ವಿಶ್ವಜ್ಞಾನಿ ಟೆನ್ನಿಸ್ ಬಾಲ್ ಕಪ್ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ದರ್ಶನ್ ಧ್ರುವನಾರಾಯಣ್

ವಿಜಯ ದರ್ಪಣ ನ್ಯೂಸ್….

ವಿಶ್ವಜ್ಞಾನಿ ಟೆನ್ನಿಸ್ ಬಾಲ್ ಕಪ್ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ದರ್ಶನ್ ಧ್ರುವನಾರಾಯಣ್

ತಾಂಡವಪುರ ಜನವರಿ 3 ಮೈಸೂರು ಜಿಲ್ಲೆ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡು ತಾಲ್ಲೂಕಿನ ಉಪ್ಪಿನಹಳ್ಳಿ ಗ್ರಾಮದಲ್ಲಿ 76ನೇ ಸಂವಿಧಾನ ದಿನಾಚರಣೆ ಹಾಗೂ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ, ಜೈ ಭೀಮ್ ಯಂಗ್ ಸ್ಟಾರ್ಸ್ ಉಪ್ಪಿನಹಳ್ಳಿ ವತಿಯಿಂದ ಆಯೋಜಿಸಲಾದ ಮೊದಲನೇ ವರ್ಷದ ‘ವಿಶ್ವಜ್ಞಾನಿ ಕಪ್–2025’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು ಫೈನಲ್ ಪಂದ್ಯಾವಳಿಗೆ ಬ್ಯಾಡ್ ಬೀಸುವ ಮೂಲಕ ಚಾಲನೆ ನೀಡಿದರು

ಚಾಲನೆ ನೀಡಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್ ನಮ್ಮ  ಕ್ಷೇತ್ರದಲ್ಲಿ ವಿದ್ಯೆಗೆ ಎಷ್ಟು ಮಹತ್ವ ನೀಡಲಾಗುತ್ತದೋ, ಅದೇ ರೀತಿಯಲ್ಲಿ ಕ್ರೀಡೆಗೂ ಸಮಾನ ಒತ್ತು ನೀಡಲಾಗುತ್ತಿದೆ. ಕ್ರೀಡೆ ಯುವಶಕ್ತಿಯನ್ನು ಶಿಸ್ತು ಮತ್ತು ಆತ್ಮವಿಶ್ವಾಸದತ್ತ ಕರೆದೊಯ್ಯುವ ಶಕ್ತಿಯಾಗಿದೆ ಎಂಬ ನಂಬಿಕೆಯನ್ನು ಹಂಚಿಕೊಂಡು ಎಲ್ಲ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.

ಯುವಕರು ಶಿಕ್ಷಣಕ್ಕೆ ಎಷ್ಟು ಹೊತ್ತು ಪ್ರಮುಖತೆ ನೀಡುತ್ತೀರಾ ಅದೇ ರೀತಿ ಕ್ರೀಡೆಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ ಶಿಕ್ಷಣ ಮತ್ತು ಕ್ರೀಡೆ ಜೊತೆಗಿದ್ದರೆ ಶಿಸ್ತು ಮತ್ತು ಆತ್ಮವಿಶ್ವಾಸದತ್ತ ಕರದೊಯುತ್ತದೆ

ನನ್ನ ಕ್ಷೇತ್ರದಲ್ಲಿ ಯಾವುದೇ ಗ್ರಾಮಗಳಲ್ಲಿ ಕ್ರೀಡೆಗಳು ಹೆಚ್ಚು ಹೆಚ್ಚು ನಡೆಯುತ್ತಿವೆ ಇದು ನನಗೆ ಬಹಳ ಸಂತೋಷವಾಗುತ್ತಿದೆ ನಾನು ಕೂಡ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದೇನೆ ಶಿಕ್ಷಣಕ್ಕೆ ಎಷ್ಟು ಪ್ರೋತ್ಸಾಹ ನೀಡುತ್ತೇನೋ ಅದೇ ರೀತಿ ಕ್ರೀಡೆಗಳನ್ನು ಪ್ರೋತ್ಸಾಹ ನೀಡುತ್ತಿದ್ದೇನೆ
ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ಮಾಜಿ ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ , ಮಹಿಳಾ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ ಕಳಲೆ ಮಹೇಶ್ ಉಪ್ಪಿನಹಳ್ಳಿ ಶಿವಣ್ಣ , ನಾಗರಾಜಯ್ಯ , ದೊರೆಸ್ವಾಮಿ ನಾಯಕ ದೇಬೂರು ಅಶೋಕ್ , ಉಪ್ಪಿನಹಳ್ಳಿ ನಾರಾಯಣ ಕಳಲೆ ರಾಜೇಶ್ ಚಂದನ್ ವಿಜಯ್ ಕುಮಾರ್ ಮುದ್ದುಮಾದ ಶೆಟ್ಟಿ ರವರು, ರಘು ವೀರೇಂದ್ರ ಹಾಗಿನವಾಳು ಬಸವಣ್ಣ ರಾಜು ಸುರೇಶ್ ಸೇರಿದಂತೆ ಹಲವು ಮುಖಂಡರು, ಕ್ರೀಡಾಪಟುಗಳು ಹಾಜರಿದ್ದರು.

