--Ads--

ಕ್ಷೇತ್ರದ ಜನರು ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಮಾಡಲು ಬಸ್ಸುಗಳ ವ್ಯವಸ್ಥೆ :ಸೀಕಲ್‌ ರಾಮಚಂದ್ರ

On: April 13, 2026 6:05 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕ್ಷೇತ್ರದ ಜನರು ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಮಾಡಲು ಬಸ್ಸುಗಳ ವ್ಯವಸ್ಥೆ :ಸೀಕಲ್‌ ರಾಮಚಂದ್ರ

ಶಿಡ್ಲಘಟ್ಟ : ಭಾರತದ ಸಾಂಸ್ಕೃತಿಕ ಪರಂಪರೆ ಹಾಗು ಆಧ್ಯಾತ್ಮಿಕ ಶಕ್ತಿಯು ಭಕ್ತರ ಮನದಲ್ಲಿ ಮೂಡಿದ್ದು ನಮ್ಮ ಕ್ಷೇತ್ರದ ಜನರಿಗೆ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಮಾಡಲು ಪ್ರತಿ ಪಂಚಾಯತಿಗೆ 2 ಬಸ್ಸುಗಳು ಮತ್ತು ತೀರ್ಥ ಸ್ಥಳಗಳಲ್ಲಿ ಉಳಿದುಕೊಳ್ಳಲು ವಸತಿ ಸೌಲಭ್ಯ ಮತ್ತು ಊಟದ ವ್ಯವಸ್ಥೆಯನ್ನು ಒದಗಿಸಿದ್ದೇವೆ
ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಸೀಕಲ್‌ ರಾಮಚಂದ್ರ ಗೌಡ ತಿಳಿಸಿದರು.

ನಗರದ ಬಿಜೆಪಿಯ ‘ಸೇವಾ ಸೌಧ’ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಏಪ್ರಿಲ್-15 ರಂದು ಬೆಳಿಗ್ಗೆ 11.30 ಗಂಟೆಗೆ ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಶ್ರೀ ಆದಿಚುಂಚನಗಿರಿ ಕ್ಷೇತ್ರದ ನೂತನ ಶ್ರೀಗುರು ಭೈರವೈಕ್ಯ ಮಂದಿರದಲ್ಲಿ ಶ್ರೀಗುರು ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಮೂಲ ವಿಗ್ರಹ ಭೈರವೈಕ್ಯ ಮಂದಿರದ ಲೋಕಾರ್ಪಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಅವರು ಮಾಡಲಿದ್ದು ಆ ಕಾರ್ಯಗಳ ನಿಮಿತ್ತ ಎರಡು ದಿನಗಳ ತೀರ್ಥಯಾತ್ರೆಗಳ ಬಗ್ಗೆ ಮಾಹಿತಿ ನೀಡಿದರು.

ಕ್ಷೇತ್ರದ ಜನರಿಗೆ ಪುಣ್ಯ ಮತ್ತು ದೈವಿಕ ಅನುಗ್ರಹವನ್ನು ಪಡೆಯುವ ಸಲುವಾಗಿ ಏ.14 ಮತ್ತು 15 ರಂದು ಎರಡು ದಿನಗಳ ತೀರ್ಥಯಾತ್ರೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ
ತೀರ್ಥಯಾತ್ರೆಗಳು ಭಾರತದ ಸಾಂಸ್ಕೃತಿಕ ಪರಂಪರೆ ಆಧ್ಯಾತ್ಮಿಕ ಶಕ್ತಿಯನ್ನು ಸಾಕ್ಷಾತ್ಕರಿಸುತ್ತದೆ ಕ್ಷೇತ್ರದ ಜನರಿಗೆ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಮಾಡಲು ಪ್ರತಿ ಪಂಚಾಯತಿಗೆ 2 ಬಸ್ಸುಗಳು ಮತ್ತು ತೀರ್ಥ ಸ್ಥಳಗಳಲ್ಲಿ ಉಳಿದುಕೊಳ್ಳಲು ವಸತಿ ಸೌಲಭ್ಯ ಮತ್ತು ಊಟದ ವ್ಯವಸ್ಥೆಯನ್ನು ಒದಗಿಸಿದ್ದೇವೆ ಎಂದು ಹೇಳಿದರು.

ಏ.14 ರಂದು ಮಧ್ಯಾಹ್ನ 2 ಗಂಟೆಗೆ ತಾಲ್ಲೂಕಿನಿಂದ ಪ್ರವಾಸ ಹೊರಟ ಭಕ್ತರು ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಪಂಚಮುಖಿ ಶ್ರೀಆಂಜನೇಯಸ್ವಾಮಿ ದೇವಾಲಯ, ಶ್ರೀಸತ್ಯ ಶನೇಶ್ವರ ದೇವಾಲಯ,
ಯಡೆಯೂರು ಶ್ರೀಸಿದ್ಧಲಿಂಗೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲಿದ್ದು ನೂರಾರು ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುವ ಉದ್ದೇಶದಿಂದ ತೀರ್ಥ ಕ್ಷೇತ್ರಗಳ ವಿಶೇಷ ದರ್ಶನ ಪ್ರಾಪ್ತಿ ಮಾಡಿಸಲಿದ್ದೇವೆ ಎಂದರು.

ವಿಶೇಷವಾಗಿ ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಅನೇಕ ಬಡ ಕುಟುಂಬಗಳ ಮಕ್ಕಳಿಗೆ ಉಚಿತ ಊಟ, ವಿದ್ಯಾಭ್ಯಾಸ ನೀಡಿ ಇಂದು ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿ ಉನ್ನತ ಹುದ್ದೆಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ, ಅಂತಹ ಪುಣ್ಯ ಸ್ಥಳಕ್ಕೆ ಕ್ಷೇತ್ರದಿಂದ ದಿನಾಂಕ 14 ರಂದು ಹೊರಟು ಪುಣ್ಯ ಸ್ಥಳಗಳ ದರ್ಶನ ಪಡೆದು ದಿನಂಕ 15 ರಂದು ಶ್ರೀ ಗುರು ಭೈರವೈಕ್ಯ ಮಂದಿರದವನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಹೊರಡುವುದು ಎಂದರು.

ತಾಲ್ಲೂಕಿನಾದ್ಯಂತ ಪ್ರತಿ ಪಂಚಾಯತಿ ಹಾಗೂ ಬೂತ್ ಮಟ್ಟದಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದ್ದು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಮ್ಮ ಮುಖಂಡರ ಮುಖಾಂತರ ಹೊರಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಬಿಜೆಪಿ ಅದ್ಯಕ್ಷ ಸೀಕಲ್ ಆನಂದಗೌಡ , ನಗರ ಘಟಕದ ನಿಕಟಪೂರ್ವ ಅದ್ಯಕ್ಷ ನರೇಶ್,ಶ್ರೀವೆಂಕಟೇಶ್ವರ ಚಿತ್ರಮಂದಿರದ‌ ಮಾಲಿಕ ಎಸ್.ಪ್ರಕಾಶ್ ,ಸಂಜೀವಪ್ಪ,ರಾಮಕೃಷ್ಣ, ಮತ್ತಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರೋಗಿಗಳಿಗೆ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಣೆ ಮಾಡಿದ  ಪೂಲಕುಂಟಲಹಳ್ಳಿ ರಘುನಾಥರೆಡ್ಡಿ 

ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ: ಪಾಳುಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಣೆ

ರಾಜ್ಯದಲ್ಲಿ ಕರವೇ ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ : ಕರವೇ ಅಧ್ಯಕ್ಷ ಮುನಿರಾಜ್(ಕುಟ್ಟಿ)

ಬೆಸ್ಕಾಂ ಖಾಸಗೀಕರಣಕ್ಕೆ ನೌಕರರು ,ಗುತ್ತಿಗೆದಾರರಿಂದ ವಿರೋಧ !

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು 3 ವರ್ಷ ಮುಗಿದಿದೆ ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡರ ಕೊಡುಗೆ ಏನು :  ಪೂಲಕುಂಟಲಹಳ್ಳಿ ರಘುನಾಥ್ ರೆಡ್ಡಿ

ರೈತರಿಗೆ ಹನಿ ನೀರಾವರಿ ಹಾಗು ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡಬೇಕು :  ಹಿತ್ತಲಹಳ್ಳಿ ಗೋಪಾಲಗೌಡ ಒತ್ತಾಯ