” ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟ ಶಕ್ತಿ ಅಥವಾ ದುರದೃಷ್ಟಕ್ಕಿಂತಲೂ ಪ್ರಬಲ…..” ಚಾರ್ಲ್ಸ್ ಡಿಕನ್ಸ್…….

ವಿಜಯ ದರ್ಪಣ ನ್ಯೂಸ್… ” ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟ ಶಕ್ತಿ ಅಥವಾ ದುರದೃಷ್ಟಕ್ಕಿಂತಲೂ ಪ್ರಬಲ…..” ಚಾರ್ಲ್ಸ್ ಡಿಕನ್ಸ್……. ಇತ್ತ ಕಡೆ, ” ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ ” ಎಂದೂ ಲೋಕರೂಡಿಯಾಗಿ ಮತ್ತು ವ್ಯಾವಹಾರಿಕವಾಗಿ ಹೇಳಲಾಗುತ್ತದೆ……….. ಚಾರ್ಲ್ಸ್ ಡಿಕನ್ಸ್ ಇಂಗ್ಲೆಂಡಿನ ಪ್ರಖ್ಯಾತ ಬರಹಗಾರ ಮತ್ತು ಚಿಂತಕ. ಈ ಎರಡೂ ಹೇಳಿಕೆಗಳ ವೈರುಧ್ಯಗಳು ನಮ್ಮನ್ನು ಜೀವನ ಪರ್ಯಂತ ಕಾಡುತ್ತದೆ. ಅದರಲ್ಲೂ ಭಾರತೀಯ ಸಮಾಜದಲ್ಲಿ ನಾವು ಪ್ರೀತಿ ಮತ್ತು ಸತ್ಯದ ಹಾದಿಯಲ್ಲಿ ನಡೆಯಬೇಕೆ, ವ್ಯಾವಹಾರಿಕ ಹಾದಿಯಲ್ಲಿ … Read more

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ವಿಜಯ ದರ್ಪಣ ನ್ಯೂಸ್…. ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ ಬೆಂಗಳೂರು, ಏಪ್ರಿಲ್ 25: ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ, ಮೇ 16ರಂದು ಬೆಂಗಳೂರಿನಲ್ಲಿ “ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026” ಆಯೋಜಿಸಲಾಗಿದೆ. “ತಂತ್ರಜ್ಞಾನದಲ್ಲಿನ ಸ್ವಾಯತ್ತತೆ” ಎಂಬ ವಿಷಯದಡಿ ಈ ಸಮಿಟ್ ನಡೆಯಲಿದೆ ಎಂದು ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕ, ವಿಶೇಷವಾಗಿ … Read more

ಕಲ್ಯಾಣಿಗಳನ್ನು ಜೋಪಾನ ಮಾಡುವ ಹೊಣೆ ನಮ್ಮೆಲ್ಲರದಾಗಿರಬೇಕು: ಶಾಸಕ ಬಿ.ಎನ್.ರವಿಕುಮಾರ್

ವಿಜಯ ದರ್ಪಣ ನ್ಯೂಸ್… ಕಲ್ಯಾಣಿಗಳನ್ನು ಜೋಪಾನ ಮಾಡುವ ಹೊಣೆ ನಮ್ಮೆಲ್ಲರದಾಗಿರಬೇಕು: ಶಾಸಕ ಬಿ.ಎನ್.ರವಿಕುಮಾರ್ ಶಿಡ್ಲಘಟ್ಟ : ಕಲ್ಯಾಣಿಗಳು ನಮ್ಮ ಧಾರ್ಮಿಕ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿವೆ ,ಕೇವಲ ನೀರು ಸಂಗ್ರಹ ಮಾಡಿಟ್ಟಿಕೊಳ್ಳುವ ಸ್ಥಳಗಳಲ್ಲ ಬದಲಿಗೆ ಕಲ್ಯಾಣಿಗಳನ್ನು ಜೋಪಾನ ಮಾಡುವ ಹೊಣೆ ನಮ್ಮೆಲ್ಲರದಾಗಿರಬೇಕು ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು. ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ‘ಮಲ್ಲಿಶೆಟ್ಟಿಪುರ’ದ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ರಮದಾನಗಳ ಮೂಲಕ ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛ ಗೊಳಿಸಿ ಅಭಿವೃದ್ಧಿಗೊಳಿಸುವ ಜತೆಗೆ … Read more

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ         ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ

ವಿಜಯ ದರ್ಪಣ ನ್ಯೂಸ್….. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ         ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ ಬೆಂಗಳೂರು: ಟೌನ್ ಹಾಲ್ ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ದಿವ್ಯಸಾನ್ನಿಧ್ಯವನ್ನ ಪಟ್ಟದ ಶ್ರೀ ಡಾ॥ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಡಾ| ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಸ್ವಾಮಿಗಳು, ಸಂಸದರು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರರವರು, … Read more

