--Ads--

ಭೂಮಾಪಕ ಎಚ್.ಸಿ.ಚಂದ್ರಶೇಖರ್ ಮೂರ್ತಿ ಅಮಾನತು 

On: February 9, 2026 5:09 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಭೂಮಾಪಕ ಎಚ್.ಸಿ.ಚಂದ್ರಶೇಖರ್ ಮೂರ್ತಿ ಅಮಾನತು

ಶಿಡ್ಲಘಟ್ಟ : ಹೈಟೆಕ್‌ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾ ಣಕ್ಕೆಂದು ಗುರುತಿಸಿದ್ದ ಜಾಗದ ಬಳಿ ಹಿಡು ವಳಿದಾರರೊಬ್ಬರಿಗೆ ಅನುಕೂಲ ಆಗುವಂತೆ ಕಾನೂನು ಬಾಹಿರವಾಗಿ ಹದ್ದುಬಸ್ತು ಅಳತೆ ಕಾರ್ಯ ಮಾಡಿದ ಭೂಮಾಪಕ ಎಚ್.ಸಿ.ಚಂದ್ರಶೇಖರ್ ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.

ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಬಳಿ ಸುಮಾರು 180 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆಂದು ಗುರುತಿಸಿರುವ ಜಾಗದ ಬಳಿ ಸರ್ವೆ ನಂ.178ರ ಹಿಡುವಳಿದಾರಿಗೆ ಅನುಕೂಲವಾಗುವಂತೆ ಕಾನೂನುಬಾಹಿರವಾಗಿ ಚಂದ್ರ ಶೇಖರ್‌ಮೂರ್ತಿ ಹದ್ದು ಬಸ್ತು ಅಳತೆ ಕಾಯಮಾಡಿದ್ದು, ಇಲಾಖೆ ವಿಚಾರಣೆ ಕಾಯ್ದಿರಿಸಿ ಚಂದ್ರಶೇಖರ್ ಮೂರ್ತಿಯನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಜಿ.ಪ್ರಭು ಆದೇಶಿಸಿದ್ದಾರೆ.

ಹನುಮಂತಪುರ ಗ್ರಾಮದ ಸ.ನಂ.181ರಲ್ಲಿ ಹೈಟೆಕ್ ರೇಷ್ಮೆಗೂಡು ಮಾರು ಕಟ್ಟೆ ನಿರ್ಮಾಣಕ್ಕಾಗಿ 13 ಎಕರೆ ಜಮೀನನ್ನು ಮಂಜೂರು ಮಾಡಲು ಅಳತೆ ಮಾಡಿ ಗಡಿ ಗುರುತಿಸಲಾಗಿದೆ,ಈ ಜಾಗಕ್ಕೆ ಹೊಂದಿಕೊಂಡಂತಿರುವ ಸ.ನಂ.178 ರಲ್ಲಿ ಹಿಡುವಳಿದಾರರೊಬ್ಬರು ಅನಧಿಕೃತ ವಾಗಿ ಷೆಡ್ ನಿರ್ಮಿಸಿದ್ದು ಅವರಿಗೆ ಅನು ಕೂಲವಾಗುವಂತೆ ಕಾನೂನು ಮೀರಿ ಹದ್ದುಬಸ್ತು ಅಳತೆ ಕೆಲಸ ನಿರ್ವಹಿಸಿದ್ದರು.

ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗುವಂತೆ ನಡೆದುಕೊಂಡಿದ್ದ ಬಗ್ಗೆ ವರದಿ ಬಂದ ಹಿನ್ನೆಲೆಯಲ್ಲಿ ಡಿಸಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಅಧಿಕಾರ ವ್ಯಾಪ್ತಿ ಮೀರಿ ಅನಧಿಕೃತವಾಗಿ ಹದ್ದುಬಸ್ತು ಅಳತೆ ಕೆಲಸ ನಿರ್ವಹಿಸಿರುವ ಚಂದ್ರಶೇಖರ್ ಮೂರ್ತಿ ವಿರುದ್ಧ ಶಿಡ್ಲಘಟ್ಟ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಜಿಲ್ಲಾಧಿಕಾಳಿಗೆ ವರದಿ ಸಲ್ಲಿಸಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರೋಗಿಗಳಿಗೆ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಣೆ ಮಾಡಿದ  ಪೂಲಕುಂಟಲಹಳ್ಳಿ ರಘುನಾಥರೆಡ್ಡಿ 

ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ: ಪಾಳುಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಣೆ

ರಾಜ್ಯದಲ್ಲಿ ಕರವೇ ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ : ಕರವೇ ಅಧ್ಯಕ್ಷ ಮುನಿರಾಜ್(ಕುಟ್ಟಿ)

ಬೆಸ್ಕಾಂ ಖಾಸಗೀಕರಣಕ್ಕೆ ನೌಕರರು ,ಗುತ್ತಿಗೆದಾರರಿಂದ ವಿರೋಧ !

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು 3 ವರ್ಷ ಮುಗಿದಿದೆ ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡರ ಕೊಡುಗೆ ಏನು :  ಪೂಲಕುಂಟಲಹಳ್ಳಿ ರಘುನಾಥ್ ರೆಡ್ಡಿ

ರೈತರಿಗೆ ಹನಿ ನೀರಾವರಿ ಹಾಗು ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡಬೇಕು :  ಹಿತ್ತಲಹಳ್ಳಿ ಗೋಪಾಲಗೌಡ ಒತ್ತಾಯ