ಕರುನಾಡಿನ ಸಾಧಕರು: ಈ ದಿನ ಈ ನಾಡು ಕಂಡ ವೀರವನಿತೆ ಒನಕೆ ಒಬ್ಬವ ಅವರ ಜನುಮ ದಿನ.
ವಿಜಯ ದರ್ಪಣ ನ್ಯೂಸ್ ,ನವೆಂಬರ್ 11 ಕರುನಾಡಿನ ಸಾಧಕರು ಈ ನಾಡು ಕಂಡ ವೀರವನಿತೆ, ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ರಕ್ಷಕಿ ಒನಕೆ ಒಬ್ಬವ ಅವರ ಜನುಮ ದಿನ. ಆ ಮಹಾಮಾತೆಗೆ ಶಿರಭಾಗಿ ನಮಿಸುತ್ತಾ, ಈ ಮುಂದಿನ ಗೀತೆಯ ಮೂಲಕ ನನ್ನ ನುಡಿನಮನಗಳು… ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ…