ಸೋರುತೀದೆ ಇಂದಿರಾ ಕ್ಯಾಂಟೀನ್ !

ವಿಜಯ ದರ್ಪಣ ನ್ಯೂಸ್, ಮಡಿಕೇರಿ ಜುಲೈ  9

ಮಡಿಕೇರಿ ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ನ ಪರಿಸ್ಥಿತಿ ಕೇಳುವವರಿಲ್ಲದಂತಾಗಿದೆ .ಮಡಿಕೇರಿ ನಗರಸಭೆಗೆ ಒಳಪಡುವ ಇಂದಿರಾ ಕ್ಯಾಂಟೀನ ಮೇಲ್ಚಾವಣಿ ಸೋರುತ್ತಿದ್ದು ಕ್ಯಾಂಟೀನ ಒಳಗೆ ಗದ್ದೆಯ ರೀತಿ ಗೋಚರಿಸುತ್ತಿದೆ ಇದರ ಒಳಗೆ ಹೋಗಿ ನೋಡಿದರೆ ಅಲ್ಲಲ್ಲಿ ಮಳೆಯ ನೀರು ಬೀಳುತ್ತಿದ್ದು ಊಟಕ್ಕೆಂದು ಬರುವವರಿಗೆ ತೊಂದರೆ ಅನುಭವಿಸುವ ಪರಿಸ್ಥಿತಿ ಬಂದೊದಗಿದೆ.

ಈ ಇಂದಿರಾ ಕ್ಯಾಂಟೀನ್ ನ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಮಡಿಕೇರಿ ನಗರಸಭೆ ಆಡಳಿತ ಮಂಡಳಿಯಾಗಲಿ ಅಧಿಕಾರಿಗಳಾಗಲಿ ಇದರ ಅವ್ಯವಸ್ಥೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ. ಮಾನ್ಯ ಮುಖ್ಯಮಂತ್ರಿಗಳ ಯೋಜನೆಗಳೆಲ್ಲೊಂದಾದ ಬಡವರು ಯಾರು ಉಪವಾಸ ಇರಬಾರದು ಎಂಬ ಕಡಿಮೆ ದರದಲ್ಲಿ ಊಟ ನೀಡುವಂತಹ ಇಂದಿರಾ ಕ್ಯಾಂಟೀನ್ ಅನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿಕೊಂಡು ಹೋಗದೆ ಮೂಲೆಗುಂಪು ಮಾಡುವ ರೀತಿಯಲ್ಲಿ ಕಂಡುಬರುತ್ತಿದೆ ಇದಕ್ಕೆ ಸಂಬಂಧಪಟ್ಟ ಜಿಲ್ಲಾಡಳಿತ ಅಥವಾ ಮಡಿಕೇರಿ ನಗರಸಭೆ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟೀನ್ ಅನ್ನು ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆ ಬಳಿ ಸ್ಥಳಾಂತರ ಮಾಡಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕಾಗಿ ಸ್ಥಳೀಯ ಸಾರ್ವಜನಿಕರು ಹಾಗೂ ಕೊಡಗು ಹಿತರಕ್ಷಣಾ ವೇದಿಕೆ ಸದಸ್ಯರು ಒತ್ತಾಯಿಸಿದ್ದಾರೆ.