ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಚಳವಳಿಯ ರೂಪದಲ್ಲಿ ಜಾರಿಗೆ ತರಬಲ್ಲ ಪಕ್ಷವೇ ಬಿಎಸ್ ಪಿ : ನರಸಿಂಹರಾಜು
ವಿಜಯ ದರ್ಪಣ ನ್ಯೂಸ್ ದೇವನಹಳ್ಳಿ ನವೆಂಬರ್ 18 : ಬಿಎಸ್’ಪಿ ಕೇವಲ ರಾಜಕೀಯ ಪಕ್ಷವಲ್ಲ. ಜನರನ್ನು ಒಗ್ಗೂಡಿಸಲು ಹೋರಾಡುತ್ತಿರುವ ಪಕ್ಷವಾಗಿದೆ. ಹಿಂದೂಳಿದ ಹಾಗೂ ಅಲ್ಪಸಂಖ್ಯಾತ ಜನರನ್ನು ಉತ್ತಮ ವೇದಿಕೆಗೆ ತರುವ ಗುರಿಯನ್ನು ಹೊಂದಿರುವ ಪಕ್ಷವಾಗಿದೆ. ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ವಿಫಲವಾಗಿದೆ ಎಂದು ಬಿಎಸ್ಸಿ ಜಿಲ್ಲಾ ಮುಖಂಡ ನರಸಿಂಹರಾಜು ಅವರು ಟೀಕಿಸಿದರು. ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡವರು ಹಾಗೂ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಬಲೀಕರಣಗೊಳಿಸುವಲ್ಲಿ…