ಸಮಗ್ರ ಕೃಷಿ ಮಾಡಿ ಹೆಚ್ಚಿನ ಸಂಪಾದನೆ ಮಾಡಿ: ಕೃಷಿಪಂಡಿತ್ ಜಿ ಗೋಪಾಲಗೌಡ

 

ವಿಜಯ ದರ್ಪಣ ನ್ಯೂಸ್…

ಸಮಗ್ರ ಕೃಷಿ ಮಾಡಿ  ಹೆಚ್ಚಿನ ಸಂಪಾದನೆ ಮಾಡಿ: ಕೃಷಿಪಂಡಿತ್ ಜಿ ಗೋಪಾಲಗೌಡ

ಶಿಡ್ಲಘಟ್ಟ : ಕೆಲಸಕ್ಕೆ ಸೇರಿಕೊಂಡು ಬೇರೆಯವರ ಕೈಕೆಳಗೆ ಬದುಕಬೇಡಿ ನಿಮ್ಮಲ್ಲಿ ಕನಿಷ್ಠ ಒಂದು ಹೆಕ್ಟೇ‌ರ್ ಜಮೀನಿದ್ದರೂ ಸಾಕು, ಸಮಗ್ರ ಕೃಷಿ ಮಾಡಿ ಒಬ್ಬ ಸರ್ಕಾರಿ ಅಧಿಕಾರಿಗಿಂತ ಹೆಚ್ಚಿನ ಸಂಪಾದನೆ ಮಾಡಬಹುದು ಎಂದು ಕೃಷಿಪಂಡಿತ್ ಪ್ರಶಸ್ತಿ ವಿಜೇತ ಹಿತ್ತಲಹಳ್ಳಿ. ಜಿ.ಗೋಪಾಲಗೌಡ ವಿದ್ಯಾರ್ಥಿಗಳಿಗೆ ಹಿತನುಡಿ ಹೇಳಿದರು.

ಕೃಷಿ ಮಹಾವಿದ್ಯಾಲಯದ ಎರಡನೇ ವರ್ಷದ BSC ಪದವಿಯ 100 ಮಂದಿ ವಿದ್ಯಾರ್ಥಿಗಳು ಹೆಚ್ಚಿನ ತಿಳಿವಳಿಕೆಗಾಗಿ ಅಧ್ಯಯನ ಪ್ರವಾಸ ಕೈಗೊಂಡಿದ್ದು ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ‌.ಗೋಪಾಲ್ ಗೌಡ ಅವರ ಹಿಪ್ಪುನೇರಳೆ ತೋಟ,  ರೇಷ್ಮೆ ಹುಳು  ಸಾಕಾಣಿಕೆ ಮನೆ ಹಾಗೂ ಸಮಗ್ರ ಕೃಷಿ ತೋಟಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದಿಸಿ, ಮಾಹಿತಿ ಪಡೆದರು.

ಸಮಗ್ರ ಕೃಷಿಯ ಜೊತೆಯಲ್ಲಿ ಕುರಿ, ಕೋಳಿ, ಹಸು, ಎಮ್ಮೆ, ಜೇನು, ಮೀನು ಮುಂತಾದ ಸಾಕಾಣಿಕೆಗಳ ಬಗ್ಗೆ ತಿಳಿವಳಿಕೆ ಪಡೆದು, ರೈತರು ಇಷ್ಟೆಲ್ಲಾ ಚಟುವಟಿಕೆಗಳನ್ನು ನಡೆಸಲು ಸಾಧ್ಯತೆ ಇದೆಯಾ ಎಂದು ವಿದ್ಯಾರ್ಥಿಗಳು ಅಚ್ಚರಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತರಾದ ಎಚ್.ಕೆ.ಸುರೇಶ್,ಎಚ್.ಕೆ. ಪುಟ್ಟೇಗೌಡ, ಸಹಾಯಕ ಪ್ರಾಧ್ಯಾಪಕ ಡಾ.ವಿನೋದ್ ಮುಂತಾದವರು ಹಾಜರಿದ್ದರು.