Editor VijayaDarpana

ಮುಂದಿನ 2 ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗುವುದು: ಅಮಿತ್ ಶಾ ಪ್ರತಿಜ್ಞೆ

ವಿಜಯ ದರ್ಪಣ ನ್ಯೂಸ್  ಎಡಪಂಥೀಯ ಉಗ್ರವಾದವನ್ನು (LWE) ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ರಾಜಧಾನಿಯಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮುಂದಿನ ಎರಡು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ತೊಡೆದುಹಾಕಲು ತ್ವರಿತ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸುವಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ ಮತ್ತು ಈಗ ಈ ಹೋರಾಟವು ನಿರ್ಣಾಯಕ ಹಂತವನ್ನು ತಲುಪಿದೆ…

Read More

ಕೇಂದ್ರ ಬರ ಅಧ್ಯಯನ ತಂಡದಿಂದ ಪರಿಶೀಲನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 49559.57 ಹೆಕ್ಟೇರ್ ಬೆಳೆಹಾನಿ: ಜಿಲ್ಲಾಧಿಕಾರಿ ಡಾ. ಶಿವಶಂಕರ ಮಾಹಿತಿ

ವಿಜಯ ದರ್ಪಣ ನ್ಯೂಸ್  ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 08 : ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಕೇಂದ್ರ ಜಲ ಆಯೋಗದ ನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡವು ಇಂದು ಪರಿಶೀಲಿಸಿತು. ಬೀರಸಂದ್ರದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊದಲಿಗೆ ವಿಶ್ವನಾಥಪುರ ಬಳಿಯ ರೈತರ…

Read More

ನೂರಾರು ಜೀವಗಳಿಗೆ ಆಶ್ರಯ ನೀಡಿದ್ದ ಜೀವಕ್ಕೆ ನುಡಿನಮನ…ಅನಿಲ್ ಎಚ್.ಟಿ.

ವಿಜಯ ದರ್ಪಣ ನ್ಯೂಸ್  ಮಡಿಕೇರಿ. ಕೊಡಗು ಜಿಲ್ಲೆಯ ಎಲ್ಲೇ ಆಗಲಿ.. ನಿಗ೯ತಿಕರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು ಓಡಾಡುತ್ತಾ ಜನರ ಗಮನಕ್ಕೆ ಬಂದು ಇವರನ್ನು ಎಲ್ಲಿಗೆ ಸಾಗಿಸುವುದು.. ಇವರಿಗೆ ಹೇಗೆ ಆಶ್ರಯ ಕೊಡುವುದು ಎಂಬ ಪ್ರಶ್ನೆ ಎದುರಾದರೆ.. ಇಂಥ ಪ್ರಶ್ನೆಗೆ ದೊರಕುತ್ತಿದ್ದ ಉತ್ತರವೇ.. ವಿಕಾಸ್ ಜನಸೇವಾ ಟ್ರಸ್ಟ್ ನ ರಮೇಶ್.. ಕೆಲವು ವಷ೯ಗಳ ಹಿಂದಿನವರೆಗೂ ಸುಂಟಿಕೊಪ್ಪದ ಗದ್ದೆಹಳ್ಳದ ರಸ್ತೆಬದಿಯಲ್ಲಿನ ಪುಟ್ಟ ಮನೆಯೊಂದರಲ್ಲಿ ವಿಕಾಸ್ ಜನಸೇವಾ ಟ್ರಸ್ಟ್ ಮೂಲಕ ನಿಗ೯ತಿಕರು, ಅನಾಥರ ಸೇವೆ ಮಾಡುತ್ತಿದ್ದ ರಮೇಶ್ ಎಂಬ ಸಹೖದಯಿ ನಂತರ…

Read More

ವಿಪತ್ತುಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್

ವಿಜಯ ದರ್ಪಣ ನ್ಯೂಸ್ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 07 : ಪ್ರಕೃತಿಯಲ್ಲಿ ಎರಡು ಬಗೆಯ ವಿಪತ್ತುಗಳು ಸಂಭವಿಸುತ್ತವೆ. ಒಂದು ಮಾನವ ನಿರ್ಮಿತ ಮತ್ತೊಂದು ಪ್ರಕೃತಿ ನಿರ್ಮಿತ. ಈ ಎರಡೂ ಬಗೆಯ ವಿಕೋಪ ಗಳೂ ಅನಿರೀಕ್ಷಿತವಾಗಿಯೇ ಸಂಭವಿಸುತ್ತವೆ. ಆದ್ದರಿಂದ ಅಂತಹ ವಿಪತ್ತುಗಳನ್ನು ತಡೆಯಲು ಸದಾ ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಡಾ. ಎನ್. ಶಿವಶಂಕರ್ ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ…

