ಬಸವಣ್ಣನವರ ಪುರುಷ ಅಹಂಕಾರ…….
ವಿಜಯ ದರ್ಪಣ ನ್ಯೂಸ್…. ಬಸವಣ್ಣನವರ ಪುರುಷ ಅಹಂಕಾರ……. ” ಬಸವಣ್ಣನವರಿಗೂ ಪುರುಷ ಅಹಂಕಾರ ಮೀರಲು ಸಾಧ್ಯವಾಗಲಿಲ್ಲ …” ಎಂಬ ಲೇಖಕಿಯೊಬ್ಬರ ಭಾಷಣದ ಮಾತುಗಳು ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾವುದೇ ವ್ಯಕ್ತಿಯೂ ಪರಿಪೂರ್ಣರಲ್ಲ, ಯಾವುದೇ ಸಿದ್ಧಾಂತವೂ ಪರಿಪೂರ್ಣವಲ್ಲ. ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ, ವಿಮರ್ಶೆ, ವ್ಯಾಖ್ಯಾನಗಳು ನಡೆಯುತ್ತಲೇ ಇರುತ್ತದೆ….. ಹಾಗೆ ಹೇಳಲು ಅವರಿಗೂ ಅಧಿಕಾರ ಮತ್ತು ಸ್ವಾತಂತ್ರ್ಯವಿದೆ. ಅದನ್ನು ವಿರೋಧಿಸಲು ಸಹ ಅಷ್ಟೇ ಅಧಿಕಾರ ಮತ್ತು ಸ್ವಾತಂತ್ರ್ಯ ಇದೆ. ಇವು ನಮ್ಮ ನಮ್ಮ ಗ್ರಹಿಕೆ ಮತ್ತು ಅರಿವಿನ ಅನಿಸಿಕೆಗಳು…