ಕುರುಕ್ಷೇತ್ರ ನಾಟಕ ಉದ್ಘಾಟನೆ ಮಾಡಿ ಭಾವನಾತ್ಮಕವಾಗಿ ನುಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ

ವಿಜಯ ದರ್ಪಣ ನ್ಯೂಸ್… ಕುರುಕ್ಷೇತ್ರ ನಾಟಕ ಉದ್ಘಾಟನೆ ಮಾಡಿ ಭಾವನಾತ್ಮಕವಾಗಿ ನುಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ   ದೇವನಹಳ್ಳಿ: ಕುಂದಾಣ ಗ್ರಾಮದ ಜೊತೆ ನನಗೆ ಅವಿನಾಭಾವ ಸಂಬಂಧವಿದೆ. ಇಲ್ಲಿನ ಮಣ್ಣಿನ ಒಡನಾಟ ಮತ್ತು ಜನರ ಪ್ರೀತಿ ನನ್ನ ಜೀವನದ ಅಚ್ಚಳಿಯದ ನೆನಪುಗಳು ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ  ನಿಸರ್ಗ ನಾರಾಯಣಸ್ವಾಮಿ ಅವರು ಭಾವನಾತ್ಮಕವಾಗಿ ನುಡಿದರು. ಕುಂದಾಣ ಗ್ರಾಮದಲ್ಲಿ ಕಳೆದ ರಾತ್ರಿ ಶ್ರೀ ಓಂ ಶಕ್ತಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಕುಂದಾಣದಲ್ಲಿ … Read more

ಮೇ 1ಕ್ಕೆ ಅಂಬೇಡ್ಕರ್ ಭವನದಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ: ಎಡಿಸಿ

ವಿಜಯ ದರ್ಪಣ ನ್ಯೂಸ್….. ಮೇ 1ಕ್ಕೆ ಅಂಬೇಡ್ಕರ್ ಭವನದಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ: ಎಡಿಸಿ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಏ.24 : ಭಗವಾನ್ ಬುದ್ಧ ಜಯಂತಿಯನ್ನು ಜಿಲ್ಲಾ ಮಟ್ಟದಲ್ಲಿ ಮೇ 01 ರಂದು ದೇವನಹಳ್ಳಿ ಟೌನ್ ನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ತಿಳಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬುದ್ಧ ಜಯಂತಿ ಪೂರ್ವಭಾವಿ ಸಭೆಯ … Read more

ವಿಜಯಪುರ ಪಟ್ಟಣಕ್ಕೆ ಜಪಾನ್ ಅಧಿಕಾರಿಗಳ ತಂಡ ಭೇಟಿ

ವಿಜಯ ದರ್ಪಣ ನ್ಯೂಸ್…. ವಿಜಯಪುರ ಪಟ್ಟಣಕ್ಕೆ ಜಪಾನ್ ಅಧಿಕಾರಿಗಳ ತಂಡ ಭೇಟಿ ವಿಜಯಪುರ, ದೇವನಹಳ್ಳಿ ತಾಲ್ಲೂಕು: ಕಾವೇರಿ 6 ನೇ ಹಂತದ ನೀರು ಸರಬರಾಜು ಯೋಜನೆಯ ಅವಶ್ಯಕತೆಯ ಕುರಿತು ಅಧ್ಯಯನ ಮಾಡಲು ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆಯ (ಜೈಕಾ) ಅಧಿಕಾರಿಗಳ ತಂಡ ಪಟ್ಟಣಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಪರಿಸರ, ಸಾಮಾಜಿಕ ಮತ್ತು ಹವಾಮಾನ ವಿಷಯ ಪರಿಣತಿ ಮಿಕಿಕೊ ಅಜುಮ, ಪರಿಸರ ಸಾಮಾಜಿಕ ವಿಷಯ ಪರಿಣತಿ ಕಾನಾನಿನೊ, ಆರ್ಥಿಕ ಮತ್ತು ವಾಣಿಜ್ಯ ವಿಶ್ಲೇಷಕಿ ಇಮಿಕೊ ಪುಜಿತ ನೇತೃತ್ವದ ತಂಡ … Read more

ಸಂಸದ ಯಧುವೀರ ಅವರಿಗೆ  ಮಕ್ಕಳ ಆಸ್ಪತ್ರೆ ಅವ್ಯವಸ್ಥೆ ದರ್ಶನ : ಚೆಲುವಾಂಬ ಬಾಣಂತಿಯರ ಬಿಸಿ ನೀರು ಬೇಡಿಕೆ ಸ್ಥಳದಲ್ಲೇ ಪರಿಹಾರ