Read More

ಟಿವಿ ಕ್ಯಾಮರಾಮೆನ್ ಆಗಿದ್ದ ಹಣಮಂತ ಇದ್ದದ್ದು ಗಲ್ಲಿಯೊಂದರ ತಗಡಿನ‌ ಮನೆಯಲ್ಲಿ: ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಟಿವಿ ಕ್ಯಾಮರಾಮೆನ್ ಆಗಿದ್ದ ಹಣಮಂತ ಇದ್ದದ್ದು ಗಲ್ಲಿಯೊಂದರ ತಗಡಿನ‌ ಮನೆಯಲ್ಲಿ… ಯಾರ ಬದುಕು ಯಾವಾಗ ಬೀದಿಗೆ ಬಂದು ನಿಲ್ಲುತ್ತದೆಯೋ ಗೊತ್ತಿಲ್ಲ…  ಒಂದು ದಶಕಕ್ಕೂ ಹೆಚ್ಚು ಕಾಲ ಟಿವಿ ಕ್ಯಾಮರಾಮೆನ್ ಆಗಿ ಕೆಲಸ ಮಾಡಿದ್ದ ಹಣಮಂತ ಬಬಲಾದಿ (ಸುವರ್ಣ ಟಿವಿ, ಕಸ್ತೂರಿ ಟಿವಿ)ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಬದುಕುಳಿದು ಬರಲಿ ಎಂದೇ ಸುದ್ದಿಮನೆಯ ಗೆಳೆಯರು ಪ್ರಾರ್ಥಿಸಿದ್ದರು. ವಿಧಿಯಾಟ ಆತ ಬದುಕಲಿಲ್ಲ. ಆಸ್ಪತ್ರೆಗಾಗಿ ಕೂಡಿಟ್ಟ ಹಣವನ್ನು ಆ ಕುಟುಂಬ ಖರ್ಚು ಮಾಡಿಕೊಂಡಿತು. ಮನೆಯಲ್ಲಿ ಇವ ಬಿಟ್ಟರೆ…

Read More

ಒಂದು ಕಾಲೇಜಿಗೆ ಪ್ರವೇಶ, ಇನ್ನೊಂದು ಕಾಲೇಜಿಗೆ ಮರು ಹಂಚಿಕೆ; ವಿದ್ಯಾರ್ಥಿಗಳ ವ್ಯಾಸಂಗವೇ ಅಸಿಂಧು ಆಗಬಹುದು? .

ವಿಜಯ ದರ್ಪಣ ನ್ಯೂಸ್ ಒಂದು ಕಾಲೇಜಿಗೆ ಪ್ರವೇಶ, ಇನ್ನೊಂದು ಕಾಲೇಜಿಗೆ ಮರು ಹಂಚಿಕೆ; ವಿದ್ಯಾರ್ಥಿಗಳ ವ್ಯಾಸಂಗವೇ ಅಸಿಂಧು ಆಗಬಹುದು? ವೈದ್ಯ ವಿದ್ಯಾರ್ಥಿಗಳ ಮರುಹಂಚಿಕೆ: ಮುಂದಿನ ಹಾದಿ ಕಷ್ಟ……  . ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಮರುಹಂಚಿಕೆ: ಯೋಚಿಸಿ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ CRF ಸಲಹೆ… . ಮೆಡಿಕಲ್ ಕಾಲೇಜು ವಿವಾದ: ಸರ್ಕಾರಗಳ ಕಣ್ಣಾಮುಚ್ಚಾಲೆ ಬಗ್ಗೆ CRF ಅಸಮಾಧಾನ —————–&&&&—————— ಬೆಂಗಳೂರು: ಕಾಲೇಜು ಅನುಮತಿ ವಿಳಂಬ ಕಾರಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಮರುಹಂಚಿಕೆ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ…

