ಜಾಗೃತ ಮನಸ್ಸುಗಳ ಜವಾಬ್ದಾರಿ…….
ವಿಜಯ ದರ್ಪಣ ನ್ಯೂಸ್ ಜಾಗೃತ ಮನಸ್ಸುಗಳ ಜವಾಬ್ದಾರಿ……. ಚಳಿ ತಡೆಯಲಾರದೆ ರಸ್ತೆ ಬದಿಯಲ್ಲಿ ಮಲಗಿರುವ ಮಗು, ಒಂದು ತುತ್ತು ಅನ್ನಕ್ಕಾಗಿ ದೇವ ಮಂದಿರಗಳ ಮುಂದೆ ಹಸಿವಿನಿಂದ ಅಂಗಲಾಚುತ್ತಿರುವ ಪುಟ್ಟ ಕಂದ, ತನ್ನ ಹಾಗೂ ತನ್ನ ನಂಬಿದವರ ಊಟಕ್ಕಾಗಿ ಯಾರೋ ಅಪರಿಚಿತನಿಗೆ ದೇಹ ಅರ್ಪಿಸುವ ಹೆಣ್ಣು, ಹಸಿವು ನೀಗಿಕೊಳ್ಳಲು, ಸಂಸಾರ ನಡೆಸಲು ಇತರರ ಮಲ ಹೊತ್ತು ಸಾಗುವ ವ್ಯಕ್ತಿ, ರೋಗ ಉಲ್ಬಣಿಸಿದ್ದರೂ ಚಿಕಿತ್ಸೆ ಪಡೆಯಲು ಕಾಸಿಲ್ಲದೆ ಸಾವನ್ನು ಎದುರು ನೋಡುತ್ತಿರುವ ಜೀವ, ತಾನು ಮಾಡದ ತಪ್ಪಿಗೆ ಜ್ಯೆಲುಪಾಲಾಗಿ ಕೋರ್ಟನಿಂದ…