ನಮಸ್ಕಾರ ವಿವೇಕಾನಂದ ಸರ್ 🙏💐 ಶುಭಾಶಯಗಳು!!!💐

ವಿಜಯ ದರ್ಪಣ ನ್ಯೂಸ್…

ನಮಸ್ಕಾರ ವಿವೇಕಾನಂದ ಸರ್ 🙏💐

ಶುಭಾಶಯಗಳು!!!💐

ಹವಾ ನಿಯಂತ್ರಿತ ಕಾರಿನಲ್ಲಿ ಕುಳಿತು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಬುದ್ಧನನ್ನು ಕುರಿತು ನೀವು ಬರೆದ ಬರಹ ಓದಿದೆನು. ಏನೋ ಗೊತ್ತಿಲ್ಲ, ಕಣ್ಣಂಚಿನಲ್ಲಿ ಧಾರಾಕಾರವಾಗಿ ನೀರು ಹರಿಯುತ್ತಿದೆ. ಬುದ್ಧ ಪೂರ್ಣಿಮೆಯೆಂದು ಬುದ್ಧನಿಗೆ ನೀವು ಕೊಟ್ಟ ಮಹಾನ್ ಉಡುಗೊರೆ ಈ ಬರಹ.

ಹುಚ್ಚರಂತೆ ನಾಗಾಲೋಟದಲ್ಲಿ ಎಲ್ಲಾ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಓಡುತ್ತಿರುವ ಈ ಮನುಕುಲಕ್ಕೆ ಒಂದು ಒಳ್ಳೆಯ ಸಂದೇಶ ಭರಿತ ಲೇಖನವನ್ನು ನೀಡಿದ್ದೀರಿ. ನಾವೆಲ್ಲ ಈ ಲೇಖನ ಓದಿ ಬದಲಾಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ ಆದರೂ ನೀವು ಈ ಸಮಾಜವನ್ನು ತಿದ್ದುವ ಹಾಗೂ ಎಚ್ಚರಿಸುವ ಗುರುತರವಾದ ಜವಾಬ್ದಾರಿಯನ್ನ ನಿರಂತರವಾಗಿ ಮಾಡುತ್ತಿರುವುದನ್ನ ನೆನೆದಾಗ ನಿಮ್ಮ ಬಗೆಗಿನ ಗೌರವ ಅಭಿಮಾನ ಪ್ರೀತಿ ನಮ್ಮಲ್ಲಿ ಇಮ್ಮಡಿಯಾಗುತ್ತಿದೆ.

ಬಹಳ ಬಾರಿ ನಾನು ಗಾಂಧೀಜಿಯವರ ಆತ್ಮ ಚರಿತ್ರೆಯನ್ನು ಓದಿದ್ದೇನೆ ಮತ್ತು ಬೇಸರವಾದಾಗ ಓದುತ್ತಲೇ ಇರುತ್ತೇನೆ ಆದರೆ ಇತ್ತೀಚಿನ ವರ್ಷಗಳಲ್ಲಿ ನಿಮ್ಮ ಲೇಖನಗಳನ್ನು ಚಾಚು ತಪ್ಪದೇ ಓದುತ್ತಿದ್ದೇನೆ ನನ್ನ ಅರಿವಿಗೆ ನಿಲುಕಿರುವುದು ಇಷ್ಟೇ, ಸಮಾಜದಲ್ಲಿ ಆಗುತ್ತಿರುವ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನ ಗಮನಿಸಿ ಬಹಳ ನಿಷ್ಟೂರವಾಗಿ, ವಿಶ್ಲೇಷಣಾತ್ಮಕ ಹಾಗೂ ಮೌಲ್ಯಯುತವಾದ ಲೇಖನಗಳನ್ನ ಬರೆಯುತ್ತಿರುವ ನೀವು ನಮ್ಮ ಸಮಕಾಲಿನತೆಯ ಒಬ್ಬ ಪ್ರಖರ ಚಿಂತಕ ಹಾಗೂ ಸಮಾಜ ಸೇವಕ.

ನಿಮಗೆ ಶುಭವಾಗಲಿ🙏💐

ಶ್ರೀನಿವಾಸ ಪಿ.ಸಿ
ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಇಂಡಿಯಾ ಫಾರ್ ಐಎಎಸ್ ಅಕಾಡೆಮಿ, ಬೆಂಗಳೂರು
9868170790