ಇದು ಮರೀನಾ ಬೀಚ್ ಅಲ್ಲ ಮಳೆ ಬಂದರೆ ರಸ್ತೆ ಜಲಾವೃತ: ಪುರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೇ ನಿಮ್ಮ ಜವಾಬ್ದಾರಿ ಎಲ್ಲಿದೆ?

ವಿಜಯ ದರ್ಪಣ ನ್ಯೂಸ್….. ಇದು ಮರೀನಾ ಬೀಚ್ ಅಲ್ಲ ಮಳೆ ಬಂದರೆ ರಸ್ತೆ ಜಲಾವೃತ: ಪುರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೇ ನಿಮ್ಮ ಜವಾಬ್ದಾರಿ ಎಲ್ಲಿದೆ? ಕುಶಾಲನಗರ: ಮೇಲೆ ಕಾಣುತ್ತಿರುವ ಫೋಟೋ ದೃಶ್ಯ ಕೇರಳದ ಸಮುದ್ರ ತೀರವಲ್ಲ ತಮಿಳುನಾಡಿನ ಮರೀನಾ ಬೀಚ್ ಕೂಡ ಅಲ್ಲ. ಇದು ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಬಿ.ಎಂ. ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ದೃಶ್ಯ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿರುವುದು ರಸ್ತೆ ಮತ್ತು ಚರಂಡಿ ವ್ಯವಸ್ಥೆಯ ನಿರ್ವಹಣೆಯ … Read more

ನರಕ

ವಿಜಯ ದರ್ಪಣ ನ್ಯೂಸ್…. ನರಕ ತನ್ನ ಪುಟ್ಟಂಬದ ಸಂಸಾರಕ್ಕಾಗಿ ಹಗಲಿರುಳು ಬೆವರು ಸುರಿಸುವವನು ಹಸಿವನ್ನು ಮರೆತು ದುಡಿಯುವವನು ತನ್ನ ಕನಸುಗಳನ್ನೇ ಬಲಿಕೊಡುವವನು ಮನೆಗೆ ಮರಳುವಾಗ ನಗುವ ಮುಖ ಮನದೊಳಗೆ ಸಾವಿರ ನೋವಿನ ಸುಳಿ ಮಕ್ಕಳ ನಾಳೆ ಬೆಳಗಲೆಂದು ತನ್ನ ಇಂದನ್ನೇ ಕತ್ತಲೆಗೆ ತಳ್ಳುವವನು ಮನೆಗೆ ಮರಳಿದಾಗ ಪ್ರೀತಿ ಸಿಗದಿದ್ದರೆ ಮಾತಿಗೊಂದು ಮುಳ್ಳು ಚುಚ್ಚಿದರೆ ದಿನವಿಡೀ ಹೊತ್ತ ನೋವಿನ ಮೇಲೆ ಮತ್ತೊಂದು ನೋವು ಬಂದು ಕುಳಿತರೆ ಅವನೂ ಮನುಷ್ಯನೇ ಅಲ್ಲವೇ? ಅವನಿಗೂ ಕನಸುಗಳಿಲ್ಲವೇ? ಕಣ್ಣೀರನ್ನು ಮರೆಮಾಚುವ ಎದೆಯೊಳಗೆ ನೋವಿನ … Read more

