ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

ವಿಜಯ ದರ್ಪಣ ನ್ಯೂಸ್….  ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಬೆಂ.ಗ್ರಾ.ಜಿಲ್ಲೆ, ಏ.14 : ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕಳೆದ 2023-24 ನೇ ವರ್ಷದಲ್ಲಿ ಎಸೆಸೆಲ್ಸಿ ಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು. ಜಿಲ್ಲೆಯ ನಾಲ್ಕು ತಾಲ್ಲೂಕಿನ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯಂದು ಜಿಲ್ಲಾಧಿಕಾರಿ…

Read More

ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಚಿವ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್… ಶಿಕ್ಷಣ ಮತ್ತು ಜ್ಞಾನದಿಂದ ಸಮಾನತೆ ಕಾಣಬಹುದು ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಚಿವ ಮುನಿಯಪ್ಪ ದೇವನಹಳ್ಳಿ ಬೆಂ.ಗ್ರಾ.ಜಿಲ್ಲೆ, ಏ.14: ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನದ ಆಶಯದೊಂದಿಗೆ ನಾವೆಲ್ಲರೂ ಮುಂದೆ ಸಾಗೋಣ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು. ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭಾರತ ರತ್ನ…

Read More

*ಶಿಕ್ಷಣ ಮತ್ತು ಜ್ಞಾನದಿಂದ ಸಮಾನತೆ ಕಾಣಬಹುದು* *ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಚಿವ ಮುನಿಯಪ್ಪ* ಬೆಂ.ಗ್ರಾ.ಜಿಲ್ಲೆ, ಏ.14(ಕರ್ನಾಟಕ ವಾರ್ತೆ): ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನದ ಆಶಯದೊಂದಿಗೆ ನಾವೆಲ್ಲರೂ ಮುಂದೆ ಸಾಗೋಣ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು. ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 134 ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 118 ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಕೊಟ್ಟಿರುವುದು ಭಾರತದ ಸಂವಿಧಾನ, ಅಂತಹ ಸಂವಿಧಾನ ಕೊಟ್ಟಿರುವುದು ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು, ಶೋಷಿತರಿಗೆ, ಹಿಂದುಳಿದವರಿಗೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡಬೇಕು. ಸರ್ವರು ಸ್ವಂತಂತ್ರರರು, ಸರ್ವರು ಸಮಾನರು, ಸರ್ವರಿಗೂ ಸಮಾನ ನ್ಯಾಯ, ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂಬ ತತ್ವದಡಿ ಸಂವಿಧಾನವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ರೂಪಿಸಿದರು. ಸಂವಿಧಾನದಿಂದ ಕೇವಲ ಒಂದು ಜಾತಿ, ಸಮುದಾಯ, ವರ್ಗಕ್ಕೆ ಸೀಮಿತವಾಗಿಲ್ಲ, ಭಾರತದ ಕೊಟ್ಟು ಕಡೆಯ ಪ್ರಜೆಗೂ ಸಮಾನ ಅವಕಾಶ ನೀಡಲಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಜ್ಞಾನ ವೃದ್ಧಿಯಿಂದ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತದೆ ಎಂಬುದು ನನ್ನ ಭಾವನೆ ರಾಜ್ಯಾದ್ಯಾಂತ ಹೋಬಳಿವಾರು ವಸತಿ ಶಾಲೆ ಸ್ಥಾಪಿಸಲು 2014 ರ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿಯಲ್ಲಿ ವರದಿ ನೀಡಲಾಗಿತ್ತು, ಈಗ ವಸತಿ ಶಾಲೆಗಳು ಬಂದು ಬಡವರ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಸಹಕಾರಿಯಾಗಿದೆ ಮುಂದೆ ಪಂಚಾಯಿತಿ ವಾರು ವಸತಿ ಶಾಲೆ ನಿರ್ಮಿಸಲಾಗುವುದು ಎಂದರು. ಡಾ.