&&&&&&&&&&&&5555555&&&&&&&&&&

ಇಂಧನ ಸೋರಿಕೆ, ನಷ್ಟ ತಗ್ಗಿಸಲು ತಾಂತ್ರಿಕ ಪರಿಣತಿ ಅವಶ್ಯ : ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು

ತಾಂಡವಪುರ ಜ.03, 2026: ಇಂಧನ ಸೋರಿಕೆ, ವಿದ್ಯುತ್‌ ಅಡಚಣೆ ಹಾಗೂ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾಂತ್ರಿಕ ನಿರ್ವಹಣೆ ಅವಶ್ಯಕವಾಗಿದ್ದು, ಅಧಿಕಾರಿಗಳು ಸಮರ್ಪಕವಾಗಿ ತಾಂತ್ರಿಕ ನಿರ್ವಹಣೆಗೆ ಮುಂದಾಗಬೇಕು ಎಂದು ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಹೇಳಿದರು.

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಅಧಿಕಾರಿಗಳಿಗೆ ಕೆಇಬಿಇಎ ಮೈಸೂರು ವಲಯ ಕೇಂದ್ರದ ವತಿಯಿಂದ ಮೈಸೂರು ತಾಲೂಕು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕಡಕೋಳ ಗ್ರಾಮದಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘ(ಕೆಇಬಿಇಎ)ದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ “ಇಂಧನ(ವಿದ್ಯುತ್) ಲೆಕ್ಕ ಪರಿಶೀಲನೆ ಮತ್ತು ಐಪಿ ಫೀಡರ್ ನಲ್ಲಿ ನಷ್ಟಗಳ ಕಡಿತ” ವಿಷಯದ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂಧನ ಸೋರಿಕೆ ತಡೆಯುವಲ್ಲಿ ತಾಂತ್ರಿಕ ಪರಿಣತಿ ಮುಖ್ಯವಾಗಿದೆ. ಈ ಹಿಂದೆ ಸಕಲೇಶಪುರದ ಬಾಳುಪೇಟೆ ಫೀಡರ್‌ನಲ್ಲಿ ಎನರ್ಜಿ ಆಡಿಟಿಂಗ್‌ ನಡೆಸಿದ ಸಂದರ್ಭ ಶೇ.40 ರಿಂದ 43% ಇಂಧನ ಸೋರಿಕೆ ಕಂಡುಬಂದಿತ್ತು. ಆನಂತರದಲ್ಲಿ ಸಮರ್ಪಕ ತಾಂತ್ರಿಕ ನಿರ್ವಹಣೆ ಮಾಡಿದ್ದರ ಪರಿಣಾಮವಾಗಿ ಇಂಧನ ಸೋರಿಕೆಯ ಶೇ.12ಕ್ಕೆ ಇಳಿಕೆ ಮಾಡುವಲ್ಲಿ ಯಶಸ್ವಿಯಾದೆವು. ಇದರಿಂದ ನಿಗಮಕ್ಕೆ ಆದಾಯ ಹೆಚ್ಚಿತು, ವಿದ್ಯುತ್‌ ಅಡಚಣೆ ಕಡಿಮೆಯಾಗಿ, ಫೀಡರ್‌ಗಳು, ಟ್ಯಾನ್ಸ್‌ಫಾರ್ಮರ್‌ಗಳು ಮತ್ತು ಮೀಟರ್‌ಗಳ ನಿರ್ವಹಣೆ ಸುಲಭಗೊಂಡಿತು ಎಂದರು.