ಆ ” ವ್ಯಕ್ತಿಗೆ ” ಕನಿಷ್ಠ ಎರಡು ವರ್ಷ ನಿಷೇಧ ಬೇಡವೇ……

ವಿಜಯ ದರ್ಪಣ ನ್ಯೂಸ್….. ಆ ” ವ್ಯಕ್ತಿಗೆ ” ಕನಿಷ್ಠ ಎರಡು ವರ್ಷ ನಿಷೇಧ ಬೇಡವೇ…….. ಆತನ ಪ್ರಶ್ನಿಸುವ ಧೈರ್ಯವನ್ನು ಪ್ರಶಂಶಿಸುತ್ತಾ, ಆದರೆ……. ಕರ್ನಾಟಕದ ಎಲ್ಲಾ ರೀತಿಯ ಪತ್ರಕರ್ತ ಸಂಘಟನೆಗಳ ಪದಾಧಿಕಾರಿಗಳೇ ಮತ್ತು ಸದಸ್ಯರುಗಳೇ…… ನಿಮ್ಮ ಘನತೆ, ಮಾಧ್ಯಮದ ಪಾವಿತ್ರ್ಯತೆ, ಜನರ ವಿಶ್ವಾಸ ಮರಳಿ ಗಳಿಸುವ ಒಂದು ಅವಕಾಶ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟ, ವಾಣಿಜ್ಯೋದ್ಯಮಿಗಳ ಸಂಘ, ವರ್ತಕರ ಸಂಘ, ಕಾರ್ಮಿಕ ಸಂಘ, ರೈತ ಸಂಘ ಹೀಗೆ ಸಾವಿರಾರು ಸಂಘಟನೆಗಳು ಸ್ವಯಂ … Read more

ವಿಜಯದಶಮಿ ಆಚರಣಾ ಪ್ರಯುಕ್ತ ಕುದುರೆ ಏರಿ ಬಂದ ತಹಶಿಲ್ದಾರ್ ಗಗನಸಿಂಧು

ವಿಜಯ ದರ್ಪಣ ನ್ಯೂಸ್…… ವಿಜಯದಶಮಿ ಆಚರಣಾ ಪ್ರಯುಕ್ತ ಕುದುರೆ ಏರಿ ಬಂದ ತಹಶಿಲ್ದಾರ್ ಗಗನಸಿಂಧು ಶಿಡ್ಲಘಟ್ಟ : ತಹಶೀಲ್ದಾರ್ ಗಗನಸಿಂಧು ಅವರು ವಿಜಯದಶಮಿ ಪ್ರಯುಕ್ತ ತಾಲ್ಲೂಕು ಕಚೇರಿಯಿಂದ ಕುದುರೆ ಏರಿ ಮೆರವಣಿಗೆಯಲ್ಲಿ ದೇವಾಲಯಕ್ಕೆ ಆಗಮಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು. ವಿಜಯದಶಮಿ ಅಂಗವಾಗಿ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಸಂಜೆ ಶಮೀ (ಬನ್ನಿ) ವೃಕ್ಷ ಪೂಜೆ ನಡೆಯಿತು. ಮೈಸೂರು ಪೇಟ ಧರಿಸಿ, ಕಚ್ಚೆ ಉಟ್ಟು, ಕುದುರೆ ಏರಿ ಬಂದ ತಹಶೀಲ್ದಾ‌ರ್ ಅವರನ್ನು ನಗರದ ಜನರು ಸಂಭ್ರಮದಿಂದ … Read more

ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ನವರಾತ್ರಿಯ ದುರ್ಗಾಷ್ಟಮಿ ಮಹೋತ್ಸವ : ಸಂಪನ್ನರಾದ ಭಕ್ತ ಸಮೂಹ 

ವಿಜಯ ದರ್ಪಣ ನ್ಯೂಸ್….. ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ನವರಾತ್ರಿಯ ದುರ್ಗಾಷ್ಟಮಿ ಮಹೋತ್ಸವ : ಸಂಪನ್ನರಾದ ಭಕ್ತ ಸಮೂಹ  ದೇವನಹಳ್ಳಿ ತಾಲ್ಲೂಕು :  ವಿಜಯಪುರ ಹೋಬಳಿಯ ಗಡ್ಡದನಾಯಕನಹಳ್ಳಿಯ ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ನವರಾತ್ರಿಯ ದುರ್ಗಾಷ್ಟಮಿ ಮಹೋತ್ಸವದ ಪ್ರಯುಕ್ತ ಬುಧವಾರ ದುರ್ಗಾಮಹೇಶ್ವರಿ ಪಲ್ಲಕ್ಕಿ ಉತ್ಸವ ನೆರವೇರಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ದುರ್ಗಾಮಹೇಶ್ವರಿ ಪಲ್ಲಕ್ಕಿ ಉತ್ಸವಕ್ಕೆ ವಿವಿಧ ಕಲಾ ತಂಡಗಳು ಮೆರಗು ನೀಡಿದವು. ದೇವಾಲಯದಲ್ಲಿ ದುರ್ಗಾ ಸಹಸ್ರನಾಮ ಪಾರಾಯಣ, ವಿವಿಧ ಪೂಜೆ ಹೋಮ, ದೇವಿಗೆ ಕುಂಬಾಭಿಷೇಕ, ಅಲಂಕಾರ, ದರ್ಶನ ಏರ್ಪಡಿಸಲಾಗಿತ್ತು. ರಾಜ್ಯದ … Read more