ವಿಜಯ ದರ್ಪಣ ನ್ಯೂಸ್…. ಸಂಸದ ಯಧುವೀರ ಅವರಿಗೆ  ಮಕ್ಕಳ ಆಸ್ಪತ್ರೆ ಅವ್ಯವಸ್ಥೆ ದರ್ಶನ : ಚೆಲುವಾಂಬ ಬಾಣಂತಿಯರ ಬಿಸಿ ನೀರು ಬೇಡಿಕೆ ಸ್ಥಳದಲ್ಲೇ ಪರಿಹಾರ ತಾಂಡವಪುರ ಏಪ್ರಿಲ್ 24 ಮೈಸೂರು ಜಿಲ್ಲಾ ಮತ್ತು: ನಗರದ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ದರ್ಶನ ಮಾಡಿದರಲ್ಲದೆ ಬಾಣಂತಿಯರ ಬಿಸಿನೀರ ಬೇಡಿಕೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿ ನೆರವಾದರು. ಒಂದು ತಿಂಗಳ ಅವಧಿಯಲ್ಲಿ ಅತಿಹೆಚ್ಚು ಮಕ್ಕಳ ಸಾವನ್ನಪ್ಪಿರುವ ಪ್ರಕರಣ ಹಾಗೂ ನಿನ್ನೆ … Read more

ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ : ಶಿಡ್ಲಘಟ್ಟ ತಾಲ್ಲೂಕಿಗೆ ಶೇ 92.39 ಫಲಿತಾಂಶ 

ವಿಜಯ ದರ್ಪಣ ನ್ಯೂಸ್…. ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ : ಶಿಡ್ಲಘಟ್ಟ ತಾಲ್ಲೂಕಿಗೆ ಶೇ 92.39 ಫಲಿತಾಂಶ  ಶಿಡ್ಲಘಟ್ಟ : 2025-26 ನೇ ಸಾಲಿನ‌ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಶಿಡ್ಲಘಟ್ಟ ತಾಲ್ಲೂಕಿಗೆ ಶೇ 92.39ರಷ್ಟು ಫಲಿತಾಂಶ ಬಂದಿದ್ದು ಕಳೆದ ವರ್ಷಕ್ಕಿಂತಲೂ ಶೇ 23ರಷ್ಟು ಫಲಿತಾಂಶ ಸುಧಾರಿಸಿದ್ದು, ವಿದ್ಯಾರ್ಥಿಗಳು ಹಾಗು ಪೋಷಕರಲ್ಲಿ ಖುಷಿ ತಂದಿದೆ,ಆದರೆ ಜಿಲ್ಲೆಯಲ್ಲಿ 2ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದ್ದು ಮುಜುಗರಕ್ಕೆ ಈಡಾಗಿದೆ. 1217 ಬಾಲಕರು,1256 ಬಾಲಕಿಯರು ಸೇರಿ ಒಟ್ಟು 2472 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. … Read more

ಪರಿವರ್ತನೆಗಾಗಿ……… ಪ್ರಶ್ನಿಸುವ ನಿರಂತರ ಹೋರಾಟ…..

ವಿಜಯ ದರ್ಪಣ ನ್ಯೂಸ್…. ಪರಿವರ್ತನೆಗಾಗಿ……… ಪ್ರಶ್ನಿಸುವ ನಿರಂತರ ಹೋರಾಟ….. ಬರೆಯುವ ಕೈಗಳು ಚಲಿಸುತ್ತಿರಲಿ, ಆಡುವ ಮಾತುಗಳು ನಿಲ್ಲದಿರಲಿ, ಹೋರಾಟಗಳು ಸೋಲದಿರಲಿ, ಓದುವ ಉತ್ಸಾಹ ಸಾಯದಿರಲಿ, ಬಂಡಾಯದ ಧ್ವನಿ ಅಡಗದಿರಲಿ, ಸಾಧನೆಯ ಕಿಚ್ಚು ಚಿಮ್ಮುತ್ತಿರಲಿ, ಜೀವನೋತ್ಸಾಹ ಪುಟಿದೇಳುತ್ತಿರಲಿ, ಪ್ರಾಮಾಣಿಕತೆ ಸದಾ ಕಾಲ ಉಳಿಯಲಿ, ದಕ್ಷತೆ ನಾಶವಾಗದಿರಲಿ, ಕರುಣೆ ಮರೆಯಾಗದಿರಲಿ, ತ್ಯಾಗ ನಿರಂತರವಾಗಿರಲಿ, ಕ್ಷಮೆ ಸದಾ ಜಾಗೃತವಾಗಿರಲಿ, ಭಾವನೆಗಳು ನಿಯಂತ್ರಣದಲ್ಲಿರಲಿ, ಚಿಂತನೆ ಚೆಲುಮೆಯಾಗಿರಲಿ, ಸ್ವಾತಂತ್ರ್ಯ ಉಸಿರಾಗಿರಲಿ, ಸಮಾನತೆ ಆಶಯವಾಗಿರಲಿ, ಸ್ವಾವಲಂಬನೆ ಬದುಕಾಗಿರಲಿ, ಒಂದು ಕಡೆ ನಮ್ಮ ರಕ್ತದ ಕಣಕಣದಲ್ಲೂ ದೇವರೆಂಬ … Read more