ಹೊಸಕೋಟೆ ಮೊದಲ ಹಂತದ ಏತ ನೀರಾವರಿ ಯೋಜನೆ ಪ್ರಾರಂಭಿಸಲು ಅಗತ್ಯ ಕ್ರಮ: ಸಚಿವ ಎನ್. ಎಸ್ ಭೋಸರಾಜು ಸೂಚನೆ
ವಿಜಯ ದರ್ಪಣ ನ್ಯೂಸ್ ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೆ 20 : ಹೊಸಕೋಟೆಯ 38 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸೆಪ್ಟೆಂಬರ್ 30 ರ ಒಳಗಾಗಿ ಮೊದಲ ಹಂತದ (FIRST PHASE) ಕಾಮಗಾರಿ ಪೂರೈಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಭೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದಲ್ಲಿ ಸಾಗುವ ಎರಡು ಕಿಲೋಮೀಟರ್ ಪೈಪ್ ಲೈನ್ ಮತ್ತು…