--Ads--

ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ : ಶಿಡ್ಲಘಟ್ಟ ತಾಲ್ಲೂಕಿಗೆ ಶೇ 92.39 ಫಲಿತಾಂಶ 

On: April 25, 2026 1:56 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ : ಶಿಡ್ಲಘಟ್ಟ ತಾಲ್ಲೂಕಿಗೆ ಶೇ 92.39 ಫಲಿತಾಂಶ 

ಶಿಡ್ಲಘಟ್ಟ : 2025-26 ನೇ ಸಾಲಿನ‌ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಶಿಡ್ಲಘಟ್ಟ ತಾಲ್ಲೂಕಿಗೆ ಶೇ 92.39ರಷ್ಟು ಫಲಿತಾಂಶ ಬಂದಿದ್ದು ಕಳೆದ ವರ್ಷಕ್ಕಿಂತಲೂ ಶೇ 23ರಷ್ಟು ಫಲಿತಾಂಶ ಸುಧಾರಿಸಿದ್ದು, ವಿದ್ಯಾರ್ಥಿಗಳು ಹಾಗು ಪೋಷಕರಲ್ಲಿ ಖುಷಿ ತಂದಿದೆ,ಆದರೆ ಜಿಲ್ಲೆಯಲ್ಲಿ 2ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದ್ದು ಮುಜುಗರಕ್ಕೆ ಈಡಾಗಿದೆ.
1217 ಬಾಲಕರು,1256 ಬಾಲಕಿಯರು ಸೇರಿ ಒಟ್ಟು 2472 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸರ್ಕಾರಿ ಶಾಲೆಗಳ 846 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 421 ವಿದ್ಯಾರ್ಥಿಗಳು, ಅನುದಾನ ರಹಿತ ಶಾಲೆಗಳ1205 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದಿದ್ದರು.

ಖಾಸಗಿ ಶಾಲೆಗಳ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು, ಈ ಬಾರಿಯು ಬಾಲಕಿಯರೆ ಫಲಿತಾಂಶದಲ್ಲೂ ಮುಂಚೂಣಿಯಲ್ಲಿದ್ದಾರೆ.

ಸರ್ಕಾರಿ ಶಾಲೆಗಳು-ಶೇ92.43ರಷ್ಟು, ಅನುದಾನಿತ ಶಾಲೆಗಳು-ಶೇ86.93ರಷ್ಟು ಹಾಗೂ ಖಾಸಗಿ ಶಾಲೆಗಳು ಶೇ 94.43ರಷ್ಟು ಫಲಿತಾಂಶ ದಾಖಲಾಗಿದೆ.
ಹನುಮಂತಪುರ ಗೇಟ್ ನ ಬಿಜಿಎಸ್ ಶಾಲೆಯ ರಾಜಿ ಕಲಂಧರಿ 621(ಶೇ99.36) ಅಂಕಗಳನ್ನು ಪಡೆದು ಶಿಡ್ಲಘಟ್ಟ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ,ಜತಗೆ
ಇದೇ ಶಾಲೆಯ ಕಲಾಶ್ರೀ, ಟಿ.ಡಿ.ಸ್ಕೃತಿ ಹಾಗೂ ಜಂಗಮಕೋಟೆ ಕ್ರಾಸ್ ನ ಜ್ಞಾನ ಜ್ಯೋತಿ ಶಾಲೆಯ ನಂದನ್ ಕುಮಾ‌ರ್ ತಲಾ 620(ಶೇ99.2)ರಷ್ಟು ಅಂಕಗಳನ್ನು ಪಡೆದು ಮೂವರು ಕೂಡ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ,ಇನ್ನು ಬಿಜಿಎಸ್‌ ಶಾಲೆಯ ಕವನ-619(ಶೇ99) ಅಂಕ ಪಡೆದು ತೃತೀಯ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ.

