--Ads--

ಶ್ರೀಶೈಲಕ್ಕೆ ಭಕ್ತರ ಮರಗಾಲು ಪಾದಯಾತ್ರೆ

On: March 25, 2025 8:00 AM
Follow ಮಾಡಿ
--Ads--

Whatsapp Channel

Join Now

Telegram Group

Join Now

 

ವಿಜಯ ದರ್ಪಣ ನ್ಯೂಸ್…..

ಶ್ರೀಶೈಲಕ್ಕೆ ಭಕ್ತರ ಮರಗಾಲು ಪಾದಯಾತ್ರೆ

ಆಂಧ್ರಪ್ರದೇಶ: ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆ ಆರಂಭವಾಗಿದೆ. ಯುಗಾದಿ ಸಮೀಪಿಸುತ್ತಿದ್ದು, ಲಕ್ಷಾಂತರ ಭಕ್ತರು ಪವಿತ್ರ ದೇಗುಲದತ್ತ ಪ್ರಯಾಣ ಆರಂಭಿಸಿದ್ದಾರೆ. ಇದರಲ್ಲಿ ಕರ್ನಾಟಕದ ವಿವಿಧ ಊರುಗಳಿಂದ ಬಂದ ಭಕ್ತರು ಇದ್ದು, ನೂರಾರು ಕಿಲೋ ಮೀಟರ್ ದೂರ ನಡೆದುಕೊಂಡು ಹೋಗುತ್ತಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್ ಮೂಲಕ ಕೆಲ ಪಾದಯಾತ್ರಿಗಳು ಕಾಲಿಗೆ ಉದ್ದದ ಕೋಲುಗಳನ್ನು ಕಟ್ಟಕೊಂಡು ತೆರಳುತ್ತಿರುವುದು ಕಂಡುಬಂದಿತು. ಇದಕ್ಕೆ ಮರಗಾಲ ನಡಿಗೆ ಅಂತಾ ಕರೆಯಲಾಗುತ್ತದೆ. ಪ್ರತಿ ಹೆಜ್ಜೆಯಲ್ಲೂ ಶಿವನಾಮ ಸ್ಮರಣೆ ಮಾಡುತ್ತಾ ಅವರು ತೆರಳುತ್ತಿದ್ದರು. ಇನ್ನು ಕೆಲವರು, ಪಲ್ಲಕ್ಕಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅದನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರೆ. ದಾರಿ ಉದ್ದಕ್ಕೂ ಶಿವಸ್ಮರಣೆ ಮಾಡುತ್ತಿದ್ದಾರೆ. ವಿವಿಧ ಹಂತಗಳಲ್ಲಿ ವಿಶ್ರಾಂತಿ ಪಡೆದು ಶ್ರೀಶೈಲಕ್ಕೆ ಪಾದಯಾತ್ರೆ ನಡೆಸುತ್ತಿದ್ದಾರೆ.

ಪಲ್ಲಕ್ಕಿಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಮೆರವಣಿಗೆ:

ಮರಗಾಲು ನಡಿಗೆ ಮೂಲಕ ಹರಕೆ: ಪಾದಯಾತ್ರಿಗಳು ಕಾಲುಗಳಿಗೆ ವಿವಿಧ ಪ್ರಮಾಣದಲ್ಲಿ ಕೋಲುಗಳನ್ನು ಕಟ್ಟಿಕೊಂಡು ಸಾಗುತ್ತಿದ್ದಾರೆ. ಕೆಲವರು 4 ಅಡಿ, 5 ಅಡಿ, 6 ಅಡಿ ಎತ್ತರದ ಕೋಲುಗಳ ಮೇಲೆ ನಿಂತುಕೊಂಡು ಯಾತ್ರೆಯಲ್ಲಿ ತೊಡಗಿದ್ದಾರೆ. ಇದೊಂದು ರೀತಿಯ ಹರಕೆಯಾಗಿದೆ. ಕೋಲುಗಳ ಮೇಲೆ ನಡೆದುಕೊಂಡು ಬರುವುದಾಗಿ ಭಕ್ತರು ಹರಕೆ ಹೊರುವುದು ವಾಡಿಕೆ.

WhatsApp

Join Now

Telegram

Join Now

Instagram

Join Now