“ಜನಸೇವೆಯಿಂದ ದೇಶಸೇವೆ” ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನದ ಮೂಲ ಧ್ಯೇಯ

ವಿಜಯ ದರ್ಪಣ ನ್ಯೂಸ್…. “ಜನಸೇವೆಯಿಂದ ದೇಶಸೇವೆ” ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನದ ಮೂಲ ಧ್ಯೇಯ :ನಿತಿನ್ ನಬಿನ್ “ಜನಸೇವೆಯಿಂದ ದೇಶಸೇವೆ” ಎಂಬುದು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೀವನದ ಮೂಲ ಧ್ಯೇಯವಾಗಿದೆ. ಅವರು ದೇಶದ ನಾಯಕತ್ವ ವಹಿಸಿಕೊಂಡ ಸಂದರ್ಭದಲ್ಲಿ ಭಾರತ ಅನೇಕ ವಿಷಮ ಪರಿಸ್ಥಿತಿಗಳನ್ನು ಎದುರಿಸುತ್ತಿತ್ತು. ಆ ಸಮಯದಲ್ಲಿ ಅವರು ದೇಶದ ಹಿತದೃಷ್ಟಿಯಿಂದ ಹೊಸ ನೀತಿಗಳನ್ನು ರೂಪಿಸಿ, ಹೊಸ ಕಾರ್ಯಕ್ರಮಗಳನ್ನು ಆರಂಭಿಸಿ, ಜನಸಾಮಾನ್ಯರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದ ಅನೇಕ ಯೋಜನೆಗಳನ್ನು … Read more

ನದಿ ಮೂಲಗಳಿಲ್ಲದ ಬಯಲುಸೀಮೆಯಲ್ಲಿ ತೀವ್ರ ಬರಗಾಲ : ರೈತನ ಬದುಕು ಬೀದಿಗೆ

ವಿಜಯ ದರ್ಪಣ ನ್ಯೂಸ್… ನದಿ ಮೂಲಗಳಿಲ್ಲದ ಬಯಲುಸೀಮೆಯಲ್ಲಿ ತೀವ್ರ ಬರಗಾಲ : ರೈತನ ಬದುಕು ಬೀದಿಗೆ ಬಯಲುಸೀಮೆಯ ವಿಶಾಲ ಬರಡು ನೆಲದಲ್ಲಿ ತೀವ್ರ ಬರಗಾಲ ಆವರಿಸಿದೆ. ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳು ಒಣಗುತ್ತಿವೆ. ಮಾವಿನ ತೋಟಗಳು ಒಣಗುತ್ತಿವೆ. ಕೊಳವೆಬಾವಿಗಳು ಬತ್ತಿ ಹೋಗಿವೆ – ಸಾವಿರದ ಐನೂರ ಅಡಿ ಆಳ ಕೊರೆದರೂ ಹನಿ ನೀರಿನ ಸುಳಿವಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ರೈತರು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ ಕುಡಿಯುವ … Read more

ತವರುಮನೆಗೆ ಬಂದ ಗೌರಿ ,  ಗಣಪನ ಆಗಮನ

ವಿಜಯ ದರ್ಪಣ ನ್ಯೂಸ್…. ತವರುಮನೆಗೆ ಬಂದ ಗೌರಿ ,  ಗಣಪನ ಆಗಮನ ಗೌರಿ–ಗಣೇಶ ಸೌಹಾರ್ದದ ಹಬ್ಬ *ಭಾದ್ರಪದದ ತಂಗಾಳಿ ಬೀಸಿದಾಗ *ತದಿಗೆಯ ಬೆಳಕಲಿ ಹಬ್ಬ ಅರಳಿದಾಗ *ತವರುಮನೆಗೆ ಬಂದ ಮಗಳಂತೆ *ಗೌರಿಯನ್ನು ಬರಮಾಡಿಕೊಳ್ಳುವ ಸಂಭ್ರಮ ಕಾಣುತ್ತದೆ *ಅರಿಶಿನದ ಬಣ್ಣದಲಿ ಮಮತೆ *ಕುಂಕುಮದ ರಂಗಿನಲಿ ಸೌಭಾಗ್ಯ *ಬಾಗಿನದ ಸಿಹಿಯಲಿ ಬಂಧುತ್ವ *ತಲೆಮಾರುಗಳಿಂದ ಹರಿದು ಬಂದ *ನಮ್ಮ ನಾಡಿನ ಸಂಸ್ಕೃತಿಯ ಸೊಗಡು *ಮರುದಿನ ಚತುರ್ಥಿಯ ಶುಭದಿನ *ಗಣೇಶ ಚತುರ್ಥಿಯ ಸಂಭ್ರಮ ಮನೆಮನೆ ತುಂಬುತ್ತದೆ *ಮಕ್ಕಳ ನಗುವಿನ ಕಲರವದ ನಡುವೆ *ಬೀದಿ … Read more

