ವಿಜೃಂಭಣೆಯಿಂದ ನಡೆದ ಮೇಲೂರು ಶ್ರೀಧರ್ಮರಾಯಸ್ವಾಮಿ ದೌಪದಮ್ಮ ಕರಗ ಮಹೋತ್ಸವ
ವಿಜಯ ದರ್ಪಣ ನ್ಯೂಸ್….
ವಿಜೃಂಭಣೆಯಿಂದ ನಡೆದ ಮೇಲೂರು ಶ್ರೀಧರ್ಮರಾಯಸ್ವಾಮಿ ದೌಪದಮ್ಮ ಕರಗ ಮಹೋತ್ಸವ
ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಜಿಲ್ಲೆ : ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ನೆಲೆಸಿರುವ ಶ್ರೀಧರ್ಮರಾಯಸ್ವಾಮಿ ದೌಪದಮ್ಮ ಕರಗವನ್ನು ಭಕ್ತಿಬಾವ ಪರವಶಗಳಿಂದ ರಾತ್ರಿ ವಿಜೃಂಭಣೆಯಿಂದ ಆಚರಿಸಿದರು.
ಗ್ರಾಮದಲ್ಲಿ ನಡೆಯುತ್ತಿರುವ 37 ನೇ ವರ್ಷದ ಹೂವಿನ ಕರಗ ಮಹೋತ್ಸವದಲ್ಲಿ ಗ್ರಾಮಸ್ಥರು ಹಾಗು ಸುತ್ತ ಮುತ್ತಲಿನ ಗ್ರಾಮಗಳವರು ಭಾಗಿಯಾಗಿದ್ದರು,ಮನೆಗಳ ಮುಂದೆ ರಂಗೋಲಿ ಬಿಡಿಸಿ ಕರಗಕ್ಕೆ ಆರತಿ ಬೆಳಗಿ ಮಲ್ಲಿಗೆ ಹೂವನ್ನು ಅರ್ಪಿಸಿ ಅಮ್ಮನವರ ಆಸಿರ್ವಾದ ಪಡೆದರು.
ವಹ್ನಿಕುಲ ಕ್ಷತ್ರಿಯರ ವತಿಯಿಂದ ಆಯೋಜಿಸಲಾಗಿದ್ದ ಕರಗ ಮಹೋತ್ಸವದ ಪ್ರಯುಕ್ತ ಶ್ರೀಧರ್ಮರಾಯಸ್ವಾಮಿ ದೌಪದಮ್ಮನವರ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು ಗ್ರಾಮದ ಪ್ರಮುಖ ರಾಜ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಕರಗವನ್ನು ಮೇಲೂರಿನ ಎಂ.ಗಣೇಶ್ ಅವರು ಹೊತ್ತಿದ್ದು, ಗ್ರಾಮದ ಎಲ್ಲಾ ಬೀದಿಗಳಲ್ಲೂ ಮೆರವಣಿಗೆಯಲ್ಲಿ ತೆರಳಿ ಪ್ರತಿ ಮನೆಯ ಬಳಿಯೂ ಪೂಜೆಯನ್ನು ಸ್ವೀಕರಿಸಿದರು, ಕರಗದೊಂದಿಗೆ ತಮಟೆ, ನಾದಸ್ವರ ಸೇರಿದ ವಾದ್ಯಗಳೊಂದಿಗೆ ವೀರಕುಮಾರರು ಮೆರವಣಿಗೆಯಲ್ಲಿ ಸಾಗಿದರು.
