ಕಲ್ಯಾಣಿಗೆ ನೀರು ತುಂಬಿಸಲು ಸ್ವಂತ ಹಣದಿಂದ ಕೊಳವೆಬಾವಿ ಕೊರೆಸಿ ನೀರು ಒದಗಿಸಿದ ಗ್ರಾಮ ಪಂಚಾಯಿತಿ ಸದಸ್ಯರು
ವಿಜಯ ದರ್ಪಣ ನ್ಯೂಸ್….
ಕಲ್ಯಾಣಿಗೆ ನೀರು ತುಂಬಿಸಲು ಸ್ವಂತ ಹಣದಿಂದ ಕೊಳವೆಬಾವಿ ಕೊರೆಸಿ ನೀರು ಒದಗಿಸಿದ ಗ್ರಾಮ ಪಂಚಾಯಿತಿ ಸದಸ್ಯರು

ಶಿಡ್ಲಘಟ್ಟ : ಶಾಸಕ ಬಿ.ಎನ್.ರವಿಕುಮಾರ್ ನೂರಾರು ವರ್ಷಗಳ ಕಾಲ ಇತಿಹಾಸ ಇರುವಂತಹ ಚಿಕ್ಕದಾಸರಹಳ್ಳಿಯ ಬೂನಿಳ ಸಮೇತ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಕಲ್ಯಾಣಿಯಲ್ಲಿ ಸುಮಾರು 20 ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದ್ದು , ಇದನ್ನು ಮನಗಂಡ ಚಿಕ್ಕದಾಸರಹಳ್ಳಿಯ ಗ್ರಾಮ ಪಂಚಾಯಿತಿಯ ಸದಸ್ಯರು ಸ್ವಂತ ಹಣದಿಂದ ಬೋರವೆಲ್ ಕೊರೆಸಿ ಕಲ್ಯಾಣಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಬ್ಯಾಟರಾಯ ಸ್ವಾಮಿಯ ಆಶೀರ್ವಾದದಿಂದ ಉತ್ತಮ ಮಳೆ ಬೆಳೆಯಾಗಿ ಎಲ್ಲಾ ರೈತ ಬಾಂಧವರಿಗೂ ಸಂತೋಷವನ್ನು ನೀಡಲಿ ಎಂದು ಶುಭ ಹಾರೈಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬೋರ್ ವೆಲ್ ಗೆ ಪೂಜೆ ಸಲ್ಲಿಸಿ ಬೋರ್ವೆಲ್ಲನ್ನು ಆನ್ ಮಾಡುವ ಮೂಲಕ ಕಲ್ಯಾಣಿಗೆ ನೀರು ಹರಿಸುವುದಕ್ಕೆ ಅವರು ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕದಾಸರಹಳ್ಳಿಯ ಪುರಾಣ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇವಾಲಯದ ಕಲ್ಯಾಣಿ ಸುಮಾರು 20 ವರ್ಷಗಳ ಹಿಂದೆಯೇ ನೀರಿಲ್ಲದೇ ಬತ್ತಿ ಹೋಗಿ ರಥೋತ್ಸವ ಸಮಯದಲ್ಲಿ ನಡೆಯುವ ತೆಪ್ಪೋತ್ಸವ ನಿಂತುಹೋಗಿದ್ದು , ಇದನ್ನು ಮನಗಂಡ ಚಿಕ್ಕ ದಾಸರಹಳ್ಳಿಯ ಗ್ರಾಮ ಪಂಚಾಯಿತಿಯ ಸದಸ್ಯರು ಸ್ವಂತ ಹಣದಿಂದ ಬೋರವೆಲ್ ಕೊರೆಸಿ ಕಲ್ಯಾಣಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಸ್ವಂತ ಜಮೀನುಗಳಿಗೆ ನೀರನ್ನು ಒದಗಿಸಲು ಪರದಾಡುವ ಈಗಿನ ಕಾಲದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಹಿಂದಿನಿಂದಲೇ ಈ ಕಲ್ಯಾಣಿಯಲ್ಲಿ ನೀರಿಲ್ಲದೆ ಬ್ಯಾಟರಾಯ ಸ್ವಾಮಿಯ ತೆಪ್ಪೋತ್ಸವ ಮಾಡದೆ ಇರುವುದನ್ನು ಗಮನಿಸಿದ ಈ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಸ್ವಂತ ಹಣದಿಂದ ಬೋರವೆಲ್ ಕೊರೆಸಿ ಕಲ್ಯಾಣಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಈ ಬಾರಿ ಕದ್ರಿ ಹುಣ್ಣಿಮೆಗೆ ನಡೆಯುವ ಬ್ರಹ್ಮರಥೋತ್ಸವ ಸಮಯದಲ್ಲಿ ತೆಪ್ಪೋತ್ಸವ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಮಳಮಾಚನಹಳ್ಳಿ ಗ್ರಾಮದ ಜೆಡಿಎಸ್ ಯುವ ಮುಖಂಡ ಎಂ. ಜಿ.ನವೀನ್ ಕುಮಾರ್ ರವರು ಮಾತನಾಡಿ, ಮಳ ಮಾಚನಹಳ್ಳಿ ಗ್ರಾಮ ಪಂಚಾಯತಿ ಜೆಡಿಎಸ್ ಬೆಂಬಲಿತ ಸದಸ್ಯರು ಆಡಳಿತಕ್ಕೆ ಬಂದು ಒಂದು ವರ್ಷದಲ್ಲಿ ಬಂದಿರುವಂತಹ ಅಲ್ಪ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡಿದ್ದು, ಬ್ಯಾಟರಾಯಸ್ವಾಮಿ ದೇವಾಲಯದ ಅಭಿವೃದ್ಧಿಗೆ ಮಾನ್ಯ ಶಾಸಕರು ಮುಜರಾಯಿ ಇಲಾಖೆಯಿಂದ 50 ಲಕ್ಷ ರೂಪಾಯಿಗಳ ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದು ತಾಲೂಕಿನ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ಬ್ಯಾಟರಾಯಸ್ವಾಮಿ ದೇವಾಲಯದ ಕಮಿಟಿ ಅಧ್ಯಕ್ಷ ಅಧ್ಯಕ್ಷ ಬ್ಯಾಟರಾಯಶೆಟ್ಟಿ ರವರು ಮಾತನಾಡಿ ,ನಾನು ಕಳೆದ 48 ವರ್ಷಗಳಿಂದ ದೇವಾಲಯ ಕಮಿಟಿ ಅಧ್ಯಕ್ಷನಾಗಿದ್ದರೂ ಸಹ ಈ ರೀತಿಯಾದಂತಹ ಅಭಿವೃದ್ಧಿ ಕಾರ್ಯವನ್ನು ಮಾಡಲು ಸಾಧ್ಯವಾಗಿರಲಿಲ್ಲ ಆದರೆ ಕಳೆದ ಆರೇಳು ತಿಂಗಳ ಹಿಂದೆ ಗ್ರಾಮ ಪಂಚಾಯತಿ ಸದಸ್ಯರಾಗಿ ಅಧಿಕಾರಕ್ಕೆ ಬಂದಂತಹ ನಮ್ಮ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಮಾಡಿದ್ದಾರೆ ಹಾಗೂ ಗ್ರಾಮದಲ್ಲಿ ಐ ಮಸ್ ಲೈಟ್ ಅನ್ನು ಹಾಕಿ ಗ್ರಾಮಕ್ಕೆ ಬೆಳಕು ನೀಡುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ತಾದೂರು ರಘು, ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್ ಬಿ.ಎಂ.ಎಮ್.ಸಿ. ರಾಜಶೇಖರ್, ನಟರಾಜ್,ನಾಗೇಶ್,ನಾಗರಾಜ್, ಪ್ರಭಾಕರ್, ಮಾಜಿ ಸದಸ್ಯ ಚಿಕ್ಕದಾಸರಹಳ್ಳಿ ಲಕ್ಷಣಮೂರ್ತಿ ಮುಖಂಡರಾದ ಚಿಕ್ಕದಾಸರಹಳ್ಳಿ ಮುನಿರಾಜು,ಮುಗಲಡಪಿ ಮುನೇಗೌಡ, ತಾದೂರು ಪಟೇಲ್ ಮುನಿರಾಜು, ಮಳಮಾಚನಹಳ್ಳಿ ಎಂ.ಪಿ.ಸಿ.ಎಸ್ ಅಧ್ಯಕ್ಷ ಆರ್.ಸತೀಶ್, ಸದಸ್ಯ ಡಿಶ್ ವೆಂಕಟೇಶ್,ಪಿಡಿಒ ಶೈಲಾ,ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಜೆಡಿಎಸ್ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
