ಬಿಜೆಪಿ ಕಾರ್ಯಕರ್ತರ ಸ್ನೇಹ ಸಮ್ಮಿಲನ ಮತ್ತು ಶಕ್ತಿಕೇಂದ್ರ, ಬಿ.ಎಲ್.ಎ-2 ಸಮಾವೇಶ

ವಿಜಯ ದರ್ಪಣ ನ್ಯೂಸ್….

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ:

ಬಿಜೆಪಿ ಕಾರ್ಯಕರ್ತರ ಸ್ನೇಹ ಸಮ್ಮಿಲನ ಮತ್ತು ಶಕ್ತಿಕೇಂದ್ರ, ಬಿ.ಎಲ್.ಎ-2 ಸಮಾವೇಶ

ಯಶವಂತಪುರ: ಬೆಂಗಳೂರು ಪೋಟೋ ಸ್ಟೂರೀಸ್ ಆಂಡ್ ಕನ್ವನ್ವೇನ್ ಸಭಾಂಗಣದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರ ಮತ್ತು ಬಿ.ಎಲ್.ಎ-2 ಗಳ ಸಮಾವೇಶ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ.

ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಶಾಸಕ ಸಿ.ಕೆ.ರಾಮಮೂರ್ತಿರವರು, ವಿಧಾನಪರಿಷತ್ ಸದಸ್ಯರುಗಳಾದ ಗೋಪಿನಾಥ್ ರೆಡ್ಡಿ, ಎನ್.ರವಿಕುಮಾರ್, ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯ ಕೆ.ಉಮೇಶ್ ಶೆಟ್ಟಿರವರು, ಬಿ.ಎಲ್.ಎ.2 ಉಸ್ತುವಾರಿ ಜಗದೀಶ್ ಹಿರೇಮನಿ, ಮಂಡಲದ ಅಧ್ಯಕ್ಷ ಎನ್.ಬಿ.ಮಂಜುನಾಥ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಸಕ ಸಿ.ಕೆ.ರಾಮಮೂರ್ತಿ ಅವರು ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷತ್ರದಲ್ಲಿ 3ಲಕ್ಷದ 60ಸಾವಿರ ಮತದಾರರು ಇದ್ದಾರೆ, 270ಕ್ಕೂ ಹೆಚ್ಚು ಬೂತ್ ಗಳಿಗೆ. ಬಿ.ಎಲ್.ಎ-2ಗಳಿಗೆ ಒಬ್ಬ ವ್ಯಕ್ತಿಯನ್ನು ಗೆಲ್ಲಿಸುವ ಶಕ್ತಿ ಇದೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಉತ್ತಮ ಸಂಘಟನೆಯಿಂದ ಸದೃಢವಾಗಿದೆ.
ಲೋಕಸಭಾ ಚುನಾವಣೆಯಲ್ಲಿ 50ಸಾವಿರ ಲೀಡ್ ನೀಡಿದ್ದೀರ. ಅತಿಹೆಚ್ಚು ಸದಸ್ಯತ್ವ ಹೊಂದಿರುವ ಕ್ಷೇತ್ರವಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ, ಕೆ.ಉಮೇಶ್ ಶೆಟ್ಟಿರವರು ಶಾಸಕರಾಗುವುದು ನಿಶ್ಚಿತ ಎಂದು ಹೇಳಿದರು.

ಗೋಪಿನಾಥರೆಡ್ಡಿ ಅವರು ಮಾತನಾಡಿ ಶಿಸ್ತ್ರು, ಬದ್ದತೆ, ವಿಶ್ವಾಸ, ಸಕ್ರಿಯವಾಗಿ ಪ್ರತಿಯೊಬ್ಬ ಕಾರ್ಯಕರ್ತನಿಗೆ ಇರಬೇಕು.

ರಾಜಕೀಯದಲ್ಲಿ ಪಾರದರ್ಶಕ ,ಶುದ್ದ ಆಡಳಿತ ತರಬೇಕು ಎಂದರೆ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ. ದೇಶ ಮೊದಲು ಎಂಬ ತತ್ವದ ಮೇಲೆ ಬಿಜೆಪಿ ಪಕ್ಷ ನಡೆಯುತ್ತಿದೆ.

ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುತ್ತಾರೆ, ವಿಧಾನಸಭಾ ಚುನಾವಣೆ ಬಂದಾಗ ಕಡಿಮೆ ಮತ ಬರುತ್ತದೆ. ಅದರೆ ಲೋಕಸಭೆಗೆ ಹೆಚ್ಚು ಮತ , ವಿಧಾನಸಭೆ ಚುನಾವಣೆ ಕಡಿಮೆ ಮತ ಯಾಕೆ ಎಂಬುದು ಕುರಿತು ಚರ್ಚೆ ಮಾಡಬೇಕು.

