ಒಲಿಂಪಿಕ್ ಮತ್ತು ಬೇರುಮಟ್ಟದ ಕ್ರೀಡಾ ಬೆಳವಣಿಗೆಗೆ ನಿರಂತರ ಪಾಲುದಾರಿಕೆಯ ಮೂಲಕ ಭಾರತೀಯ ಕ್ರೀಡೆಗೆ ಬೆಂಬಲವನ್ನು ಬಲಪಡಿಸಿದ ಗೇಮ್ಸ್‌ಕ್ರಾಫ್ಟ್ ಫೌಂಡೇಶನ್
ವಿಜಯ ದರ್ಪಣ ನ್ಯೂಸ್ ….
ಒಲಿಂಪಿಕ್ ಮತ್ತು ಬೇರುಮಟ್ಟದ ಕ್ರೀಡಾ ಬೆಳವಣಿಗೆಗೆ ನಿರಂತರ ಪಾಲುದಾರಿಕೆಯ ಮೂಲಕ ಭಾರತೀಯ ಕ್ರೀಡೆಗೆ ಬೆಂಬಲವನ್ನು ಬಲಪಡಿಸಿದ ಗೇಮ್ಸ್‌ಕ್ರಾಫ್ಟ್ ಫೌಂಡೇಶನ್
ಜೂನ್ 25, 2025 – ಗೇಮ್ಸ್‌ಕ್ರಾಫ್ಟ್ ಫೌಂಡೇಶನ್ ಎಂಬುದು ಕೌಶಲ ಆಧರಿತ ಆನ್‌ಲೈನ್ ಗೇಮಿಂಗ್ ಕಂಪನಿ ಗೇಮ್ಸ್‌ಕ್ರಾಫ್ಟ್‌ನ ಸಮಾಜ ಸೇವೆ ವಿಭಾಗವಾಗಿರುವ ಗೇಮ್ಸ್‌ಕ್ರಾಫ್ಟ್ ಫೌಂಡೇಶನ್ ದೇಶದ ನಾಲ್ಕು ಅತ್ಯಂತ ಗೌರವಯುತ ಕ್ರೀಡಾ ಸಂಸ್ಥೆಗಳ ಜೊತೆಗೆ ಪಾಲುದಾರಿಕೆಯ ಮೂಲಕ ಭಾರತ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸವು ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಮರುಸಾಬೀತುಪಡಿಸಿದೆ. ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (ಐಐಎಸ್), ಅಂಜು ಬಾಬ್ಬಿ ಸ್ಪೋರ್ಟ್ಸ್ ಫೌಂಡೇಶನ್ (ಎಬಿಎಸ್‌ಎಫ್), ಗೋ ಸ್ಪೋರ್ಟ್ಸ್ ಫೌಂಡೇಶನ್ ಮತ್ತು ಡೋಲಾ ಹಾಗೂ ರಾಹುಲ್ ಬ್ಯಾನರ್ಜಿ ಸ್ಪೋರ್ಟ್ಸ್ ಫೌಂಡೇಶನ್ (ಡಿಆರ್‌ಬಿಎಸ್‌ಎಫ್) ಸಂಸ್ಥೆಗಳ ಜೊತೆಗೆ ಕೈಜೋಡಿಸಲಾಗಿದೆ.
ಬೇರು ಮಟ್ಟದ ಪ್ರತಿಭಾ ಶೋಧದಿಂದ ಪರಿಣಿತ ಅಥ್ಲೀಟ್ ವಿಕಸನದ ವರೆಗೆ ಭಾರತದ ಕ್ರೀಡಾ ವ್ಯವಸ್ಥೆಯನ್ನು ಬಲಪಡಿಸುವ ದೀರ್ಘಕಾಲೀನ ಗುರಿಯನ್ನು ಗೇಮ್ಸ್‌ಕ್ರಾಫ್ಟ್‌ನ ಈ ಕ್ರಮವು ಸಾಬೀತುಪಡಿಸುತ್ತಿದೆ.
