ಬೆಂಗಳೂರಿನ ಪೌರಕಾರ್ಮಿಕರಿಗಾಗಿ ಅಪೋಲೊ ಆಸ್ಪತ್ರೆಯಿಂದ ಸ್ತನ ಆರೋಗ್ಯ ತಪಾಸಣಾ ಶಿಬಿರ

ವಿಜಯ ದರ್ಪಣ ನ್ಯೂಸ್….. ಬೆಂಗಳೂರಿನ ಪೌರಕಾರ್ಮಿಕರಿಗಾಗಿ ಅಪೋಲೊ ಆಸ್ಪತ್ರೆಯಿಂದ ಸ್ತನ ಆರೋಗ್ಯ ತಪಾಸಣಾ ಶಿಬಿರ ಮೂರು ದಿನಗಳ ಉಚಿತ ತಪಾಸಣಾ ಶಿಬಿರ – ನಗರದ ಸ್ವಚ್ಛತಾ ಕಾರ್ಯಕರ್ತೆಯರ ಆರೋಗ್ಯದ ಕಡೆಗೆ ಒಂದು ಹೆಜ್ಜೆ ಬೆಂಗಳೂರು, ಅಕ್ಟೋಬರ್ 24, 2026: ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ, ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯು ಜಿಬಿಎ ಪೌರಕಾರ್ಮಿಕರಿಗಾಗಿ ಮೂರು ದಿನಗಳ ಉಚಿತ ಸ್ತನ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ಸುಮಾರು 100 ಪೌರಕಾರ್ಮಿಕ ಮಹಿಳೆಯರಿಗೆ ತಪಾಸಣೆ ನಡೆಸಲಾಯಿತು. … Read more

ಇದು ನಿಜವಲ್ಲವೇ…….

ವಿಜಯ ದರ್ಪಣ ನ್ಯೂಸ್…… ಇದು ನಿಜವಲ್ಲವೇ……. ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವಿಸಬೇಕು. ಅಕ್ಷರಸ್ಥರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಮೋಸ, ವಂಚನೆ, ಭ್ರಷ್ಟಾಚಾರ ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿ ಅನುಮಾನಾಸ್ಪದವಾಗಿದೆ ಎಂದು ಊಹಿಸಬಹುದು. ಆಸ್ಪತ್ರೆ, ಸಿಸಿ ಟಿವಿ, ಮೆಡಿಕಲ್ ಲ್ಯಾಬೋರೇಟರಿಗಳು, ಪೋಲೀಸ್ ಸ್ಟೇಷನ್ನುಗಳು ಹೆಚ್ಚಳವಾದಷ್ಟು ದೇಶದ ಅಭಿವೃದ್ಧಿ ಹಿಮ್ಮುಖವಾಗಿದೆ ಎಂದು … Read more

ಶೃಂಗೇರಿಯಲ್ಲಿ ಆರೂಢಭಾರತೀ ಶ್ರೀಗಳಿಗೆ ತಡೆ

ವಿಜಯ ದರ್ಪಣ ನ್ಯೂಸ್…… ಶೃಂಗೇರಿಯಲ್ಲಿ ಆರೂಢಭಾರತೀ ಶ್ರೀಗಳಿಗೆ ತಡೆ ಶೃಂಗೇರಿಯ ಶ್ರೀಗಳ ಭೇಟಿಗೆ ಆಗಮಿಸಿದ ಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿಯವರ ಪ್ರವೇಶ ತಡೆದ ಪ್ರಸಂಗ ನಡೆದಿದೆ. ನಿನ್ನೆ ಶುಕ್ರವಾರ ಸಂಜೆ ಈ ಘಟನೆ ಜರುಗಿದೆ. ಮಠದ ಸಂಪ್ರದಾಯದಂತೆ ಅಂಗಿಯನ್ನು ಕಳಚುವಂತೆ ಕಾವಲುಗಾರ ಸ್ವಾಮೀಜಿಯವರಿಗೆ ಒರಟಾಗಿ ಹೇಳಿದ್ದಾನೆ. ಸ್ವಾಮೀಜಿ ಒಪ್ಪದಿದ್ದಾಗ ಪ್ರವೇಶ ತಡೆದಿದ್ದಾನೆ. ಆಗ ಒಳಗಡೆ ಕೆಲಸಗಾರ ಅಂಗಿಯನ್ನು ಧರಿಸಿಯೇ ಕೆಲಸ ಮಾಡುತ್ತಿರುವುದು ಸ್ವಾಮೀಜಿಯ ಕಣ್ಣಿಗೆ ಬಿದ್ದಿದೆ. ಅದನ್ನು ಕಾವಲುಗಾರನಿಗೆ ತೋರಿಸಿ ಆತನ ಅಂಗಿ ಬಿಚ್ಚಿಸು … Read more

ತಾಯಿ ಭಾಷೆಯ ಹಬ್ಬ, ಕರುನಾಡ ಸಂಭ್ರಮ….

