ಬಸವರಾಜ ಪಾದಯಾತ್ರಿ ಅವರನ್ನು ಮೇಲ್ಮನೆಗೆ ಶಿಫಾರಸ್ಸು ಮಾಡಲು ಎಚ್ ಡಿ ದೇವೇಗೌಡರಲ್ಲಿ ಮನವಿ: ಜೆಡಿಎಸ್ ಮುಖಂಡ ಸಮಿ ಶರೀಫ್

ವಿಜಯ ದರ್ಪಣ ನ್ಯೂಸ್…

ಚಾಮರಾಜನಗರ ಮೇ 27: ಮುಂಬರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ  ಕರ್ನಾಟಕ ರಾಜ್ಯ ಜೆಡಿಎಸ್ ಪಕ್ಷದ ಸೇವಾದಳದ ರಾಜ್ಯ ಅಧ್ಯಕ್ಷ ಬಸವರಾಜ ಪಾದಯಾತ್ರಿ ಅವರನ್ನು ಈ ಬಾರಿ ವಿಧಾನ ಪರಿಷತ್ತಿಗೆ ಕಳಿಸಬೇಕೆಂದು ಚಾಮರಾಜನಗರ ಜಿಲ್ಲಾ ಜೆಡಿಎಸ್ ಮುಖಂಡ, ಸಾಮಾಜಿಕ ಜಾಲತಾಣದ ಸಮಿ ಶರೀಫ್ ರವರು  ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರಲ್ಲಿ  ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ  ಅವರಲ್ಲಿ ಮನವಿ ಮಾಡಿದ್ದಾರೆ.

ಅವರು ಬಸವರಾಜ ಪಾದಯಾತ್ರಿ ಅವರ ಬಗ್ಗೆ ಮಾತನಾಡುತ್ತಾ ಇವರ ಹೆಸರಲ್ಲೇ ಹೋರಾಟದ ಕಿಚ್ಚು ಎದ್ದು ಕಾಣುತ್ತದೆ. ಸನ್ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಮಲೆ ಮಹಾದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದ ಜೈತ್ರ ಯಾತ್ರೆಯಲ್ಲಿ ಇಡೀ ರಾಜ್ಯಾದ್ಯಂತ ಸಂಚರಿಸಿದ ಬಸವರಾಜ್ ಪಾದಯಾತ್ರಿ ಅವರು ಇಡೀ ರಾಜ್ಯಾದ್ಯಂತ ಚೈತ್ರ ಯಾತ್ರೆ ಯಶಸ್ವಿಯಾಯಿತು

ರೈತರ ಉಳಿವಿಗಾಗಿ ಎಚ್ ಡಿ ಕುಮಾರಸ್ವಾಮಿ ಅಣ್ಣಾ ಅವರ ಜೊತೆಗೊಂಡು ಹುಬ್ಬಳ್ಳಿಯಿಂದ ಬೆಳಗಾವಿವರೆಗೂ ಪಾದಯಾತ್ರೆಯಲ್ಲಿ ಭಾಗವಹಿಸಿದ ಬಸವರಾಜ ಪಾದಯಾತ್ರಿ ಜನಮನ ಗೆದ್ದಿದ್ದಾರೆ

ಜಾತ್ಯತೀತ ಜನತಾ ಪಕ್ಷದ ಸೇವಾದಳದ ರಾಜ್ಯಾಧ್ಯಕ್ಷರಾಗಿಯೂ ಕೂಡ ಸೇವೆಯಲ್ಲಿ ತೊಡಗಿಕೊಂಡು ರಾಜ್ಯಾದ್ಯಂತ  ನಾ ಕಂಡಂತೆ ಕಲ್ಮಶ ಇಲ್ಲದ ನಿಸ್ವಾರ್ಥ ಮನಸ್ಸಿನ ಆಡಂಬರವಿಲ್ಲದ ಸ್ನೇಹ ಜೀವಿ ಬಸವರಾಜ ಪಾದಯಾತ್ರಿ ಅವರ ಸೇವೆ ಜೆಡಿಎಸ್ ಪಕ್ಷಕ್ಕೆ ಅಪಾರವಾದುದ್ದು . ಸೇವಾದಳದ ಹಿನ್ನೆಲೆ ಸ್ವಾತಂತ್ರ್ಯ ಪೂರ್ವದ ಇಂದಿನಿಂದ ಈಗಿನವರೆಗೂ ಮಹತ್ವವನ್ನು ಪಡೆದಿದೆ ಎಲ್ಲಾ ರಾಜಕೀಯ ಪಕ್ಷದವರಿಗೆ ಸೇವಾದಳ ಅತ್ಯಾ ಅವಶ್ಯವಾದದ್ದು.

ಈಗಾಗಲೇ ಬೇರೆ ಪಕ್ಷದ ಸೇವಾದಳದ ಅಧ್ಯಕ್ಷರುಗಳು ಮಂತ್ರಿಗಳಾಗಿ ಶಾಸಕರಾಗಿ ವಿಧಾನ ಪರಿಷತ್ ಸದಸ್ಯರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿಪರಾಸ್ಯ ಏನಪ್ಪಾ ಅಂದರೆ ನಮ್ಮ ಪಾದಯಾತ್ರಿ ಅವರು ಅಧಿಕಾರದ ಆಸೆಗೆ ಜನ ಸೇವೆ ಮಾಡಿದವರಲ್ಲ ,ಜನ ಸೇವೆಯೇ ಜನಾರ್ದನ ಸೇವೆ ಅನ್ನುವ ಮನೋಭಾವದಿಂದ ಸೇವೆ ಮಾಡಿದ್ದವರು.

