ಅಧಿಕಾರಕ್ಕಾಗಿ ಕಾಂಗ್ರೆಸ್ ನವರು ದೇಶವನ್ನು ಎಷ್ಟು ಬಾರಿಯಾದರೂ ವಿಭಜಿಸಲು ಸಿದ್ಧರಿದ್ದಾರೆ:  ಸಂಸದ ಡಾ.ಕೆ.ಸುಧಾಕರ್ 

ವಿಜಯ ದರ್ಪಣ ನ್ಯೂಸ್…

 ಅಧಿಕಾರಕ್ಕಾಗಿ ಕಾಂಗ್ರೆಸ್ ನವರು ದೇಶವನ್ನು ಎಷ್ಟು ಬಾರಿಯಾದರೂ ವಿಭಜಿಸಲು ಸಿದ್ಧರಿದ್ದಾರೆ:
ಸಂಸದ ಡಾ.ಕೆ.ಸುಧಾಕರ್

ಶಿಡ್ಲಘಟ್ಟ : ರಾಷ್ಟ್ರಗೀತೆಯನ್ನು ವಿರೋಧಿಸಿ ಆ ಮೂಲಕ ದೇಶ ವಿಭಜನೆಗೆ ಕಾರಣರಾದ ಹಿನ್ನೆಲೆಯಿರುವ ಕಾಂಗ್ರೆಸ್‌ ಪಕ್ಷ ದೇಶಕ್ಕೆ ಕಂಟಕ ಅಧಿಕಾರಕ್ಕಾಗಿ ಕಾಂಗ್ರೆಸ್ ನವರು ದೇಶವನ್ನು ಎಷ್ಟು ಬಾರಿಯಾದರೂ ವಿಭಜಿಸಲು ಸಿದ್ಧರಿದ್ದಾರೆ
ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಬಿಜೆಪಿ ಸೇವಾಸೌಧದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಕಾರ್ಯಕ್ರಮದ ಚುನಾವಣಾ ಸಂಚಾಲಕರ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರ ದಾಹ ಬಿಟ್ಟರೆ ಕಾಂಗ್ರೆಸ್ ನವರಿಗೆ ರಾಷ್ಟ್ರೀಯತೆಯಾಗಲೀ, ದೇಶದ ಬಗ್ಗೆ ಅಭಿಮಾನವಾಗಲೀ, ಕಾಳಜಿಯಾಗಲೀ ಇಲ್ಲಾ ಅಧಿಕಾರಕ್ಕಾಗಿ ಇವರು ದೇಶವನ್ನು ಎಷ್ಟು ಬಾರಿಯಾದರೂ ವಿಭಜಿಸಲು ಸಿದ್ಧರಿದ್ದಾರೆ ಕೆಲವೇ ಧರ್ಮಗಳನ್ನು ಓಲೈಕೆ ಮಾಡುವ ಮೂಲಕ ದೇಶವನ್ನು ಹಾಳುಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಪಕ್ಷವು ಮತದಾರರ ಪಟ್ಟಿಗಳನ್ನು ಪರಿಶುದ್ಧವಾಗಿಡಲು ವಿಬಿನ್ನ ಸಿದ್ಧತೆ ನಡೆಸಿದ್ದು ಪ್ರತಿ ಜಿಲ್ಲೆಗೂ ಕೆಲ ಸದಸ್ಯರ ತಂಡವನ್ನು ರಚಿಸಿದೆ ಈ ತಂಡಗಳು ಪಕ್ಷದ ಕಾರ್ಯಕರ್ತರು ಮತ್ತು ಚುನಾವಣಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದ ಮೇಲೆ ನಿಗಾ ಇಡಲಿವೆ ಎಂದು ಹೇಳಿದರು.

ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಒತ್ತು ನೀಡುತ್ತಿರುವ ಪಕ್ಷವು ಮುಂಬರುವ ಪಂಚಾಯತ್ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದೆ ,ಈ ಕಾರ್ಯದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಂಡಿರುವುದು ಪಕ್ಷದ ಬಲವರ್ಧನೆಗೆ ಉತ್ತಮ ಬೆಳವಣಿಗೆಯಾಗಿದೆ ಎಂದರು.

ಭಾರತೀಯ ಚುನಾವಣಾ ಆಯೋಗ (ECI) ದೇಶಾದ್ಯಂತ ಕೈಗೊಳ್ಳಲಿರುವ ಮತದಾರರ ಪಟ್ಟಿಯ SIR ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.

ಇ.ವಿ.ಎಂ.ತಂದಂತಹ ಕಾಂಗ್ರೆಸ್ ಪಕ್ಷ ಈಗ ಅದರ ವಿರುದ್ಧ ಮಾತನಾಡುತ್ತಿದ್ದಾರೆ ಕಾಂಗ್ರೆಸ್ ಗೆದ್ದಾಗ ಇವಿಎಂ ಸರಿಯಾಗಿರುತ್ತದೆ ಆದರೆ ಸೋತಾಗ ಅದರ ಮೇಲೆ ಗೂಬೆ ಕೂರಿಸುತ್ತಾರೆ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಕಾಂಗ್ರೆಸ್ ನವರು ಅಪಮಾನ ಮತ್ತು ಅಪಮೌಲ್ಯ ಮಾಡುತ್ತಿದ್ದಾರೆ ಎಂದರು.