ಬಿ.ಆರ್ ಅಂಬೇಡ್ಕರ್ ಅವರು ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರು ಇಬ್ಬರೂ ಕೂಡ ಸಾಕಷ್ಟು ಹೋರಾಟಗಳನ್ನು ನಡೆಸಿ, ಹಲವು ಸಮಸ್ಯೆಗಳನ್ನು ಎದುರಿಸಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಂಸದರಾದ ಡಾ.ಕೆ ಸುಧಾಕರ್ ಅವರು ಮಾತನಾಡಿ ಇಂದು ಪ್ರಪಂಚದಾದ್ಯಂತ ವಿಶ್ವದ ಜ್ಞಾನ ದಿನ ಎಂದು ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ, ಇವತ್ತು ಇಬ್ಬರು ಮಹಾನ್ ನಾಯಕರುಗಳ ಜನುಮದಿನ ಜೊತೆಗೆ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಜ್ಞಾನ ಇವುಗಳ ತತ್ವಗಳನ್ನು ಆಚರಣೆ ಮಾಡುವ ದಿನವಾಗಿದೆ. ಅಂಬೇಡ್ಕರ್ ಅವರ ಜೀವನವು ಬಹಳಷ್ಟು ಕಠಿಣವಾಗಿತ್ತು ಜಾತಿ ಪದ್ಧತಿ, ಶೋಷಣೆ, ನೋವು ಇವೆಲ್ಲವನ್ನೂ ಸಹಿಸಿಕೊಂಡು ದೇಶಕ್ಕೆ ಉತ್ತಮ ಸಂವಿಧಾನ ರಚಿಸಿದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಕೊಲಂಬಿಯಾ ಯೂನಿವರ್ಸಿಟಿ ಅಲ್ಲಿ ಪಿ.ಹೆಚ್.ಡಿ ಪಡೆದ ಮೊದಲ ಭಾರತೀಯ, ಮಹಾನ್ ನಾಯಕರುಗಳ ಸಾಲಿನಲ್ಲಿದ್ದಾರೆ. ಹಾಗೆಯೇ ದೇಶದ ಮಾಜಿ ಉಪ ಪ್ರಧಾನ ಮಂತ್ರಿ ಗಳಾದ ಬಾಬು ಜಗಜೀವನರಾಂ ಅವರು ಹಸಿರು ಕ್ರಾಂತಿಯ ಹರಿಕಾರ ಈ ದೇಶದ ಪ್ರಧಾನಿ ಆಗಲು ಅವಕಾಶ ಹಾಗೂ ಅರ್ಹತೆ ಇದ್ದರೂ ಸಹ ಅದೃಷ್ಟ ಇರಲಿಲ್ಲ. ಶೋಷಿತರಿಗೆ ಅಲ್ಲ ಮೇಲ್ಪಂಕ್ತಿಗಳಿಗೂ ಸಮಾನ ಅವಕಾಶ, ಸೌಲಭ್ಯ ಸಿಗುವಂತಾಗಬೇಕು ಎಂಬ ಆಲೋಚನೆ ಹೊಂದಿದ್ದರು. ಇವರಿಬ್ಬರ ಜೀವನಶೈಲಿ, ತತ್ವಾದರ್ಶಗಳನ್ನು ಜೀವನದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ನಂತರ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷರಾಜ ಸಿ ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ರಾಜಣ್ಣ, ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಜಗನ್ನಾಥ, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ತಹಶೀಲ್ದಾರ್ ಬಾಲಕೃಷ್ಣ ಇಒ ಶ್ರೀನಾಥ್ ಗೌಡ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯ ದರ್ಪಣ ನ್ಯೂಸ್…. ಶಿಕ್ಷಣ ಮತ್ತು ಜ್ಞಾನದಿಂದ ಸಮಾನತೆ ಕಾಣಬಹುದು ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಚಿವ ಮುನಿಯಪ್ಪ *ಶಿಕ್ಷಣ ಮತ್ತು ಜ್ಞಾನದಿಂದ ಸಮಾನತೆ ಕಾಣಬಹುದು* *ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಚಿವ ಮುನಿಯಪ್ಪ* ಬೆಂ.ಗ್ರಾ.ಜಿಲ್ಲೆ, ಏ.14(ಕರ್ನಾಟಕ ವಾರ್ತೆ): ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನದ ಆಶಯದೊಂದಿಗೆ ನಾವೆಲ್ಲರೂ ಮುಂದೆ ಸಾಗೋಣ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ…