ಗೇಮ್ಸ್‌ಕ್ರಾಫ್ಟ್‌ನ ಕಾರ್ಪೊರೇಟ್ ಕಮ್ಯೂನಿಕೇಶನ್ಸ್ ಮತ್ತು ಸಿಎಸ್‌ಆರ್ ವಿಭಾಗದ ಉಪಾಧ್ಯಕ್ಷ ರಿಶಿ ವಧೇರಾ ಹೇಳುವಂತೆ “ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಪಾಲುದಾರಿಕೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ನಿರಂತರ ಬೆಂಬಲವು ಅಥ್ಲೀಟ್‌ಗಳ ವಿಕಸನದಲ್ಲಿ ಎಷ್ಟು ಪ್ರಮುಖ ವ್ಯತ್ಯಾಸವನ್ನು ಉಂಟುಮಾಡಬಹುದು ಎಂಬುದನ್ನು ನಾವು ಗಮನಿಸಿದ್ದೇವೆ. ಸಂಭಾವ್ಯ ಅಥ್ಲೀಟ್‌ಗಳನ್ನು ಬೆಂಬಲಿಸುವುದು, ಸುಸ್ಥಿರವಾದ ಮೂಲಸೌಕರ್ಯವನ್ನು ನಿರ್ಮಿಸುವುದು ಮತ್ತು ಭವಿಷ್ಯದ ಚಾಂಪಿಯನ್‌ಗಳನ್ನು ರೂಪಿಸುವಲ್ಲಿ ಸಮುದಾಯಗಳಿಗೆ ಬೆಂಬಲ ನೀಡುವುದರಲ್ಲಿ ನಾವು ಗಮನಹರಿಸಿದ್ದೇವೆ. ಭಾರತದ ಕ್ರೀಡಾ ವ್ಯವಸ್ಥೆಗೆ ಧನಾತ್ಮಕವಾಗಿ ಕೊಡುಗೆ ನೀಡಲು ನಮ್ಮ ನಿರಂತರ ಬದ್ಧತೆಗೆ ಈ ಸಹಭಾಗಿತ್ವವು ಪೂರಕವಾಗಿದ್ದು, ನಮ್ಮ ಪಾಲುದಾರರ ಸಹಕಾರದಿಂದ ಇದು ದೀರ್ಘಕಾಲೀನ ಗುರಿಯಾಗಿ ಬೆಳೆದಿದೆ.”
ಗೇಮ್ಸ್‌ಕ್ರಾಫ್ಟ್ ಫೌಂಡೇಶನ್‌ನ ಪ್ರಯತ್ನವನ್ನು ಮೆಚ್ಚಿರುವ ಮತ್ತು ಅವರ ದೀರ್ಘಕಾಲೀನ ಬದ್ಧತೆಯನ್ನು ಮನ್ನಿಸಿರುವ ಎಬಿಎಸ್‌ಎಫ್‌ನ ಸಂಸ್ಥಾಪಕಿ ಮತ್ತು ವರ್ಲ್ಡ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಪ್ರಥಮ ಪದಕ ತಂದುಕೊಟ್ಟಿರುವ ಅಂಜು ಬಾಬ್ಬಿ ಜಾರ್ಜ್ ಮಾತನಾಡಿ “ಗೇಮ್ಸ್‌ಕ್ರಾಫ್ಟ್ ಫೌಂಡೇಶನ್ ಜೊತೆಗೆ ನಮ್ಮ ಸಹಭಾಗಿತ್ವವು ದೀರ್ಘಕಾಲೀನ ಪರಿಣಾಮ ಬೀರುವುದರ ಮೇಲೆ ಹೆಚ್ಚಿನ ಗಮನ ಹರಿಸಿದೆ. ನಮಗೆ ಸಿಕ್ಕ ಬೆಂಬಲವು ನಮ್ಮ ತರಬೇತಿ ಮೂಲಸೌಕರ್ಯವನ್ನು ಸುಧಾರಿಸುವುದರ ಜೊತೆಗೆ ಸಣ್ಣ ಹಳ್ಳಿಗಳು ಮತ್ತು ನಗರಗಳ ಹೆಣ್ಣುಮಕ್ಕಳ ದೊಡ್ಡ ಕನಸುಗಳನ್ನು ನನಸಾಗಿಸುವಲ್ಲಿ ಮಹತ್ವದ ನೆರವು ನೀಡುತ್ತದೆ.”