” ಜನಿಸಿದಾಗಲೇ ನಿನ್ನ ಹೆಸರು, ಧರ್ಮ, ರಾಷ್ಟ್ರೀಯತೆ, ಕುಲ ಗೋತ್ರಗಳನ್ನು ತೀರ್ಮಾನಿಸುತ್ತಾರೆ. ಇದ್ಯಾವುದೂ ನಿನ್ನ ಆಯ್ಕೆಯಲ್ಲ. ನಿನ್ನದಲ್ಲದ ಈ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಬದುಕೆಲ್ಲಾ ಹೋರಾಡುವೆ ” ಅರ್ಥರ್ ಶೊಪೆನ್ಹಾರ್…..

ವಿಜಯ ದರ್ಪಣ ನ್ಯೂಸ್….. ” ಜನಿಸಿದಾಗಲೇ ನಿನ್ನ ಹೆಸರು, ಧರ್ಮ, ರಾಷ್ಟ್ರೀಯತೆ, ಕುಲ ಗೋತ್ರಗಳನ್ನು ತೀರ್ಮಾನಿಸುತ್ತಾರೆ. ಇದ್ಯಾವುದೂ ನಿನ್ನ ಆಯ್ಕೆಯಲ್ಲ. ನಿನ್ನದಲ್ಲದ ಈ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಬದುಕೆಲ್ಲಾ ಹೋರಾಡುವೆ ” ಅರ್ಥರ್ ಶೊಪೆನ್ಹಾರ್….. ಟಿ. ನರಸೀಪುರದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಧನಂಜಯ್ ಅವರು ಸರ್ಕಾರ ಮತ್ತು ಪೊಲೀಸ್ ಮುಖ್ಯಸ್ಥರ ಆದೇಶದಂತೆ, ಗಣೇಶ ಹಬ್ಬದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಒಂದು ಶಾಂತಿ ಸಭೆಯನ್ನು ಮಾಡಿ, ಸ್ಥಳೀಯ ಯುವಕರನ್ನು ಕರೆಸಿ ಕೆಲವು ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಸುಮಾರು … Read more

ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದ ಪಡೆದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ

ವಿಜಯ ದರ್ಪಣ ನ್ಯೂಸ್….. ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದ ಪಡೆದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ತಾಂಡವಪುರ ಸೆಪ್ಟೆಂಬರ್ 13 ಮೈಸೂರು ಜಿಲ್ಲಾ ಗ್ರಾಮಂತರ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣನವರು ಬೆಂಗಳೂರಿನ ಸಿದ್ದರಾಮಯ್ಯನವರ ಗೃಹಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಸನ್ಮನ್ಸಿ ಗೌರವಿಸಿ ಆಶೀರ್ವಾದ ಪಡೆದರು. ಇದೆ ವೇಳೆ ಸನ್ಮಾನ ಸ್ವೀಕರಿಸಿ ಬಿ ಬಸವಣ್ಣನವರಿಗೆ ಆಶೀರ್ವಾದ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಜಿಲ್ಲಾ … Read more

ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಗಣೇಶೋತ್ಸವ ಆಚರಣೆಗೆ ತೀವ್ರ ಷರತ್ತು ಹಾಗೂ ನಿಬಂಧನೆಗಳನ್ನು ಹಾಕುವುದರ ಜೊತೆಗೆ ಯುವಕರಿಗೆ ಬೆದರಿಕೆ

ವಿಜಯ ದರ್ಪಣ ನ್ಯೂಸ್…. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಗಣೇಶೋತ್ಸವ ಆಚರಣೆಗೆ ತೀವ್ರ ಷರತ್ತು ಹಾಗೂ ನಿಬಂಧನೆಗಳನ್ನು ಹಾಕುವುದರ ಜೊತೆಗೆ ಯುವಕರಿಗೆ ಬೆದರಿಕೆ   ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಗಣೇಶೋತ್ಸವ ಆಚರಣೆಗೆ ತೀವ್ರ ಷರತ್ತು ಹಾಗೂ ನಿಬಂಧನೆಗಳನ್ನು ಹಾಕುವುದರ ಜೊತೆಗೆ ಯುವಕರಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿ, ಟಿ ನರಸೀಪುರ ದಲ್ಲಿ ಬಿಜೆಪಿ ಪಕ್ಷದ ಮುಖಂಡರು ಭಾರಿ ಪ್ರತಿಭಟನೆ ಮಾಡಿದರು. ಮೈಸೂರು ಜಿಲ್ಲೆ ಟಿ ನರಸೀಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಧನಂಜಯ ರವರು ನಿನ್ನೆ ಗಣೇಶೋತ್ಸವ ಆಚರಿಸುವ ಕುರಿತು … Read more

