ಖರ್ಗೆ ಹೇಳಿಕೆ ಹಿಂದೂ ಧರ್ಮೀಯರ ಮೇಲಿನ ದಾಳಿ, ಹಿಂಸೆ: ಚಿ. ನಾ. ರಾಮು
ವಿಜಯ ದರ್ಪಣ ನ್ಯೂಸ್… ಖರ್ಗೆ ಹೇಳಿಕೆ ಹಿಂದೂ ಧರ್ಮೀಯರ ಮೇಲಿನ ದಾಳಿ, ಹಿಂಸೆ: ಚಿ. ನಾ. ರಾಮು ಪ್ರಯಾಗ್ ರಾಜ್ : ಮಹಾಕುಂಭ ಮೇಳ 144 ವರ್ಷಗಳಿಗೊಮ್ಮೆ ಬರುವ ಹಿಂದೂಧರ್ಮೀಯರ ಶ್ರದ್ಧಾಭಕ್ತಿಗಳ ಸಂಕೇತ. ಗಂಗೆಯ ಪುಣ್ಯಸ್ನಾನ ನಮ್ಮನ್ನು ಪಾವನಗೊಳಿಸುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಹೀಗಾಗಿಯೇ ಮಹಾಕುಂಭಮೇಳದಲ್ಲಿ 50 ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ. ಗಂಗೆ ಎಂದರೆ ಆಕೆ ಬರೀ ಒಂದು ನದಿಯಲ್ಲ. ಮಾನವ ಬದುಕಿನ ಜೀವದಾಯಿನಿ. ಭರತ ಭೂಮಿಯ ಪುಣ್ಯದಾಯಿನಿ. ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ನಂಬಿಕೆಗಳು…