ನಮ್ಮ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಾಲಿನಲ್ಲಿ ಇವರನ್ನು ನೋಡಿದರೆ ಇವರೇ ನಿಷ್ಠಾವಂತರ ಮೊದಲನೇ ಸಾಲಿನಲ್ಲಿ ನಿಲ್ಲುವಂಥ ವ್ಯಕ್ತಿ . ಇವತ್ತಿನ ರಾಜಕಾರಣ ಎಲ್ಲರೂ ಅಧಿಕಾರಕ್ಕಾಗಿ ಹೋರಾಟ ಪ್ರತಿಭಟನೆ ಮಾಡುತ್ತಾರೆ ಆದರೆ ಪಾದಯಾತ್ರಿ  ಸಾಹೇಬರು ಜೆಡಿಎಸ್ ಪಕ್ಷಕ್ಕಾಗಿ ಹೋರಾಟ ಪ್ರತಿಭಟನೆ ಪಾದಯಾತ್ರೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು ತಮ್ಮ ಜೀವನವನ್ನೇ ಜೆಡಿಎಸ್ ಪಕ್ಷಕೆ ಮುಡುಪಾಗಿಟ್ಟಿದ್ದಾರೆ.

ತಮ್ಮ ನಲವತ್ತು ವರ್ಷದ ರಾಜಕೀಯ ಜೀವನದ ಹೋರಾಟದಲ್ಲಿ ಬರಿ ಕಷ್ಟ ನಷ್ಟಗಳು ಅಧಿಕಾರ ಕಾಣಲಿಲ್ಲ, ಆಡಂಬರ ಕಾಣಲಿಲ್ಲ ಕಾರಲ್ಲಿ ಓಡಾಡಲಿಲ್ಲ ಬರಿ ಕಾಲಲ್ಲಿ ನಡೆದು ನಡೆದು ಪಕ್ಷ ಸಂಘಟನೆಯಲ್ಲಿ ತೊಡಗಿದ ಸಾಹೇಬರು ಇದು ತುಂಬಾ ದೊಡ್ಡ ವಿಪರಾಸ್ಯ

ಇವರ ಬಗ್ಗೆ ಹೇಳುತ್ತಾ ಹೋದರೆ ಓದುವವರಿಗೆ ಕಷ್ಟವಾಗುತ್ತದೆ ಆದರೂ ಓದಲೇಬೇಕು ಏಕೆಂದರೆ ಇವರು ಆಗರ್ಭ ಶ್ರೀಮಂತರಲ್ಲ ಸಿನಿಮಾ ನಟರಲ್ಲ ಸೆಲೆಬ್ರಿಟಿ ಅಂತೂ ಅಲ್ಲವೇ ಅಲ್ಲ ಒಬ್ಬ ಬಡವ ನಿಷ್ಠಾವಂತ ಜೆಡಿಎಸ್ ಪಕ್ಷದ ಸೇವಕರು.

ಕರ್ನಾಟಕ ರಾಜ್ಯದ ನನ್ನ ಪ್ರೀತಿಯ ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣದ ಸದಸ್ಯರು ಹಾಗೂ ನಿಷ್ಠಾವಂತ ಕಾರ್ಯಕರ್ತರಲ್ಲಿ ನನ್ನದೊಂದು ಮನವಿ
ನಾವೆಲ್ಲರೂ ಒಗ್ಗಟ್ಟಾಗಿ ಬಸವರಾಜ್ ಪಾದಯಾತ್ರಿ ಅವರನ್ನು ಈ ಬಾರಿ ವಿಧಾನ ಪರಿಷತ್ತು ಸದಸ್ಯರಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ವರಿಷ್ಠರಿಗೆ ಮನವಿ ಸಲ್ಲಿಸೋಣ

ಒಬ್ಬ ನಿಷ್ಠಾವಂತ ಜೆಡಿಎಸ್ ಪಕ್ಷದ  ಶಿಸ್ತಿನ ಶಿಪಾಯಿ ವಿಧಾನ ಪರಿಷತ್ತಿಗೆ ಹೋದರೆ ರಾಜ್ಯದ ಎಲ್ಲಾ ನಿಷ್ಠಾವಂತ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಪ್ರತಿಷ್ಠೆ ಹಾಗೂ ಗೌರವ ಸಲ್ಲುವುದು ಮುಂದಿನ ದಿನದಲ್ಲಿ ನಿಷ್ಠಾವಂತರಿಗೆ ಅವಕಾಶ ಸಿಗುವುದು ಸತ್ಯ

ಜಾತ್ಯತೀತ ಜನತಾದಳದ ಸೇವಾದಳದ ರಾಜ್ಯಾಧ್ಯಕ್ಷ ಬಸವರಾಜ್ ಪಾದಯಾತ್ರಿ ಅವರು ವಿಧಾನಪರಿಷತ್ತು ಸದಸ್ಯರಾದರೆ ರಾಜ್ಯದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಆದಂತೆ ನಮ್ಮ ಪಕ್ಷದ ವರಿಷ್ಠರು ನಿಷ್ಠಾವಂತರ ಮೇಲೆ ಇನ್ನಾದರೂ ಕರುಣೆ ತೋರಿಸಿ ಬಸವರಾಜ ಪಾದಯಾತ್ರಿ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಲೆಂದು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮನವಿ .