ಸಾಲುಮರದ ತಿಮ್ಮಕ್ಕನ ನೆನಪಲ್ಲಿ ಜಿ ಮರಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ವಿಜಯ ದರ್ಪಣ ನ್ಯೂಸ್…
ಸಾಲುಮರದ ತಿಮ್ಮಕ್ಕನ ನೆನಪಲ್ಲಿ ಜಿ ಮರಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ

ತಾಂಡವಪುರ ನವಂಬರ್ 16 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವಸಾಲುಮರದ ತಿಮ್ಮಕ್ಕನ ನೆನಪಲ್ಲಿ ಜಿ ಮರಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ ರವರು ಚಾಲನೆ ನೀಡಿದರು
ಸುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಜಿ ಮರಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸುತ್ತೂರು ಗ್ರಾಮ ಪಂಚಾಯಿತಿ ಹಾಗೂ ಪೂಜಾ ಭಗವಾನ್ ಸ್ಮಾರಕ ಮಹಾಜನ ನಾಟಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಭಗವಾನ್ ಮಹಾವೀರ್ ದರ್ಶನ್ ನೇತ್ರ ಆಸ್ಪತ್ರೆ ಇವರ ಸಹಯೋಗದಲ್ಲಿ ಸುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ ಮರ ಹಳ್ಳಿ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಚಾಲನೆ ನೀಡಿ ಸುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿಮಾರಹಳ್ಳಿ ರಂಗಸ್ವಾಮಿ ಮಾತನಾಡಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನನ್ನ ನಾವೆಲ್ಲರೂ ಕಳೆದುಕೊಂಡು ಇಂದು ದುಃಖಿತರಾಗಿದ್ದೇವೆ ಅವರು ಈ ನಾಡಿಗೆ ನೀಡಿದ ಅಪಾರ ಕೊಡುಗೆ ಸಸ್ಯ ಸಂಪತ್ತು ಜೊತೆಗೆ ಪರಿಸರ ಮತ್ತು ಮಾನವ ಒಂದನ್ನೊಂದು ಬಿಟ್ಟು ಸಾಧ್ಯವಿಲ್ಲ ಅದರಲ್ಲೂ ಮನುಷ್ಯ ಜೀವನವಂತು ಈ ಪರಿಸರವಿಲ್ಲದೆ ಬದುಕಲು ಅಸಾಧ್ಯವೇ ಸರಿ ಅಂತ ಮೌಲ್ಯಯುತ ಬದುಕನ್ನ ಬದುಕಿ ತೋರಿಸಿ ನಮ್ಮಿಂದ ಅಗಲಿರುವ ಸಾಲುಮರದ ತಿಮ್ಮಕ್ಕನವರ ಅಗಲಿಕೆಯ ನೆನಪಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸುತ್ತಮುತ್ತಲ ಗ್ರಾಮದವರಿಗೆ ಉಚಿತ ನೇತ್ರ ಶಿಬಿರ ಹಾಗೂ , ತಪಾಸಣೆ ಶಿಬಿರವನ್ನು ಈ ಜಿ ಮಾರಹಳ್ಳಿ ಗ್ರಾಮದಲ್ಲಿ ಇನ್ನೂರಕ್ಕೂ ಹೆಚ್ಚು ಜನ ಇದರ ಸದುಪಯೋಗವನ್ನು ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡು ಯಶಸ್ವಿ ಗೊಳಿಸಿದ್ದಾರೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕೆಲವರನ್ನ ಆಹ್ವಾನಿಸಲಾಗಿದೆ ತುಂಬಾ ಜನ ನಗರ ಪ್ರದೇಶಕ್ಕೆ ಹೋಗಲು ಆಗದಿರುವವರು ಇದ್ದಾರೆ ಜೊತೆಗೆ ತುಂಬಾ ಕಡುಬಡತನದಲ್ಲಿರುವವರು ಬಿ. ಪಿ. ಶುಗರ್,ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಕುಟುಂಬಗಳಿಗೆ ಹಣದ ತೊಂದರೆಯೂ ಮತ್ಯಾವುದೋ ತೊಂದರೆಯಿಂದ ದಿನ ದುಡುತ್ತಿರುತ್ತಾರೆ ಅಂತವರಿಗಾಗಿಯೇ ನಮ್ಮ ಸುತ್ತೂರು ಗ್ರಾಮ ಪಂಚಾಯ ಒಂದು ದಿನದ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿದೆ ಇನ್ನು ಮುಂದೆ ಇನ್ನು ಹೆಚ್ಚಿನ ರೀತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ರಂಗಸ್ವಾಮಿಯವರು ತಿಳಿಸಿದರು.
ಕಾರ್ಯ ಕ್ರಮದಲ್ಲಿ ಸುತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಪ್ರತಿಮಾ ಪರಮೇಶ್ವರ್ ಅವರು,ಊರಿನ ಗೌಡರದ ಶಿವಪ್ರಶಾದ್, ಗುರುಸ್ವಾಮಿ, ಶಿವಶಂಕರ್, ಮಹಾಜನ ಕಾಲೇಜು ಮುಖಸ್ಥರು, ಗ್ರಾಮಸ್ಥರು