ಇತಿಹಾಸದ ಪುಟಗಳಿಂದ, ಐತಿಹಾಸಿಕ ಸ್ಪೂರ್ತಿಯ ಅಧ್ಯಾಯವೊಂದನ್ನು ತೆರೆದಾಗ…..

ವಿಜಯ ದರ್ಪಣ ನ್ಯೂಸ್….. ಇತಿಹಾಸದ ಪುಟಗಳಿಂದ, ಐತಿಹಾಸಿಕ ಸ್ಪೂರ್ತಿಯ ಅಧ್ಯಾಯವೊಂದನ್ನು ತೆರೆದಾಗ….. p ಭಾರತೀಯ ಕನ್ನಡತಿಯ ಕೆಚ್ಚೆದೆಯ ಆದರ್ಶ, ಕರ್ನಾಟಕ ರಾಜ್ಯೋತ್ಸವದ ಕೆಲವೇ ದಿನಗಳ ಮುನ್ನ……. ಕಿತ್ತೂರಿನ ರಾಣಿ ಚೆನ್ನಮ್ಮ, 23 ಅಕ್ಟೋಬರ್ 1778 ರಿಂದ 21 ಫೆಬ್ರವರಿ 1829….. ವಿಜಯ ಪತಾಕೆ ಹಾರಿಸಿದ ಆ 202 ವರ್ಷಗಳ ಹಿಂದಿನ ಕಥನ…….. 1824 ರಲ್ಲಿ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ವಿಜಯ ಸಾಧಿಸಿದ ಏಕೈಕ ಮಹಿಳೆ. ಅದಕ್ಕಿಗ 202 ವರ್ಷಗಳು….. ಈ … Read more

NDA ಅಭ್ಯರ್ಥಿ ಕೆ.ಎಂ.ಸುರೇಶ್ ಗೆಲುವು ಸಾಧಿಸುವ ವಿಶ್ವಾಸವಿದೆ : ಶಾಸಕ ಬಿ‌.ಎನ್.ರವಿಕುಮಾರ್

ವಿಜಯ ದರ್ಪಣ ನ್ಯೂಸ್….. NDA ಅಭ್ಯರ್ಥಿ ಕೆ.ಎಂ.ಸುರೇಶ್ ಗೆಲುವು ಸಾಧಿಸುವ ವಿಶ್ವಾಸವಿದೆ : ಶಾಸಕ ಬಿ‌.ಎನ್.ರವಿಕುಮಾರ್ ಶಿಡ್ಲಘಟ್ಟ : ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ NDA ಅಭ್ಯರ್ಥಿ ಕೆ.ಎಂ. ಸುರೇಶ್ ಈ ಬಾರಿ ಗೆಲುವು ಸಾಧಿಸಲಿದ್ದಾರೆ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಈ ಬಾರಿಯೂ ಅದೇ ಪರಂಪರೆ ಮುಂದುವರಿಯುವ ಭರವಸೆ ಇದೆ ಎಂದು ಶಾಸಕ ಬಿ.ಎನ್‌.ರವಿಕುಮಾ‌ರ್ ತಿಳಿಸಿದರು. ತಾಲ್ಲೂಕಿನ ಮೇಲೂರು ಗ್ರಾಮದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹಿಂದೆ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿಗಳು … Read more

ನಾಡ ದೇವಿ ತಾಯಿ ಚಾಮುಂಡೇಶ್ವರಿ ದೇವಿಯ ಸಹೋದರಿ ಬನ್ನಿ ಕಾಳಮ್ಮ ತಾಯಿಯ ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡಿ ಭಕ್ತರ ಕೋರಿಕೆ