ಪ್ರಸ್ತುತ ಇಂಧನ ಇಲಾಖೆ ಹೊಸತನಕ್ಕೆ ಆದ್ಯತೆ ನೀಡಿ, 5000 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದಿಸಲು ಕಾರ್ಯಯೋಜನೆ ರೂಪಿಸಿದ್ದು, ಮುಂದಿನ ಒಂದು ವರ್ಷದಲ್ಲಿ ಇದನ್ನು ಸಾಧಿಸುವ ಗುರಿ ಹೊಂದಲಾಗಿದೆ. ಇದರ ನಡುವೆ ಸೆಸ್ಕ್‌ ವ್ಯಾಪ್ತಿಯಲ್ಲಿ 90 ಸ್ಟೇಷನ್‌ಗಳನ್ನು ಪ್ರಸಕ್ತ ವರ್ಷದಲ್ಲಿ ಹಾಕಲು ಮುಂದಾಗಿದೆ. ಪ್ರಮುಖವಾಗಿ ನಿಗಮ ವ್ಯಾಪ್ತಿಯಲ್ಲಿ ವಿದ್ಯುತ್‌ ವಿತರಣೆಯನ್ನು ಬಲಪಡಿಸಿ, ಪ್ರಸಕ್ತ ವರ್ಷದ ಮಾರ್ಚ್ ವೇಳೆಗೆ ಹೊಸದಾಗಿ 100 ಫೀಡರ್‌ಗಳನ್ನು ಹೊಸದಾಗಿ ಗ್ರಿಡ್‌ಗಳಿಗೆ ಸೇರ್ಪಡೆ ಮಾಡಬೇಕಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ತರಬೇತಿಯಲ್ಲಿ ನೀಡುವ ಸಲಹೆಗಳನ್ನು ಪಡೆದು, ಅವುಗಳನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರುವುದರೊಂದಿಗೆ ಯಾವ ಫೀಡರ್‌ಗಳಲ್ಲಿ ಇಂಧನ ಸೋರಿಕೆ ಇದೆ ಅಂತಹ ಫೀಡರ್‌ಗಳಲ್ಲಿ ತಾಂತ್ರಿಕ ಪರಿಣತಿಯನ್ನು ಅಳವಡಿಸಿ, ಇಂಧನ ಸೋರಿಕೆ ಪ್ರಮಾಣವನ್ನು ತಗ್ಗಿಸಬೇಕಾಗಿದೆ. ಇದರೊಂದಿಗೆ ನಮ್ಮಲ್ಲಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು, ನಿರ್ದಿಷ್ಟ ಗುರಿ ಸಾಧಿಸಲು ಕಾರ್ಯಯೋಜನೆ ರೂಪಿಸಬೇಕಿದೆ ಎಂದರು.

ನಂತರ ನಡೆದ ತಾಂತ್ರಿಕ ಕಾರ್ಯಾಗಾರದಲ್ಲಿ ನಿವೃತ್ತ ತಾಂತ್ರಿಕ ನಿರ್ದೇಶಕರಾದ ಎಸ್‌. ಮಹೇಶ್‌ ಅವರು, ಇಂಧನ(ವಿದ್ಯುತ್) ಲೆಕ್ಕಪರಿಶೀಲನೆಯ ತಂತ್ರಗಳು, ಇಂಧನ ಸೋರಿಕೆ ಹಾಗೂ ಆರ್ಥಿಕ ನಷ್ಟವನ್ನು ಕಡಿತಗೊಳಿಸುವ ಪ್ರಾಯೋಗಿಕ ಅಂಶಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸಮರ್ಪಕ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸೆಸ್ಕ್‌ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್‌, ಅಧೀಕ್ಷಕ ಇಂಜಿನಿಯರ್‌ ಸುನೀಲ್‌, ಮುಖ್ಯ ಇಂಜಿನಿಯರ್‌ಗಳಾದ ಮೃತ್ಯುಂಜಯ, ಸೋಮಶೇಖರ್‌, ಮುಖ್ಯ ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ) ಶರಣಮ್ಮ ಎಸ್‌. ಜಂಗಿನ, ಕೆಇಬಿಇಎ ಉಪಾಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ರಾಜ್ಯ ಕಾರ್ಯದರ್ಶಿ ಆರ್. ಸುಧೀರ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.