ಬೀದಿ ಬದಿ ಆಹಾರ ಮಳಿಗೆಗಳಲ್ಲಿ ಆಹಾರ ಸುರಕ್ಷತೆ ಅಧಿಕಾರಿಗಳಿಂದ ಪರಿಶೀಲನೆ
ವಿಜಯ ದರ್ಪಣ ನ್ಯೂಸ್….
ಬೀದಿ ಬದಿ ಆಹಾರ ಮಳಿಗೆಗಳಲ್ಲಿ ಆಹಾರ ಸುರಕ್ಷತೆ ಅಧಿಕಾರಿಗಳಿಂದ ಪರಿಶೀಲನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದ ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿಗಳು ವಿಶೇಷ ಅಂದೋಲನ ನಡೆಸಿ ಜಿಲ್ಲೆಯ ನಾಲ್ಕು ತಾಲ್ಲೂಕಿನ ವ್ಯಾಪ್ತಿಯಲ್ಲಿ 32 ಬೀದಿ ಬದಿ ಆಹಾರ ವ್ಯಾಪಾರ ಮಳಿಗೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ 5 ನೋಟೀಸ್ ನೀಡಿ, 5500 ರೂ ದಂಡ ವಿಧಿಸಿ, ಬೀದಿ ಬದಿ ಆಹಾರ ಉದ್ದಿಮೆದಾರರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅರಿವು ಮೂಡಿಸಿದರು.
ತಯಾರಿಕೆ ಸ್ಥಳ ಮತ್ತು ಪರಿಸರ ನೈರ್ಮಲ್ಯವಾಗಿರಬೇಕು, ತಯಾರಿಕೆಗೆ ಸೇವಾನೆಗೆ ಶುದ್ಧವಾದ ನೀರು ಬಳಸಬೇಕು ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು, ತಯಾರಿಸಿದ ಆಹಾರ ಕಲುಷಿತವಾಗದಂತೆ ನೋಡಿಕೊಳ್ಳಬೇಕು ಎಂದು ಅರಿವು ಮೂಡಿಸಿ, ಕರಪತ್ರ ವಿತರಿಸಲಾಯಿತು.
ಈ ವಿಶೇಷ ಅಂದೋಲನದಲ್ಲಿ ಆಹಾರ ಸುರಕ್ಷತೆಯ ಅಂಕಿತಾಧಿಕಾರಿ ಡಾ. ಧರ್ಮೇಂದ್ರ.ಬಿ, ಹಾಗೂ ಆಹಾರ ಸುರಕ್ಷತಾಧಿಕಾರಿಗಳಾದ ಗೋವಿಂದರಾಜು, ನಾಗೇಶ,ಪ್ರವೀಣ್ ಭಾಗವಹಿಸಿದ್ದರು.