ರಾಹುಲ್ ಗಾಂಧಿರವರು ಇವಿಎಮ್ ನಲ್ಲಿ ಓಟ್ ಚೋರಿ ಎಂದು ಸುಳ್ಳು ಅರೋಪ ಮಾಡುತ್ತಿದ್ದಾರೆ.

ನಮ್ಮ ಪಕ್ಷಕ್ಕೆ ಇ.ವಿ.ಎಮ್.ನಿಂದ ಗೆಲ್ಲುತ್ತಿಲ್ಲ , ನಮ್ಮ ಕಾರ್ಯಕರ್ತರಿಂದ ನಾವು ಚುನಾವಣೆ ಗೆಲ್ಲುತ್ತಿದ್ದೇವೆ.
ಬೂತ್ ಕೆಲಸ ಸದೃಢವಾಗಿ ಕೆಲಸ ಮಾಡಿ .

ನಗರ ಪ್ರದೇಶದಲ್ಲಿ ಒಂದು ಬೂತ್ ನಲ್ಲಿ 300ರಿಂದ 350 ಮನೆಗಳು, 1200ಮತದಾರರು ಇರುತ್ತಾರೆ.
ಪ್ರತಿ ಬೂತ್ ಬಿಜೆಪಿ ಪಕ್ಷದ ಭದ್ರಕೋಟೆ ಮಾಡಬೇಕು ಎಂದು ಹೇಳಿದರು.

ಕೆ.ಉಮೇಶ್ ಶೆಟ್ಟಿ ಅವರು ಮಾತನಾಡಿ ಪಕ್ಷದ ಸಂಘಟನೆ ಮುಖ್ಯ. ಬಿ.ಎಲ್.ಎ.-2ಬಹಳ ಡೊಡ್ಡ ಜವಾಬ್ದಾರಿ ಸ್ಥಾನವಾಗಿದೆ.

ಬೂತ್ ಮೊದಲ ಗೆದ್ದರೆ, ವಾರ್ಡ್ ಗೆದ್ದಂತೆ ನಂತರ ವಿಧಾನಸಭೆ, ಲೋಕಸಭಾ ಸ್ಥಾನಗಳನ್ನು ಗೆಲ್ಲಬಹುದು.

ಮನ್ ಕಿ ಬಾತ್ ಪ್ರಧಾನಿ ನರೇಂದ್ರಮೋದಿರವರ ಭಾಷಣ ವೀಕ್ಷಣೆ ಮೊದಲ ಸ್ಥಾನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವಾಗಿದೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವಿನ ಜಯಭೇರಿ ಬಾರಿಸಲು ಇಂದು ದೃಢ ಸಂಕಲ್ಪ ಮಾಡೋಣ.

ಪಕ್ಷ ಸಂಘಟನೆ ನಮ್ಮ ಮೂಲಮಂತ್ರ, ಪಕ್ಷದ ಕೆಲಸವನ್ನು ಎಲ್ಲರು ಸಂಘಟಿತರಾಗಿ ಮಾಡೋಣ. ಪಕ್ಷ ಕೊಟ್ಟ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ.

ಇನ್ನು ಮೂರು ತಿಂಗಳಲ್ಲಿ ಜಿಬಿಎ ಚುನಾವಣೆ ನಡೆಯಲಿದೆ ನಮ್ಮ ಕ್ಷೇತ್ರದಲ್ಲಿ 13ವಾರ್ಡ್ ಗಳು ಬರಲಿದೆ ಎಲ್ಲ ವಾರ್ಡ್ ಗಳಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಬೇಕು ಎಂದು ಹೇಳಿದರು.

ಕ್ರಾಂತಿರಾಜು, ಡೊಡ್ಡವೀರಯ್ಯ, ದೀಪಕ್ ಮಾಯಸಂದ್ರ, ರಾಮಪ್ಪ, ರಾಜೇಶ್ವರಿ ಬೆಳಗೊಡ, ಜಯರತ್ನ ಶಾಮಣ್ಣ, ಕ್ರಾಂತಿರಾಜು, ಉಷಾರಾಣಿ, ವಸಂತ್ ಕುಮಾರ್, ರಾಜು ಎಸ್. ರವರು ಭಾಗವಹಿಸಿದದರು.