ಸರ್ಕಾರಿ 6 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ, ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆ, ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆ,ಸಾದಲಿ ಸರ್ಕಾರಿ ಪ್ರೌಢಶಾಲೆ, ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆ, 11ನೇ ಮೈಲಿಗಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪುರಬೈರನಹಳ್ಳಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯು ಶೇ 100ರಷ್ಟು ಫಲಿತಾಂಶ ದಾಖಲಿಸಿವೆ.

ಅನುದಾನಿತ ಶಾಲೆ ದಿಬ್ಬೂರಹಳ್ಳಿಯ ಶ್ರೀವೆಂಕಟೇಶ್ವರ ಪ್ರೌಢಶಾಲೆಗೂ ಶೇ 100ರಷ್ಟು ಫಲಿತಾಂಶ ಬಂದಿದೆ.
ಇನ್ನು ಅನುದಾನ ರಹಿತ ಹನುಮಂತಪುರ ಗೇಟ್ ನ ಬಿಜಿಎಸ್ ಶಾಲೆ,ಜಂಗಮಕೋಟೆ ಕ್ರಾಸ್ ನ ಜ್ಞಾನ ಜ್ಯೋತಿ ಪ್ರೌಢಶಾಲೆ,ಎಚ್.ಕ್ರಾಸ್ ನ ಪಂಚಮುಖಿ ಪ್ರೌಢಶಾಲೆ,
ನಗರದ ಆಶಾಕಿರಣ ಅಂಧಮಕ್ಕಳ ವಸತಿ ಶಾಲೆ, ಈ ತಿಮ್ಮಸಂದ್ರದ ಸಾಹಿತ್ಯ ಪ್ರೌಢಶಾಲೆ, ಬೂದಾಳ ಬಳಿಯ ರಾಯಲ್ ಪ್ರೌಢಶಾಲೆ, ನಗರದ ಕ್ರೆಸೆಂಟ್ ಶಾಲೆ, ಪ್ರೆಸಿಡೆನ್ಸಿ ಶಾಲೆ, ಜಂಗಮಕೋಟೆಯ ಬಾಲಾಜಿ ವಿದ್ಯಾನಿಕೇತನ ಶಾಲೆ,ಮೇಲೂರಿನ ಸೇಂಟ್ ಥಾಮಸ್ ಶಾಲೆ, ಚಿಕ್ಕದಾಸರಹಳ್ಳಿಯ ಶ್ರೀಲಕ್ಷ್ಮಿ ವಿದ್ಯಾನಿಕೇತನ ಶಾಲೆ, ಎಚ್.ಕ್ರಾಸ್ ನ ಸುಮುಖ ಆಂಗ್ಲ ಪ್ರೌಢಶಾಲೆ, ವಿದ್ಯಾಜ್ಯೋತಿ ಶಾಲೆ, ಕ್ಲಿಫರ್ಡ್ ಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ ಬಂದಿದೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರೋಗಿಗಳಿಗೆ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಣೆ ಮಾಡಿದ  ಪೂಲಕುಂಟಲಹಳ್ಳಿ ರಘುನಾಥರೆಡ್ಡಿ 

ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ: ಪಾಳುಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಣೆ

ರಾಜ್ಯದಲ್ಲಿ ಕರವೇ ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ : ಕರವೇ ಅಧ್ಯಕ್ಷ ಮುನಿರಾಜ್(ಕುಟ್ಟಿ)

ಬೆಸ್ಕಾಂ ಖಾಸಗೀಕರಣಕ್ಕೆ ನೌಕರರು ,ಗುತ್ತಿಗೆದಾರರಿಂದ ವಿರೋಧ !

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು 3 ವರ್ಷ ಮುಗಿದಿದೆ ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡರ ಕೊಡುಗೆ ಏನು :  ಪೂಲಕುಂಟಲಹಳ್ಳಿ ರಘುನಾಥ್ ರೆಡ್ಡಿ

ರೈತರಿಗೆ ಹನಿ ನೀರಾವರಿ ಹಾಗು ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡಬೇಕು :  ಹಿತ್ತಲಹಳ್ಳಿ ಗೋಪಾಲಗೌಡ ಒತ್ತಾಯ