ವಿಜಯ ದರ್ಪಣ ನ್ಯೂಸ್….. ತಾಯಿ ಭಾಷೆಯ ಹಬ್ಬ, ಕರುನಾಡ ಸಂಭ್ರಮ…. ಕನ್ನಡ ರಾಜ್ಯೋತ್ಸವದ ಹೊಸ್ತಿಲಿನಲ್ಲಿ ನನ್ನ ತಾಯಿ ಭಾಷೆಯ ಬಗ್ಗೆ ಒಂದಷ್ಟು ಅನಿಸಿಕೆ………… ಸಾಮಾಜಿಕ ಜಾಲತಾಣಗಳಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಬೀರಿದ ಪ್ರಭಾವ………….. ಸುಮಾರು 10/15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಎಕ್ಸ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳ ಸಂಪರ್ಕ ಕ್ರಾಂತಿಯಿಂದ ಆದ ಕೆಲವು ಒಳ್ಳೆಯ ಬೆಳವಣಿಗೆಗಳಲ್ಲಿ ಕನ್ನಡ … Read more

ದೊಡ್ಡನಲ್ಲೂರಹಳ್ಳಿಯಲ್ಲಿ ‘ವಾಲ್ಮೀಕಿ ವಾಲಿಬಾಲ್ ಕಪ್ ಸೀಸನ್–1’ಗೆ ಚಾಲನೆ

ವಿಜಯ ದರ್ಪಣ ನ್ಯೂಸ್…. ದೊಡ್ಡನಲ್ಲೂರಹಳ್ಳಿಯಲ್ಲಿ ‘ವಾಲ್ಮೀಕಿ ವಾಲಿಬಾಲ್ ಕಪ್ ಸೀಸನ್–1’ಗೆ ಚಾಲನೆ ತಾವರೆಕೆರೆ : ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ‘ವಾಲ್ಮೀಕಿ ವಾಲಿಬಾಲ್ ಕಪ್ ಸೀಸನ್–1’ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಸಮಾಜ ಸೇವಕರು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರಾದ ಕಿಟ್ಟಿ ಅವರ ನೇತೃತ್ವದಲ್ಲಿ ಟೂರ್ನಮೆಂಟ್ ಆಯೋಜಿಸಲಾಗಿದ್ದು, ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವುದು, ಆರೋಗ್ಯದ ಮಹತ್ವವನ್ನು ತಿಳಿಸುವುದು ಹಾಗೂ ಸಮುದಾಯದ ಯುವಕರಲ್ಲಿ ಒಗ್ಗಟ್ಟು ಮೂಡಿಸುವ ಉದ್ದೇಶವನ್ನು ಹೊಂದಿದೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕ್ರೀಡೆಗಳು ಕೇವಲ … Read more

ಹಂಡಿಗನಾಳ ಮಹಿಳಾ ಡೈರಿ ಅಧ್ಯಕ್ಷೆಯಾಗಿ ನಳಿನಾ, ಉಪಾದ್ಯಕ್ಷೆಯಾಗಿ ಮುನಿರತ್ಮಮ್ಮ  ಆಯ್ಕೆ

ವಿಜಯ ದರ್ಪಣ ನ್ಯೂಸ್……. ಹಂಡಿಗನಾಳ ಮಹಿಳಾ ಡೈರಿ ಅಧ್ಯಕ್ಷೆಯಾಗಿ ನಳಿನಾ, ಉಪಾದ್ಯಕ್ಷೆಯಾಗಿ ಮುನಿರತ್ಮಮ್ಮ ಆಯ್ಕೆ ಶಿಡ್ಲಘಟ್ಟ : ತಾಲ್ಲೂಕಿನ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆಯಾಗಿ  ಎಸ್.ನಳಿನ ತಿಮ್ಮರಾಯಪ್ಪ, ಉಪಾಧ್ಯಕ್ಷೆಯಾಗಿ ಮುನಿರತ್ನಮ್ಮ ರಾಮಚಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ಅಧ್ಯಕ್ಷೆ, ಉಪಾಧ್ಯಕ್ಷೆ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಎಸ್.ನಳಿನ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಮುನಿರತ್ನಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಈ ಇಬ್ಬರನ್ನು ಅವಿರೋಧವಾಗಿ … Read more

ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದೆ ಶಾಸಕ ದರ್ಶನ್ ಧ್ರುವನಾರಾಯಣ್

ವಿಜಯ ದರ್ಪಣ ನ್ಯೂಸ್….. ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದೆ ಶಾಸಕ ದರ್ಶನ್ ಧ್ರುವನಾರಾಯಣ್ ತಾಂಡವಪುರ ಅಕ್ಟೋಬರ್ 24 ಮೈಸೂರು ಜಿಲ್ಲೆ, ದಕ್ಷಿಣಕಾಶಿ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡು ನಗರಸಭೆ ಕಚೇರಿ ಆವರಣದಲ್ಲಿ ಇಂದು ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕರು ತಮ್ಮ ನಂಜನಗೂಡು ವಿಧಾನಸಭಾ ಕ್ಷೇತ್ರದ … Read more

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕೋತನೂರು ಕೋಡಹಳ್ಳಿ ಬೆಟ್ಟಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ್ ಪ್ರಸಾದ್ ಭೂಮಿ ಪೂಜೆ

ವಿಜಯ ದರ್ಪಣ ನ್ಯೂಸ್..,….. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕೋತನೂರು ಕೋಡಹಳ್ಳಿ ಬೆಟ್ಟಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ್ ಪ್ರಸಾದ್ ಭೂಮಿ ಪೂಜೆ ತಾಂಡವಪುರ ಅಕ್ಟೋಬರ್ 24 ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕೋತನೂರು ಕೋಡಹಳ್ಳಿ ಬೆಟ್ಟಹಳ್ಳಿ ಗ್ರಾಮಗಳಲ್ಲಿ ಸುಮಾರು ಒಂದು ಕೋಟಿ 30 ಲಕ್ಷ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ್ ಪ್ರಸಾದ್ ಭೂಮಿ ಪೂಜೆ ನೆರೆವೇರಿಸಿದರು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕೂತನೂರು ಗ್ರಾಮದಲ್ಲಿ ಅಂದಾಜು ₹50 ಲಕ್ಷ … Read more

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ

ವಿಜಯ ದರ್ಪಣ ನ್ಯೂಸ್……… ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಡಾ. ಹೆಗ್ಗಡೆಯವರ ಸೇವೆ-ಸಾಧನೆ ವಿಶ್ವಮಾನ್ಯವಾಗಿದೆ. ರಾಘವೇಂದ್ರ ಶ್ರೀನಿವಾಸ ಭಟ್ ಧರ್ಮಸ್ಥಳ: ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಗನುಗುಣವಾಗಿ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಸಾತ್ವಿಕತ್ಯಾಗದೊಂದಿಗೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವಾಕಾರ್ಯ ಹಾಗೂ … Read more

ರೈತರ ದಸರಾ ಕೃಷಿ ವಸ್ತು ಪ್ರದರ್ಶನದಲ್ಲಿ ಬಳ್ಳಿ ಆಲೂಗಡ್ಡೆ , ವೈವಿಧ್ಯಮಯ ಬೀಜ ತಳಿಗಳನ್ನು ಪ್ರದರ್ಶಿದ ಪ್ರಗತಿಪರ ರೈತ ಅಪ್ಪೇಗೌಡನಹಳ್ಳಿ ಎಂ.ತ್ಯಾಗರಾಜ್

ವಿಜಯ ದರ್ಪಣ ನ್ಯೂಸ್…… ರೈತರ ದಸರಾ ಕೃಷಿ ವಸ್ತು ಪ್ರದರ್ಶನದಲ್ಲಿ ಬಳ್ಳಿ ಆಲೂಗಡ್ಡೆ , ವೈವಿಧ್ಯಮಯ ಬೀಜ ತಳಿಗಳನ್ನು ಪ್ರದರ್ಶಿದ ಪ್ರಗತಿಪರ ರೈತ ಅಪ್ಪೇಗೌಡನಹಳ್ಳಿ ಎಂ.ತ್ಯಾಗರಾಜ್ ಶಿಡ್ಲಘಟ್ಟ : ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಪ್ರಗತಿಪರ ರೈತರಾದ ಎಂ.ತ್ಯಾಗರಾಜ್‌ ಅವರು ಮೈಸೂರಿನಲ್ಲಿ ನಡೆದ ರೈತರ ದಸರಾ ಪ್ರದರ್ಶನದಲ್ಲಿ ಪರಿಚಯಿಸಿದ “ಬಳ್ಳಿ ಆಲೂಗಡ್ಡೆ” ಪ್ರಮುಖ ಆಕರ್ಷಣೆಯಾಗಿತ್ತು ಶಾಸಕ ತನ್ವೀರ್ ಸೇಠ್ ಅವರು ಬಳ್ಳಿ ಆಲೂಗಡ್ಡೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿ, ಅದನ್ನು ತಮ್ಮ ತೋಟದಲ್ಲಿ ನೆಡುವುದಾಗಿ ಅವರು ತಿಳಿಸಿದರು. 3 ದಿನ ನಡೆದ … Read more