ನೀರಿನ ಭದ್ರತೆಗಾಗಿ ಸುಸ್ಥಿರ ಅಂತರ್ಜಲ ನಿರ್ವಹಣೆ ಕುರಿತು ರಾಷ್ಟ್ರೀಯ ಸಮ್ಮೇಳನ

ವಿಜಯ ದರ್ಪಣ ನ್ಯೂಸ್…

ನೀರಿನ ಭದ್ರತೆಗಾಗಿ ಸುಸ್ಥಿರ ಅಂತರ್ಜಲ ನಿರ್ವಹಣೆ ಕುರಿತು ರಾಷ್ಟ್ರೀಯ ಸಮ್ಮೇಳನ 

ಮಡಿಕೇರಿ :- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ‘ನೀರಿನ ಭದ್ರತೆಗಾಗಿ ಸುಸ್ಥಿರ ಅಂತರ್ಜಲ ನಿರ್ವಹಣೆ’(ಸಸ್ಟೈನೇಬಲ್ ಗ್ರೌಂಡ್ ವಾಟರ್ ಮ್ಯಾನೇಜ್‍ಮೆಂಟ್ ಫಾರ್ ವಾಟರ್ ಸೆಕ್ಯುರಿಟಿ) ಎಂಬ ವಿಷಯದ ಕುರಿತು ಜೂನ್, 19 ರಿಂದ ಜೂನ್, 21 ರವರೆಗೆ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.

ಈ ಸಮ್ಮೇಳನದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ ನುರಿತ ವಿಜ್ಞಾನಿಗಳು ವಿಷಯಾಧಾರಿತ ಉಪನ್ಯಾಸ ನೀಡಲಿದ್ದಾರೆ. ಈ ಸಮ್ಮೇಳನದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು ಭಾಗವಹಿಸಲು ಅವಕಾಶವಿದೆ. ಅಲ್ಲದೇ ಈ ಸಮ್ಮೇಳನದಲ್ಲಿ ರಿಸರ್ಚ್ ಪೇಪರ್ ಮಂಡಿಸಬಹುದಾಗಿದ್ದು, ಆಯ್ಕೆಯಾದ ರಿಸರ್ಚ್ ಪೇಪರ್‍ಗಳಿಗೆ ನಗದು ಬಹುಮಾನ ನೀಡಲಾಗುವುದು.

ಈ ಸಮ್ಮೇಳನದಲ್ಲಿ ಭಾಗವಹಿಸಲು ಜೂನ್, 10 ರೊಳಗೆ ಗೂಗಲ್ ಫಾರ್ಮ್

(https://forms.gle/QDXV64LDibFbHydc9) ಮೂಲಕ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮ ಸಂಯೋಜಕರು (ಮೊ. 9845258894 ಮತ್ತು 9743084194) ಅಥವಾ ಅಕಾಡೆಮಿಯ ವೆಬ್‍ಸೈಟ್ www.kstacademy.in ವೀಕ್ಷಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ.ರಮೇಶ್ ಅವರು ತಿಳಿಸಿದ್ದಾರೆ.