“ನಾವು ಬಯಸುವ ಯಶಸ್ಸನ್ನು ಭಾರತೀಯ ಕ್ರೀಡಾ ವಲಯವು ತಲುಪುವುದಕ್ಕೆ, ಪ್ರತಿಭೆಯಷ್ಟೇ ಸಾಲದು. ಕಾರ್ಪೊರೇಟ್ ವಲಯವು ಕ್ರೀಡಾ ವಲಯಕ್ಕೆ ಬೆಂಬಲ ನೀಡಬೇಕಿರುತ್ತದೆ. ಇದರಿಂದಲೇ ನಾವು ಈ ಮಟ್ಟಿಗೆ ಸಾಧನೆ ಮಾಡಲು ಸಾಧ್ಯವಾಗಿದೆ. ಗೇಮ್ಸ್‌ಕ್ರಾಫ್ಟ್ ಫೌಂಡೇಶನ್‌ನಲ್ಲಿ ನಮ್ಮ ಒಲಿಂಪಿಕ್ ಮಹತ್ವಾಕಾಂಕ್ಷೆಯ ಬಗ್ಗೆ ಪ್ರೀತಿ ಇರುವ ಜನರಿದ್ದಾರೆ. ನಾವೆಲ್ಲರೂ ಸೇರಿ ನಮ್ಮ ಅಥ್ಲೀಟ್‌ಗಳಿಗೆ ಒಂದು ವ್ಯವಸ್ಥೆಯನ್ನು ರೂಪಿಸಿದ್ದೇವೆ. ಇದು ಅವರು ಯಶಸ್ವಿಯಾಗಲು ನೆರವಾಗುತ್ತದೆ ಮತ್ತು ಭವಿಷ್ಯದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ನಿಂದ ಇನ್ನಷ್ಟು ಪ್ರತಿಭೆಗಳು ಪೋಡಿಯಮ್‌ಗೆ ಬರುತ್ತವೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ” ಎಂದು ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ನ ಅಧ್ಯಕ್ಷ ಮನಿಶಾ ಮಲ್ಹೋತ್ರಾ ಹೇಳಿದ್ದಾರೆ.
ಈ ಸಹಭಾಗಿತ್ವವು ಈಗಾಗಲೇ ಜಾಗತಿಕ ಮಟ್ಟದಲ್ಲಿ ಫಲಿತಾಂಶಗಳನ್ನು ತೋರಿಸುತ್ತಿವೆ. 2024 ಪ್ಯಾರಿಸ್ ಓಲಿಂಪಿಕ್ಸ್‌ನಲ್ಲಿ ಪುರುಷರ ಜ್ಯಾವೆಲಿನ್ ಥ್ರೋದಲ್ಲಿ ಬೆಳ್ಳಿ ಪದಕವನ್ನು ನೀರಜ್ ಛೋಪ್ರಾ (ಐಐಎಸ್) ಪಡೆದಿದ್ದಾರೆ. 2024 ರ ಪ್ಯಾರಾಲಿಂಪಿಕ್ಸ್‌ನಲ್ಲಿ ಗೋ ಸ್ಪೋರ್ಟ್ ಫೌಂಡೇಶನ್ ಬೆಂಬಲ ನೀಡಿದ ಅಥ್ಲೀಟ್‌ಗಳು ನಾಲ್ಕು ಪದಕಗಳನ್ನು ಪಡೆದುಕೊಂಡಿದ್ದಾರೆ: ಸುಮಿತ್ ಅಂತಿಲ್ ಮತ್ತು ಧರಮ್‌ಬೀರ್ ಅವರಿಗೆ ಚಿನ್ನ, ಸುಹಾಸ್ ಯೆತಿರಾಜ್ ಅವರಿಗೆ ಬೆಳ್ಳಿ, ರಾಕೇಶ್ ಕುಮಾರ್ ಅವರಿಗೆ ತಾಮ್ರದ ಪದಕ ಲಭಿಸಿದೆ. 2025 ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಶೈಲಿ ಸಿಂಗ್ (ಎಬಿಎಸ್‌ಎಫ್) ತಾಮ್ರ ಹಾಗೂ 2025 ರ ಆರ್ಚರಿ ವರ್ಲ್ಡ್ ಕಪ್‌ನಲ್ಲಿ ತಾಮ್ರವನ್ನು ದೀಪಿಕಾ ಕುಮಾರ್ (ಡಿಆರ್‌ಬಿಎಸ್‌ಎಫ್) ಪಡೆದಿದ್ದಾರೆ.
ಭಾರತದ ಕ್ರೀಡಾ ಪರಿಸರವನ್ನು ಬಲಪಡಿಸಲು ಗೇಮ್ಸ್‌ಕ್ರಾಫ್ಟ್ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ನಿಜವಾದ ಅವಕಾಶಗಳನ್ನು ರೂಪಿಸುತ್ತಿದೆ ಮತ್ತು ಪ್ರತಿಭಾವಂತರನ್ನು ಪೋಷಿಸುತ್ತಿದೆ. ಈ ಮೂಲಕ ವಿವಿಧ ವಿಭಾಗದಲ್ಲಿ ಅಥ್ಲೀಟ್‌ಗಳ ಮಹತ್ವಾಕಾಂಕ್ಷೆಗಳಿಗೆ ಇಂಬು ನೀಡುತ್ತಿದೆ.