ಇಡೀ ವಿಶ್ವ ಇವತ್ತು ನಮ್ಮ ದೇಶದ ಪ್ರಗತಿ ಮತ್ತು ನಾಯಕತ್ವದ ಬಗ್ಗೆ ಕುತೂಹಲದಿಂದ ನೋಡುತ್ತಿದೆ ಆದರೆ, ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋಗಿ ದೇಶ ಅಭಿವೃದ್ಧಿ ಆಗುತ್ತಿಲ್ಲ, ಮತಗಳ್ಳತನವಾಗಿದೆ ಎನ್ನುತ್ತಾರೆ,ಇವರ ಯೋಗ್ಯತೆಗೆ ಗೆಲ್ಲಲ್ಲು ಆಗದೆ ಆರೋಪಗಳನ್ನು ಮಾಡುತ್ತಾರೆ ಸೋಲನ್ನು ಸಹಿಸಿಕೊಳ್ಳಲಾಗದೆ ಜನಸಾಮಾನ್ಯರ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ, ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ, ಜಿಲ್ಲಾ ಸಂಚಾಲಕಿ ನಿಶ್ಚಿತ,ಮಾಜಿ ಶಾಸಕ ಎಂ.ರಾಜಣ್ಣ,ಕಾರ್ಯದರ್ಶಿಗಳಾದ ಮುರಳಿ, ಮಧು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ
ಸೀಕಲ್ ಆನಂದಗೌಡ,ನಗರ ಘಟಕ ಅದ್ಯಕ್ಷ ನರೇಶ್,
ಮುಖಂಡರಾದ ಕೆ.ಸುರೇಂದ್ರಗೌಡ,ನಾರಾಯಣಸ್ವಾಮಿ, ಚಿಂತಾಮಣಿ ಬಿಜೆಪಿ ಅಧ್ಯಕ್ಷರು ಹಾಗು ಇನ್ನೀತರರು ಹಾಜರಿದ್ದರು.

ವಿಜ್ಞಾನಿಗಳು ಸಮಾಜದ ಒಳಿತಿಗಾಗಿ ದುಡಿದವರು ವಿದ್ಯಾರ್ಥಿಗಳು ಅವರ ಜೀವನದಿಂದ ಪ್ರೇರಣೆ ಪಡೆಯಬೇಕು

ಶಿಡ್ಲಘಟ್ಟ : ಮೇಡಮ್ ಕ್ಯೂರಿ, ಎಡಿಸನ್, ಸಿ.ವಿ. ರಾಮನ್‌, ಸಿ.ಎನ್‌.ಆ‌ರ್. ರಾವ್‌ ಅವರಂತಹ ವಿಜ್ಞಾನಿಗಳು ಸಮಾಜದ ಒಳಿತಿಗಾಗಿ ದುಡಿದವರು ವಿದ್ಯಾರ್ಥಿಗಳು ಅವರ ಜೀವನದಿಂದ ಪ್ರೇರಣೆ ಪಡೆಯಬೇಕು ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿದರೆ ಭವಿಷ್ಯ ಖಂಡಿತವಾಗಿಯೂ ಉಜ್ವಲವಾಗುತ್ತದೆ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಮಾಂಜಿನಪ್ಪ ತಿಳಿಸಿದರು.

ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಲಾದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಮಿನುಗಿತು,ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅನ್ವೇಷಣೆ ಮತ್ತು ವಿಶ್ಲೇಷಣಾತ್ಮಕ ಮನೋಭಾವನೆ ಮೂಡಿಸಲು ಇಂತಹ ವಸ್ತುಪ್ರದರ್ಶನಗಳು ಅತ್ಯಂತ ಸಹಾಯಕವಾಗುತ್ತವೆ ಎಂದು ಹೇಳಿದರು.
ಮುಖ್ಯಶಿಕ್ಷಕ ನವೀನ್ ಮಾತನಾಡಿ,ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿಯೇ ವಿಜ್ಞಾನ ಕಲಿಕೆಯ ಆಸಕ್ತಿ ಮೂಡಿಸುವುದು ಅಗತ್ಯ ವಿದ್ಯಾರ್ಥಿಗಳು ಈ ರೀತಿಯ ಪ್ರದರ್ಶನಗಳ ಮೂಲಕ ನೈಜ ಜೀವನಕ್ಕೆ ಸಂಬಂಧಿಸಿದ ಕಲ್ಪನೆಗಳನ್ನು ಅರಿಯಬಹುದು ಎಂದರು.

ಇದೇ ವೇಳೆ ವಿದ್ಯಾರ್ಥಿಗಳು ತಂತ್ರಜ್ಞಾನ, ಕೃಷಿ, ಪರಿಸರ ಸಂರಕ್ಷಣೆ, ಆರೋಗ್ಯ, ನವೀನ ಇಂಧನ, ಕೈಗಾರಿಕೆ, ಸ್ಮಾರ್ಟ್ ಸಿಟಿ ಕಲ್ಪನೆ ಮುಂತಾದ ವಿಷಯಗಳ ಆಧಾರದ ಮೇಲೆ ಪ್ರಾಯೋಗಿಕ ಮಾದರಿಗಳನ್ನು ಸಿದ್ಧಪಡಿಸಿದ್ದರು ,ಸುಮಾರು ಒಂದು ತಿಂಗಳ ಕಾಲ ಮಾಡಿದ ಪರಿಶ್ರಮದ ಫಲವಾಗಿ ಪ್ರದರ್ಶನದಲ್ಲಿ ಅನೇಕ ನವೀನ ಮಾದರಿಗಳು ಗಮನ ಸೆಳೆದವು.
ಪೋಷಕರು, ಸ್ಥಳೀಯ ನಾಗರಿಕರು ಹಾಗೂ ಗ್ರಾಮಸ್ಥರು ಪ್ರದರ್ಶನ ವೀಕ್ಷಣೆಗೆ ಆಗಮಿಸಿ ವಿದ್ಯಾರ್ಥಿಗಳ ಪ್ರಯತ್ನವನ್ನು ಮೆಚ್ಚಿದರು.

ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.