ನಾಟಕದಲ್ಲಿ ಅಭಿನಯಿಸುತ್ತಿರುವಾಗಲೇ ಪ್ರಾಣಬಿಟ್ಟ ಪಾತ್ರಧಾರಿ ಅರದೇಶನಹಳ್ಳಿ ಮುನಿಕೆಂಪಣ್ಣ
ವಿಜಯ ದರ್ಪಣ ನ್ಯೂಸ್… ನಾಟಕದಲ್ಲಿ ಅಭಿನಯಿಸುತ್ತಿರುವಾಗಲೇ ಪ್ರಾಣಬಿಟ್ಟ ಪಾತ್ರಧಾರಿ ಅರದೇಶನಹಳ್ಳಿ ಮುನಿಕೆಂಪಣ್ಣ ಯಲಹಂಕ : ನಾಟಕದಲ್ಲಿ ಅಭಿನಯಿಸುವಾಗಲೇ ನಟರೊಬ್ಬರು ವೇದಿಯ ಮೇಲೆ ಕುಸಿದು ಪ್ರಾಣ ಬಿಟ್ಟ ಘಟನೆ ನಡೆದಿದೆ. ಮೃತಪಟ್ಟವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿ ಅರದೇಶಹಳ್ಳಿ ಗ್ರಾಮದ ನಿವಾಸಿಯಾದ ಎನ್. ಮುನಿಕೆಂಪಣ್ಣ ಎಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ ಯಲಹಂಕ ತಾಲೂಕಿನ ಸಾತನೂರು ಬಳಿ ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯುತ್ತಿತ್ತು, ಈ ವೇಳೆ ನಾಟಕದಲ್ಲಿ ಶಕುನಿಯ ಪಾತ್ರ ನಿರ್ವಹಿಸುತ್ತಿದ್ದ ಮುನಿಕೆಂಪಣ್ಣ…