Read More

ಡಾ. ಬಿ.ಆರ್. ಅಂಬೇಡ್ಕರ್ ಭವನದ ಗುದ್ದಲಿ ಪೂಜೆ ಹಾಗು ಜಯಂತಿ ಆಚರಣೆಗೆ ಸಕಲ ಸಿದ್ಧತೆ

ವಿಜಯ ದರ್ಪಣ ನ್ಯೂಸ್…. ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭವನದ ಗುದ್ದಲಿ ಪೂಜೆ ಹಾಗು ಜಯಂತಿ ಆಚರಣೆಗೆ ಸಕಲ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ ಶಾಸಕ ಬಿಎನ್ ರವಿಕುಮಾರ್ ಶಿಡ್ಲಘಟ್ಟ : ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವನದ ಗುದ್ದಲಿ ಪೂಜೆ ಹಾಗು ಜಯಂತಿಯನ್ನು ಏಪ್ರಿಲ್ -14 ರಂದು ಅದ್ಧೂರಿಯಾಗಿ ನಡೆಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆಗಳನ್ನು ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಕೈಗೊಂಡಿದ್ದು ಶಾಸಕ ಬಿ.ಎನ್.ರವಿಕುಮಾರ್ ರವರು ಸಿದ್ಧತೆಗಳನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು…

Read More

ಕನ್ನಡ ಪರಂಪರೆಯನ್ನು ಉಳಿಸಲು ಸರ್ಕಾರ ಬದ್ದವಾಗಿದೆ: ಸಚಿವ ಕೆ ಎಚ್ ಮುನಿಯಪ್ಪ 

ವಿಜಯ ದರ್ಪಣ ನ್ಯೂಸ್… ಕನ್ನಡ ಪರಂಪರೆಯನ್ನು ಉಳಿಸಲು ಸರ್ಕಾರ ಬದ್ದವಾಗಿದೆ: ಸಚಿವ ಕೆ ಎಚ್ ಮುನಿಯಪ್ಪ ಕನಸವಾಡಿ ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ . ಏಪ್ರಿಲ್ 12 : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 26 ನೇ ಕನ್ನಡಸಾಹಿತ್ಯ ಸಮ್ಮೇಳನದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ‌ಮುನಿಯಪ್ಪ ರವರು ಭಾಗವಹಿಸಿದರು. ನಂತರ ಮಾತನಾಡಿದ ಸಚಿವರು ಕನ್ನಡಭಾಷೆಯನ್ನು ಉಳಿಸಿ ಬೆಳೆಸಲು ಈ ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಲಿದೆ. ಕನ್ನಡದದ ದಾರ್ಶನಿಕ ಕವಿಗಳಾದ ರನ್ನ…

Read More

ಸಂಸದ ಡಾ.ಕೆ ಸುಧಾಕರ್ ಅವರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ವಿಜಯ ದರ್ಪಣ ನ್ಯೂಸ್…. ಸಂಸದ ಡಾ.ಕೆ ಸುಧಾಕರ್ ಅವರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  ಏ.11:ದೇವನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ 40.50 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಂಸದ ಡಾ.ಕೆ ಸುಧಾಕರ್ ಅವರು ಇಂದು ಗುದ್ದಲಿಪೂಜೆ ನೆರವೇರಿಸಿದರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮ ಪಂಚಾಯಿತಿಯ ಬೂದಿಗೆರೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನೂತನ ಮಾದರಿ…

Read More

ಡೊನಾಲ್ಡ್ ಟ್ರಂಪ್ ಅಹಂಕಾರ ಮತ್ತು ತಿಕ್ಕಲುತನಕ್ಕೆ ಅಮೆರಿಕದ ಮತದಾರರೇ ಹೊಣೆ……..

ವಿಜಯ ದರ್ಪಣ ನ್ಯೂಸ್…. ಡೊನಾಲ್ಡ್ ಟ್ರಂಪ್ ಅಹಂಕಾರ ಮತ್ತು ತಿಕ್ಕಲುತನಕ್ಕೆ ಅಮೆರಿಕದ ಮತದಾರರೇ ಹೊಣೆ…….. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಜನಪ್ರತಿನಿಧಿಗಳಾಗಿ ಅಥವಾ ಆ ದೇಶದ ಮುಖ್ಯಸ್ಥರಾಗಿ ಪ್ರಧಾನಿ ಅಥವಾ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವಾಗ ಮತದಾರರು ಸಮಗ್ರವಾಗಿ ಪಕ್ಷ ಮತ್ತು ಅಭ್ಯರ್ಥಿಗಳ ಬಗ್ಗೆ ಚಿಂತಿಸಿ ಮತ ಚಲಾಯಿಸಬೇಕಾಗುತ್ತದೆ. ಯಾವುದೋ ಧರ್ಮ, ಜಾತಿ, ರಾಷ್ಟ್ರೀಯತೆ, ಅಭಿವೃದ್ಧಿಯ ಭರವಸೆ ಮುಂತಾದ ಭ್ರಮಾತ್ಮಕ ವಿಷಯಗಳಿಗೆ ಮರುಳಾಗಿ ವಿವೇಚನೆ ಇಲ್ಲದೆ ನೈತಿಕತೆ ಇಲ್ಲದ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಿದರೆ ಅದರ…

Read More

ಹೂವನ್ನು ನೀಡುವ ಕೈಗೂ ಒಂದಿಷ್ಟು.

