಣಪ್ಪನವರ ವೇದಿಕೆಯಲ್ಲಿ ಶಾಲಾ ಮಕ್ಕಳಿಂದ *ಶ್ರೀಕೃಷ್ಣ ಸಂಧಾನ * ಪೌರಾಣಿಕ ನಾಟಕವನ್ನು ಸಂಗೀತ ನಿರ್ದೇಶಕ ಎಂ ವಿ ನಾಯ್ಡು ರವರ ನಿರ್ದೇಶನದಲ್ಲಿ ಏರ್ಪಡಿಸಲಾಗಿತ್ತು.

ಪುರಸಭಾ ಸದಸ್ಯ ನಂದಕುಮಾರ್ ಮಾತನಾಡುತ್ತಾ ಶಾಲಾ ಮಕ್ಕಳಿಗೆ ಬೋಧನ ಜೊತೆಗೆ ರಂಗಭೂಮಿಯ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಿಲು ಹೆಚ್ಚಿನ ತರಬೇತಿ ನೀಡಬೇಕೆಂದು ಕರೆ ನೀಡಿದರು.

ವಿಜಯಪುರ ಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ.ಎನ್. ಶ್ರೀನಿವಾಸ್ ಮಾತನಾಡುತ್ತಾ ನಮ್ಮ ಹಿಂದೂ ಧರ್ಮದಲ್ಲಿ ಭಗವದ್ಗೀತೆ ಮುಖ್ಯವಾಗಿದ್ದೀಯೋ ಅದೇ ರೀತಿ ರಂಗಭೂಮಿಯ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಹಡಪದ್ ರವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹಿರಿಯ ಕಲಾವಿದರು ಮುಖ್ಯ ಶಿಕ್ಷಕ ಎ.ಎಂ.ನಾರಾಯಣಸ್ವಾಮಿ ಮತ್ತು ಸಂಗೀತ ನಿರ್ದೇಶಕ ಎಂ ವಿ ನಾಯ್ಡು ವಿಜಯಪುರದ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಲ್ಲಿ  ಶಿಕ್ಷಕರಾಗಿ ಜೊತೆಗೆ  ಮಕ್ಕಳಿಂದ 12 ಉತ್ತಮ ನಾಟಕ ಪ್ರದರ್ಶನ ಮಾಡಿಸಿ  ಮಕ್ಕಳಲ್ಲಿ ದೈವ ಸ್ವರೂಪವನ್ನು ಕಾಣಲು ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು

ಮುಖ್ಯ ಅತಿಥಿಗಳಾಗಿ ಶ್ರೀ ಸುಬ್ರಹ್ಮಣ್ಯ ಕೆ ಆಚಾರ್ಯ ಶ್ರೀ ಕೃಷ್ಣ ಸತ್ಸಂಗ ಸೇವಾ ಸಮಿತಿ ಗೌರವಾಧ್ಯಕ್ಷ ಜೆ ಎಸ್ ರಾಮಚಂದ್ರಪ್ಪ ಎಂ ರಾಜಣ್ಣ ಶ್ರೀಮತಿ ತಾಜುನ್ನೀಸಾ ಮೆಹಬೂಬ್ ಪಾಷಾ ಕರ್ನಾಟಕ ರಾಜ್ಯ ಗಂಗಾದೇವಿ ಮತಸ್ಥರ ಸಂಘದ ಸಂಘಟನಾ ಕಾರ್ಯದರ್ಶಿ ಎನ್ ಮುನಿರಾಜು ಶ್ರೀ ರೇಣುಕಾ ಎಲ್ಲಮ್ಮ ದೇವಾಲಯ ಸಮಿತಿಯ ಗೌರವ ಕಾರ್ಯದರ್ಶಿ ಡಿ.ಆರ್ ಚನ್ನಕೃಷ್ಣಧಾರ್ಮಿಕ ಚಿಂತಕ ಡಿಎಂ ಮುನಿಯಪ್ಪ, ಎಂಎಸ್ ವುಡ್ ಅಂಡ್ ಬೇವರೇಜಸ್ ಮಾಲೀಕ ಮಧು ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಾಲಯ ಸಮಿತಿ ಉಪಾಧ್ಯಕ್ಷ ಜಿ ಸುರೇಶ್ ನಿರ್ದೇಶಕ ಎಂ. ಮಂಜುನಾಥ್ ಎಂ ನಾಗರಾಜ್ ಶಿಕ್ಷಕ ಪಿ ಪ್ರಕಾಶ್ ಆರ್ ಬೈರೇಗೌಡ ಬಿಎಂ ಗೀತಾ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷ ಮೋಹನ್ ಬಾಬು ಅಧ್ಯಕ್ಷ ನಾರಾಯಣಸ್ವಾಮಿ ಕಾರ್ಯಾಧ್ಯಕ್ಷ ಆಂಜನಪ್ಪ ಕಾರ್ಯದರ್ಶಿ ಸಿದ್ದಪ್ಪ ಪವನ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.