ವಿಜಯ ದರ್ಪಣ ನ್ಯೂಸ್….. ನಾಡ ದೇವಿ ತಾಯಿ ಚಾಮುಂಡೇಶ್ವರಿ ದೇವಿಯ ಸಹೋದರಿ ಬನ್ನಿ ಕಾಳಮ್ಮ ತಾಯಿಯ ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡಿ ಭಕ್ತರ ಕೋರಿಕೆ ತಾಂಡವಪುರ ಅಕ್ಟೋಬರ್ 22 ತಾಯಿ ನಾಡದೇವಿ ಚಾಮುಂಡೇಶ್ವರಿ ದೇವಿಯ ಸಹೋದರಿ ಬನ್ನಿ ಕಾಳಮ್ಮ ತಾಯಿಯ ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡಿ ನೀಡುವಂತೆ ಮೈಸೂರು ಜಿಲ್ಲೆಯ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ದೇವಿಯ ಭಕ್ತರು ಕೋರಿದ್ದಾರೆ ಮೈಸೂರು ತಾಲೂಕು, ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಸಕಳ್ಳಿ ಗ್ರಾಮದ ಬಳಿ ತಾಯಿ ಚಾಮುಂಡೇಶ್ವರಿಯ ಬೆಟ್ಟದ … Read more

ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಹೋಮ : ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು

ವಿಜಯ ದರ್ಪಣ ನ್ಯೂಸ್….. ಶ್ರೀ ಆದಿಶಕ್ತಿ ಮಹಾ ಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ ಪೂಜೆ ಸಂಪನ್ನ ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಹೋಮ : ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಶಿವನಾಪುರ ಗ್ರಾಮದ ಶ್ರೀ ಆದಿಶಕ್ತಿ ಮಹಾ ಸಂಸ್ಥಾನ ಮಠದ ವಹ್ನಿಕುಲ ಕ್ಷತ್ರಿಯ ಗುರುಪೀಠದಲ್ಲಿ ಶರನ್ನವರಾತ್ರಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡವು. ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸುಮಾರು 11 ದಿನಗಳ ಕಾಲ … Read more

ನಾಡ ದೇವತೆಯ ಬಳಿ ನನ್ನ ಅಳಲು……

ವಿಜಯ ದರ್ಪಣ ನ್ಯೂಸ್….. ನಾಡ ದೇವತೆಯ ಬಳಿ ನನ್ನ ಅಳಲು…… ನಾಡ ದೇವಿ ತಾಯಿ ಚಾಮುಂಡೇಶ್ವರಿ, ನಿನಗೆ ತುಂಬು ಹೃದಯದ ಧನ್ಯವಾದಗಳು. ನಿನ್ನ ಪಾದ ಕಮಲಗಳಿಗೆ ನನ್ನ ಶಿರಷ್ಟಾಂಗ ನಮಸ್ಕಾರಗಳು. ಮೈಸೂರು ದಸರಾ ಉತ್ಸವವನ್ನು ಭಕ್ತಿ ಪೂರ್ವಕವಾಗಿ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿಸಿದ್ದಕ್ಕೆ ಕೋಟಿ ಕೋಟಿ ನಮನಗಳು….. ತಾಯೇ, ಈ ರಾಜ್ಯಕ್ಕೆ ಆಡಳಿತ ನಡೆಸಲು ಅತ್ಯುತ್ತಮ ಮುಖ್ಯಮಂತ್ರಿಯನ್ನು, ಅವರ ಮಂತ್ರಿಮಂಡಲವನ್ನು ಕೊಟ್ಟಿದ್ದಕ್ಕೆ, ಅತ್ಯದ್ಭುತ ವಿರೋಧ ಪಕ್ಷಗಳನ್ನು ಕಾವಲು ಕಾಯಲು ನೇಮಿಸಿದಕ್ಕೆ, ಈ ರಾಜ್ಯವನ್ನು ಸುಭಿಕ್ಷವಾಗಿಡಲು 224 ಅತ್ಯುತ್ಕೃಷ್ಟ ಎಮ್ಎಲ್ಎ … Read more