ನಾವು ಜಾತಿ ಬಿಟ್ಟರೂ ಸಮಾಜ ಜಾತಿ ಬಿಡಲು ಒಪ್ಪುತ್ತಿಲ್ಲ: ಎಸ್.ರಾಮಲಿಂಗೇಶ್ವ‌ರ್

ವಿಜಯ ದರ್ಪಣ ನ್ಯೂಸ್…

ನಾವು ಜಾತಿ ಬಿಟ್ಟರೂ ಸಮಾಜ ಜಾತಿ ಬಿಡಲು ಒಪ್ಪುತ್ತಿಲ್ಲ: ಎಸ್.ರಾಮಲಿಂಗೇಶ್ವ‌ರ್

ಬೆಂಗಳೂರು: ವಿದ್ಯಾವಂತರಾದಂತೆಲ್ಲಾ ಜಾತಿ ಪೆಡಂಭೂತ ನಮ್ಮ ಸುತ್ತಲೇ ಗಿರಿಕಿ ಹೊಡೆಯುತ್ತಿದ್ದು ಸಂಕೋಲೆ ದಿನೇ ದಿನೇ ಹೆಚ್ಚಾಗುತ್ತಿದೆ ಇದು ಕುವೆಂಪು ಹಾಗೂ ದಾರ್ಶನಿಕರ ತತ್ವ ಸಿದ್ಧಾಂತಗಳಿಗೆ ಮಾರಕ ಎಂದು ಸಂಸ್ಕೃತಿ ಚಿಂತಕ, ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ಎಸ್.ರಾಮಲಿಂಗೇಶ್ವರ್ ಸಿಸಿರಾ ವಿಷಾದ ವ್ಯಕ್ತಪಡಿಸಿದರು. ಬೆಂಗಳೂರಿನ ರಂಗೋತ್ರಿ ಸಂಸ್ಥೆಯು ಕನ್ನಡ ಇಲಾಖೆಯ ಆಯೋಜಿಸಿದ್ದ ಯುಗದ ಕವಿ ಕುವೆಂಪು ಕವಿ ಕಾವ್ಯಗೀತ ನೃತ್ಯ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾಜದಲ್ಲಿ ದೊಡ್ಡ ಅನಿಷ್ಟ , ಈ ಜಾತಿಯತೆ. ಸರ್ವ ಜನಾಂಗದ ನಾವು ಶಾಂತಿಯ ತೋಟದಂತಿರುವ ಭಾರತದ ಎಂಬ ಏಕತೆಗೆ ದೊಡ್ಡ ಮಾರಕವಾಗಿ ಜಾತಿ, ಸುತ್ತುತ್ತಾ ಗೊಡ್ಡು ಸಂಪ್ರದಾಯ, ಮೂಡನಂಬಿಕೆ ಜಾತಿಯ ನಮ್ಮ ಮಾನವ ಸಮಾಜವನ್ನು ಹಿಂಡಿ ಹಿಪ್ಪೆ ಮಾಡುತ್ತಾ ಹೋಗುತ್ತಿದೆ. ಆಧುನಿಕ ಸಮಾಜವು ಬಸವಣ್ಣ, ಕುವೆಂಪು, ವಿವೇಕಾನಂದರ ಚಿಂತನೆಗಳು ನಮ್ಮ ಜನ ಸಮುದಾಯದ ಒಗ್ಗಟ್ಟಿಗೆ, ಜಾತ್ಯತೀತ ಭಾರತ ನಿರ್ಮಾಣಕ್ಕೆ ನಾಂದಿ ಹಾಡಬೇಕಾಗಿದೆ. ಸಮಾಜ ಮತ್ತು ಯುವ ಸಮೂಹಕ್ಕೆ ಕುವೆಂಪು ಸಂಸ್ಕೃತಿ ಅವರ ಸಾಹಿತ್ಯದ ವೈಚಾರಿಕ ಪ್ರಜ್ಞೆ, ಸಹಕಾರದೊಂದಿಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ಜಾಗರೂಕವಾಗಿ, ಹೊರುವಂತೆ ಜಾಗೃತಿ ಮೂಡಿಸುವ ನೆನಪಿನ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ, ಕಾರ್ಯಕ್ರಮ ಮಾಧ್ಯಮಗಳು, ಸಂಘಸಂಸ್ಥೆಗಳು, ಹಿರಿಯರು ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡೋಣ ಎಂದರು.

ಸಂಸ್ಥೆಯ ಅಧ್ಯಕ್ಷ ರಂಗೋತ್ರಿ ಕೆ.ಹೆಚ್.ಕುಮಾರ್  ವಾಸ್ತವಿಕವಾಗಿ ಮಾತನಾಡಿದರು ಅಧ್ಯಕ್ಷತೆಯನ್ನು ರಂಗಕರ್ಮಿ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ವ ಚೇತನ ಸಂಸ್ಥೆಯ ರೇಣುಕಾ ವೈಕುಂಠಯ್ಯ, ಗಾಂಧಿ ನಗರ ಕಸಾಪ ಅಧ್ಯಕ್ಷ ಗೌಡಗೆರೆ ಮಾಮುಶ್ರೀ . ಸಮಾಜ ಸೇವಕ ಪ್ರಭು ಜಯರಾಂ, ಮುಂತಾದವರಿದ್ದರು. ಕವಿಗೋಷ್ಠಿಯಲ್ಲಿ ಶಾಂತಿ ವಾಸು, ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, .ಕೆ.ಎಂ.ರೇವಣ್ಣ, ಡಿ.ಸುಮನ ಚಿನ್ಮಯಿ, ಡಾ.ಕೃಷ್ಣ ಹಾನ್ ಬಾಳ್, ಲಕ್ಷ್ಮೀ ಶ್ರೀನಿವಾಸ್, ಜಿ.ಆನಂದ್, ಡಾ.ಎಂ.ಪ್ರಿಯದರ್ಶಿನಿ. ತುಕ್ಕಪ್ಪ ಜಡಗೆ ಸ್ವರಚಿತ ಕವನಗಳನ್ನು ಎಸ್.ಡಿ.ಆನಂದ್ ಕುಮಾರ್, ಪ್ರೊ. ವಾಚಿಸಿದರು.