ಹೂವಿನ ಕರಗ ಮಲ್ಲಿಗೆಮಯ ಕಳಸದ ಮೆರವಣಿಗೆ ಪರಿಮಳಯುಕ್ತ ಮಲ್ಲಿಗೆ ಹೂವಿಂದ ಅಲಂಕರಿಸಲಾದ ಕರಗವು ಸುವಾಸನೆ ಬೀರಲಿದ್ದು ಆತ್ಮಭಕ್ತಿಬಾವ ಸೃಷ್ಟಿಸುತ್ತದೆ ಹೂವಿನ ಕರಗಕ್ಕೂ ಮೊದಲು ಅನೇಕ ಧಾರ್ಮಿಕ ವಿಧಿ ವಿಧಾನಗಳು ಕರಗದ ಕುಂಟೆ ಹಾಗೂ ಶಕ್ತಿ ಪೀಠಗಳಲ್ಲಿ ನಡೆಯುತ್ತವೆ.
ವೀರಕುಮಾರರು, ಗೌಡರು, ಗಣಾಚಾರಿ, ಘಂಟೆ ಪೂಜಾರರು ಹಾಗೂ ಚಾಕರಿದಾರರು ಶಕ್ತಿಪೀಠದಲ್ಲಿ ಕರಗ ಪೂಜಾರಿಯನ್ನು ಕರಗ ಧರಿಸುವುದಕ್ಕೆ ಧಾರ್ಮಿಕ ಸಂಪ್ರದಾಯಗಳೊಂದಿಗೆ ಸಿದ್ದತೆಗೊಳಿಸುವರು.
ಸುವಾಸನೆ ಬೀರುವ ಸೌಂದರ್ಯದ ಹೂ ಮಲ್ಲಿಗೆ ಕರಗ ಕಳಸವೂ ಸೇರಿದಂತೆ ಎಲ್ಲೆಡೆ ಸಲ್ಲುತ್ತದೆ ವೀರಕುಮಾರರ ಹಾರಗಳಿಂದ ಹಿಡಿದು ಕರಗದ ಎಲ್ಲಾ ಉತ್ಸವಗಳಲ್ಲೂ ಮಲ್ಲಿಗೆ ಹೂಗಳಿಗೆ ಮೊದಲ ಆದ್ಯತೆ ನೀಡುತ್ತಾರೆ,ಗ್ರಾಮದ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಶಾತ್ರೋಕ್ತವಾಗಿ ಜರುಗಿಸಲಾಯಿತು.
ಕರಗ ಉತ್ಸವದ ಪ್ರಯುಕ್ತ ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು.
ಇದೇ ವೇಳೆ ಶಾಸಕ ಬಿ.ಎನ್.ರವಿಕುಮಾರ್,ಮಾಜಿ ಸಚಿವ ವಿ.ಮುನಿಯಪ್ಪ, ಬಿಜೆಪಿ ಗ್ರಾಮಾಂತರ ಮಂಡಲ ಅದ್ಯಕ್ಷ ಸೀಕಲ್ ಆನಂದಗೌಡ,ಮಾಜಿ ಅದ್ಯಕ್ಷ ಕೆ.ಸುರೇಂದ್ರಗೌಡ,ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಕೆ.ಮಂಜುನಾಥ್, ಆರ್.ಎ.ಉಮೇಶ್,ಸಮಾಜಸೇವಕ ನರಸಿಂಹಮೂರ್ತಿ,ಮುಖಂಡರಾದ ಕೆ.ಎಂ.ನಾರಾಯಣಸ್ವಾಮಿ, ಮುನಿಕೃಷ್ಣಪ್ಪ ,ಗೋವಿಂದಪ್ಪ,
ಶಿವರಾಜ್,ರೂಪೇಶ್,ರಮೇಶ್, ಗೋಪಾಲ್ ಹಾಗು ಶ್ರೀ ಧರ್ಮರಾಯಸ್ವಾಮಿ ಭಕ್ತಮಂಡಳಿ ವಹ್ನಿಕುಲ ಕ್ಷತ್ರಿಯರ ಸಂಘದ ಸದಸ್ಯರು,ಗ್ರಾಮಸ್ಥರು ಹಾಗು ಸುತ್ತ ಮುತ್ತಲಿನ ಗ್ರಾಮಗಳವರು ಪಾಲ್ಗೊಂಡಿದ್ದರು.