ಸೃಷ್ಟಿಯ ಸಹಜತೆ ಮತ್ತು ವಿಸ್ಮಯ…..,
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಸೃಷ್ಟಿಯ ಸಹಜತೆ ಮತ್ತು ವಿಸ್ಮಯ….., ಅಲೆಗ್ಸಾಂಡರ್ ದಿ ಗ್ರೇಟ್ ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ…. ಶಾಂತಿ ದೂತ ಅಹಿಂಸೆಯ ಪ್ರತಿಪಾದಕ ಗಾಂಧಿ ಗುಂಡೇಟಿಗೆ ಹತ್ಯೆಯಾದರು…. ಸಮಾನತೆಯ ಶ್ರೇಷ್ಠ ಹರಿಕಾರ ಬಸವಣ್ಣ ಕೊಲೆಯಾಗಿರಬಹುದು ಅಥವಾ ಆತ್ಮಹತ್ಯೆಗೆ ಶರಣಾದರು……. ಬೃಹತ್ ದೇಶದ ಬಲಿಷ್ಠ ಪ್ರಧಾನಿ ಇಂದಿರಾಗಾಂಧಿ ಅಂಗರಕ್ಷಕರ ಗುಂಡಿಗೆ ಬಲಿಯಾದರು… ಆಧ್ಯಾತ್ಮದ ಮೇರು ಶಿಖರ, ಕಾಳಿ ಮಾತೆಯೊಂದಿಗೆ ಸಂಪರ್ಕ ಸಾಧಿಸಿದ್ದರು ಎಂದು ಹೇಳಲಾದ ರಾಮಕೃಷ್ಣ ಪರಮಹಂಸರು ಗಂಟಲು ಕ್ಯಾನ್ಸರ್ ಗೆ ಬಲಿಯಾದರು……