ವಿಜಯ ದರ್ಪಣ ನ್ಯೂಸ್… ಹೂವನ್ನು ನೀಡುವ ಕೈಗೂ ಒಂದಿಷ್ಟು. ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ ಇಂಗ್ಲೀಷ್ ಉಪನ್ಯಾಸಕರು ಮೊ: ೯೪೪೯೨೩೪೧೪೨ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ. ಎಲ್ಲರೊಳಗೆ ಒಂದಾಗುವ ಬದುಕಿನ ಸ್ವಾರಸ್ಯಕರ ಗುಟ್ಟನ್ನು ಡಿವಿಜಿಯವರು ಈ ಕಗ್ಗದಲ್ಲಿ ಬಹು ಚೆನ್ನಾಗಿ ಹೇಳಿದ್ದಾರೆ. ಬೆಟ್ಟದ ಅಡಿಯಲ್ಲಿರುವ ಹುಲ್ಲಿನಂತಿರು. ಆ ಹುಲ್ಲನ್ನು ಹಸು ಕರುಗಳು ತಿಂದು ತೃಪ್ತಿ ಪಡುವಂತಿರಲಿ. ಮನೆಗೆ ಸುಗಂಧ ಸೂಸುವ ಮಲ್ಲಿಗೆಯಂತಿರು….

Read More

ಎನ್‌ಪಿಎಸ್ ಇಂಡಿಯಾ 2025 ರಲ್ಲಿ 3 ಚಿನ್ನದ ಪದಕ ಗೆದ್ದ ಭಾನುಪ್ರಕಾಶ್, ನ್ಯಾಷನಲ್ ಪೋಕರ್ ಚಾಂಪಿಯನ್ ಶೋಡೌನ್‌ಗೆ ಕರ್ನಾಟಕದಿಂದ ಆಯ್ಕೆ

ವಿಜಯ ದರ್ಪಣ ನ್ಯೂಸ್…. ಎನ್‌ಪಿಎಸ್ ಇಂಡಿಯಾ 2025 ರಲ್ಲಿ 3 ಚಿನ್ನದ ಪದಕ ಗೆದ್ದ ಭಾನುಪ್ರಕಾಶ್, ನ್ಯಾಷನಲ್ ಪೋಕರ್ ಚಾಂಪಿಯನ್ ಶೋಡೌನ್‌ಗೆ ಕರ್ನಾಟಕದಿಂದ ಆಯ್ಕೆ ಕರ್ನಾಟಕ,, ಏಪ್ರಿಲ್ 11, 2025: ಕರ್ನಾಟಕದ ಭಾನುಪ್ರಕಾಶ್‌ ಕೆ ಸಿ ಅವರು ರಾಷ್ಟ್ರೀಯ ಪೋಕರ್ ಸಿರೀಸ್ (ಎನ್‌ಪಿಎಸ್) ಇಂಡಿಯಾ 2025 ರಲ್ಲಿ ವಿಜಯ ಸಾಧಿಸುವ ಮೂಲಕ ಭಾರತೀಯ ಪೋಕರ್ ಜಗತ್ತಿನಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅವರು ಒಟ್ಟು 72.72 ಲಕ್ಷ ರೂ. ಗೆದ್ದಿದ್ದು, ಮೂರು ಚಿನ್ನ ಹಾಗೂ ಎರಡು ಬೆಳ್ಳಿ ಸೇರಿದಂತೆ ಐದು…

Read More

ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ವಿಜಯ ದರ್ಪಣ ನ್ಯೂಸ್…… ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಶಿಡ್ಲಘಟ್ಟ : ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯಲ್ಲಿ 2009-2010 ನೇ ಸಾಲಿನಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡಿರುವಂತಹ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಶಿವಶಂಕರ್, ಶಿಕ್ಷಕರಿಂದ ಹಾಗೂ ಹಳೇ ವಿದ್ಯಾರ್ಥಿಗಳಿಂದ ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಹಳೆಯ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರಿಂದ ಸರ್ಕಾರಿ ಶಾಲೆ ಉಳಿವಿಗಾಗಿ ಶಾಲೆಯ ವಿದ್ಯಾರ್ಥಿಗಳಿಗೆ 10 ಸೈಕಲ್‌ ಗಳನ್ನು…

Read More