ದೇವನಹಳ್ಳಿ ರೈತರ ಹೋರಾಟ…….
ವಿಜಯ ದರ್ಪಣ ನ್ಯೂಸ್…… ದೇವನಹಳ್ಳಿ ರೈತರ ಹೋರಾಟ……. ದೇವನಹಳ್ಳಿ ಭೂ ಸ್ವಾಧೀನ ವಿರುದ್ಧದ ರೈತ ಹೋರಾಟ ಸ್ವಲ್ಪಮಟ್ಟಿಗೆ ಯಶಸ್ವಿಯಾಗುತ್ತಿರುವ ಸಂದರ್ಭದಲ್ಲಿ ನೆನಪಾಗುತ್ತಿರುವ ರೈತರ ಆ ದಿನಗಳು……. ತುಂಬಾ ಹಿಂದೆ ಏನು ಅಲ್ಲ, ಕೇವಲ 25/30 ವರ್ಷಗಳ ಹಿಂದೆ ಜಾಗತೀಕರಣದ ಪರಿಣಾಮವಾಗಿ ಮುಕ್ತ ಮಾರುಕಟ್ಟೆಗೆ ಭಾರತ ಸಹಿ ಹಾಕಿದ ನಂತರ ಅಭಿವೃದ್ಧಿ ಎಂಬ ಮಾನದಂಡವೇ ಬದಲಾಯಿತು. ಆಗಿನ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರ ಬಾಬು ನಾಯ್ಡು, ಕರ್ನಾಟಕದ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಸ್ವಲ್ಪಮಟ್ಟಿಗೆ ರಾಜಾಸ್ಥಾನದ ಮುಖ್ಯಮಂತ್ರಿ…