ಕನ್ಯಾಘಟ್ಟದಲ್ಲಿ 100 ಸಾರಿಗೆ ಬಸ್‌ಗಳ ಭರವಸೆ : ದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸಚಿವ ಭೈರತಿ ಸುರೇಶ್ ಘೋಷಣೆ

ವಿಜಯ ದರ್ಪಣ ನ್ಯೂಸ್…. ಕನ್ಯಾಘಟ್ಟದಲ್ಲಿ 100 ಸಾರಿಗೆ ಬಸ್‌ಗಳ ಭರವಸೆ :ದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸಚಿವ ಭೈರತಿ ಸುರೇಶ್ ಘೋಷಣೆ ನಾಗಮಂಗಲ, ಸೆ.13: ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ಸಹೋದರರಾದ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಉದ್ಯಮಿ ಸ್ಟಾರ್ ಚಂದ್ರು ಹಾಗೂ ವೆಂಕಟೇಶ್ ಅವರ ಸಹಕಾರದಲ್ಲಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಲಾದ ನೂತನ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಬಿ.ಎಸ್. ಭೈರತಿ ಸುರೇಶ್ ಅವರು ಮಂಡ್ಯ ಜಿಲ್ಲೆಗೆ 100 ಹೊಸ ಸಾರಿಗೆ ಬಸ್‌ಗಳನ್ನು ನೀಡುವುದಾಗಿ ಭರವಸೆ … Read more

ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ,  ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ವಿಜಯ ದರ್ಪಣ ನ್ಯೂಸ್…. ದೊಡ್ಡ ಕವಲಂದೆ ಗ್ರಾಮದ ಶಾದಿ ಮಹಲ್‌ನಲ್ಲಿ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ,  ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್ ತಾಂಡವಪುರ ಸೆಪ್ಟೆಂಬರ್ 12 ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವದೊಡ್ಡ ಕವಲಂದೆ ಗ್ರಾಮದ ಶಾದಿ ಮಹಲ್‌ನಲ್ಲಿ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಆಗಲೇ ಇದ್ದ ಅಧಿಕಾರಿಗಳಿಗೆ ಸಾರ್ವಜನಿಕ … Read more

ಮೈಸೂರಿನ ಪೌರಕಾರ್ಮಿಕ ಬೇಡಿಕೆಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದೆ. ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್

ವಿಜಯ ದರ್ಪಣ ನ್ಯೂಸ್….. ಮೈಸೂರಿನ ಪೌರಕಾರ್ಮಿಕ ಬೇಡಿಕೆಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದೆ. ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್ ತಾಂಡವಪುರ ಸೆಪ್ಟೆಂಬರ್ 12ಮೈಸೂರಿನ ಪೌರಕಾರ್ಮಿಕ ಸಮುದಾಯ ಭವನದಲ್ಲಿ ಪೌರಕಾರ್ಮಿಕರ ಬೇಡಿಕೆಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿ ಆಲಿಸಿದ ಹಿರಿಯ ಪತ್ರಕರ್ತರು . ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್ ರವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು ಪೌರಕಾರ್ಮಿಕ ಬಂಧುಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಜ್ಞಾನಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲೋನಿಯಲ್ಲಿ ಎರಡು ಗ್ರಂಥಾಲಯವನ್ನು ನನ್ನ ಅನುದಾನದಲ್ಲಿ ನಿರ್ಮಿಸಿಕೊಡಲಾಗುವುದು. ಶ್ರಮಿಕ … Read more

ಚೌಡಸಂದ್ರದ ಶ್ರೀ ಆಂಜನೇಯಸ್ವಾಮಿಗೆ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ವಿಜಯ ದರ್ಪಣ ನ್ಯೂಸ್….. ಚೌಡಸಂದ್ರದ ಶ್ರೀ ಆಂಜನೇಯಸ್ವಾಮಿಗೆ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ​ಶಿಡ್ಲಘಟ್ಟ: ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ನೆಲೆಸಿ, ಭಕ್ತಾದಿಗಳ ಕಷ್ಟ-ಕಾರ್ಪಣ್ಯಗಳನ್ನು ಪರಿಹರಿಸುತ್ತಿರುವ ವಿಜಯನಗರ ಕಾಲದ, ಶ್ರೀ ವ್ಯಾಸರಾಯರು ಪ್ರತಿಷ್ಠಾಪಿಸಿದ ಸುಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು. ಅಮಾವಾಸ್ಯೆಯ ಶುಭ ದಿನದಂದು ಸ್ವಾಮಿಯ ಮೂಲ ವಿಗ್ರಹ ಹಾಗೂ ನೂತನ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಧಾರ್ಮಿಕ ಸೇವೆಗಳು ನೆರವೇರಿದವು. … Read more