Read More

ಪ್ರೀತಿ – ಪ್ರೇಮ ಎಂಬ ಭಾವದ ಸುಳಿಯಲ್ಲಿ…. ಪ್ರೀತಿಯ ಆಳದ ಹುಡುಕಾಟ………

ವಿಜಯ ದರ್ಪಣ ನ್ಯೂಸ್ ಪ್ರೀತಿ – ಪ್ರೇಮ ಎಂಬ ಭಾವದ ಸುಳಿಯಲ್ಲಿ………….. ಪ್ರೀತಿಯ ಆಳದ ಹುಡುಕಾಟ……… ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ……. ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ, ರೈಲಿಗೆ ತಲೆ ಕೊಡಲು, ಕುತ್ತಿಗೆಗೆ ನೇಣು ಬಿಗಿದುಕೊಳ್ಳಲು, ವಿಷ ಕುಡಿಯಲು, ಬೆಂಕಿ ಹಚ್ಚಿಕೊಳ್ಳಲು, ಎತ್ತರದಿಂದ ಜಿಗಿಯಲು, ನೀರಿಗೆ ಹಾರಲು ಮನಸ್ಸನ್ನು ಪ್ರೀತಿ…

Read More

ಜ್ಞಾನ ಭಿಕ್ಷಾ ಪಾದಯಾತ್ರೆ……

ವಿಜಯ ದರ್ಪಣ ನ್ಯೂಸ್ ಜ್ಞಾನ ಭಿಕ್ಷಾ ಪಾದಯಾತ್ರೆ…… ಎರಡು ವರ್ಷಗಳ ಹಿಂದಿನ ಪಾದಯಾತ್ರೆಯ ನೆನಪಿನ ಲೇಖನ‌ ಮತ್ತೊಮ್ಮೆ…… ( ಇದರ ನಂತರ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆ ಸೇರಿ ಒಟ್ಟು 385 ದಿನ 11500 ಕಿಲೋಮೀಟರ್ ಸಂಚರಿಸಲಾಯಿತು……) 10000 ಕಿಲೋಮೀಟರ್…….. ರಾಷ್ಟ್ರದ ಮೊದಲ ಹೊಗೆ ಮುಕ್ತ ಗ್ರಾಮ ಎಂದು ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೈಚ್ಕೂರಳ್ಳಿಯಲ್ಲಿ ಕುಳಿತು ನೆನಪಿನ ಅಂಗಳಕ್ಕೆ ಜಿಗಿದಾಗ…….. ನಾನು ಡ್ಯಾನ್ಸ್ ಮಾಡುವವನಲ್ಲ, ಹಾಡು ಹೇಳುವವನಲ್ಲ, ಕಾಮಿಡಿ…

Read More

ಹಿಂದುಳಿದ ವರ್ಗಗಳ ನಿಗಮಗಳ ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

ವಿಜಯ ದರ್ಪಣ ನ್ಯೂಸ್  ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 05 :- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ/ಅರೆ…

Read More

ಪ್ರಧಾನಮಂತ್ರಿ ಉಜ್ವಲ ಸ್ಕೀಮ್‌ ಸಬ್ಸಿಡಿ ಏರಿಕೆ, 600 ರೂ.ಗೆ LPG ಸಿಲಿಂಡರ್

ವಿಜಯ ದರ್ಪಣ ನ್ಯೂಸ್ ನವದೆಹಲಿ: ಬಡತನ ರೇಖೆಯಲ್ಲಿರುವ ನಿವಾಸಿಗಳಿಗೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಎಲ್‌ ಪಿಜಿ ಸಿಲಿಂಡರ್‌ ಗೆ ಹೆಚ್ಚುವರಿಯಾಗಿ ಮತ್ತೆ 100 ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ (ಅಕ್ಟೋಬರ್‌ 04) ಅನುಮೋದನೆ ನೀಡಿದೆ. ಇದರೊಂದಿಗೆ ಉಜ್ವಲ ಯೋಜನೆಯ ಫಲಾನುಭವಿಗಳ ಸಬ್ಸಿಡಿ 300 ರೂಪಾಯಿಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಉಜ್ವಲ ಯೋಜನೆ ಫಲಾನುಭವಿಗಳು ಇದೀಗ ಎಲ್‌ ಪಿಜಿ ಸಿಲಿಂಡರ್‌ ಗೆ 300 ರೂಪಾಯಿ ಸಬ್ಸಿಡಿ…

Read More