ಶಿವರಾಮೇಗೌಡರ ಕ.ರ.ವೇ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ವಿಜಯ ದರ್ಪಣ ನ್ಯೂಸ್…

ಶಿವರಾಮೇಗೌಡರ ಕ.ರ.ವೇ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಮಡಿಕೇರಿ ಆಗಸ್ಟ್  15 :ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಟೋಲ್ ಗೇಟ್ ಬಳಿ ಇರುವ ವಿಶ್ವಮಾನವ ಉದ್ಯಾನವನದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಪ್ರಭು ರೈ ಅವರು ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು ಸಮಾಜ ಸೇವಕರು ಹಾಗೂ ಮಾಜಿ ಅಹಿಂದ ಅಧ್ಯಕ್ಷ ಮುದ್ದಯ್ಯ ರವರು ಧ್ವಜಾರೋಹಣ ನೆರವೇರಿಸಿದರು.

ಮಾಜಿ ಪುರಸಭೆ ಉಪಾಧ್ಯಕ್ಷ ಟಿ.ಎಂ.ಅಯ್ಯಪ್ಪ ರವರು ಮಾತನಾಡಿ ಸ್ವಾತಂತ್ರ ದಿನದ ಮಹತ್ವವನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ರವಿಗೌಡ . ತಾಲೂಕು ಉಪಾಧ್ಯಕ್ಷ ನಾಗೇಶ್. ಮಡಿಕೇರಿ ತಾಲೂಕು ಕಾರ್ಯದರ್ಶಿ ಅಕ್ಷಿತ್. ಮಹಿಳಾ ಅಧ್ಯಕ್ಷೆ ಕವಿತಾ ಪ್ರಸಾದ್, ಕಾರ್ಮಿಕ ಘಟಕದ ಅಧ್ಯಕ್ಷೆ ದಿವ್ಯ. ರೂಪ. ಮಡಿಕೇರಿ ನಗರ ಅಧ್ಯಕ್ಷ ಭರತ್. ಸಮಾಜ ಸೇವಕ ಕಲೀಲ್ ಭಾಷಾ. ರಾಷ್ಟ್ರೀಯ ಅಪರಾಧ ಮಾಹಿತಿ ವಿಭಾಗದ ಕರ್ನಾಟಕ ಡೆಪ್ಯೂಟಿ ಡೈರೆಕ್ಟರ್ ರಾಧಾ ಡಾ. ಜಾನ್ಸನ್. ಫೀಲ್ ಮಾರ್ಷಲ್ ಕಾರ್ಯಪ್ಪ ಅಭಿಮಾನಿ ಸಂಘದ ಅಧ್ಯಕ್ಷ ಮುನೀರ್ ಮಾಚರ್. ವೇದಿಕೆ ಸದಸ್ಯರುಗಳಾದ ಪುನೀತ್ ಜಿ. ಎನ್. ಹರ್ಷಿತ್ ಕುಮಾರ್. ಸೈಮನ್. ಹಫೀಜ್. ಎಮ್ ಎಚ್ ಹಾಗೂ ವೇದಿಕೆ ಸದಸ್ಯರುಗಳು ಇನ್ನು ಹಲವರು ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ  ಅಕ್ಷಿತ್ ರವರು ನೆರೆದಿದ್ದವರನ್ನು ಸ್ವಾಗತಿಸಿದರು ನಾಗೇಶ್ ಅವರು ವಂದಿಸಿದರು.