ಮಾದರಿ ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಗಳ ನಿರ್ಮಾಣದತ್ತ ಸಚಿವ ಕೆಹೆಚ್ ಮುನಿಯಪ್ಪ.

ವಿಜಯ ದರ್ಪಣ ನ್ಯೂಸ್

ಬಿಜಿಎಸ್ ನಗರ,ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್: 01

ಮಹಾತ್ಮ ಗಾಂಧೀಜಿಯವರ ಜನ್ಮದಿನ ಪ್ರಯುಕ್ತ ದೇವನಹಳ್ಳಿಯ ವಿಶ್ವನಾಥಪುರದಲ್ಲಿ ಮಾದರಿ ಶಾಲೆಯನ್ನು ನಿರ್ಮಾಣ ಮಾಡುವಲ್ಲಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್. ಮುನಿಯಪ್ಪನವರು ಉತ್ಸುಕರಾಗಿದ್ದಾರೆ.

ಗ್ರಾಮೀಣ ಪ್ರದೇಶಗಳ ಶಾಲೆಗಳು ನಗರ ಮಟ್ಟದ ಶಾಲೆಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲಾ ಎಂದು ಹಾಗೂ ನಗರ ಪ್ರದೇಶದ ಶಾಲೆಗಳ ಮಕ್ಕಳ ರೀತಿಯಲ್ಲಿ ಬೆಳವಣಿಗೆಯಾಗಬೇಕೆಂಬ ಸಚಿವರ ಒತ್ತಾಸೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾದರಿ ಶಾಲೆಗಳ ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ

CSR ಕಂಪನಿಗಳ ಕಾಯಿದೆ, 2013 (“ಆಕ್ಟ್”) ಸೆಕ್ಷನ್ 135 ರಂತೆ ಕಂಪನಿಗಳು ಕಡ್ಡಾಯವಾಗಿ ಸಿಎಸ್ಆರ್ ಚಟುವಟಿಕೆಗಳಿಗೆ ನಿರ್ದಿಷ್ಟ ಮೊತ್ತವನ್ನು ನೀಡಬೇಕು. ಈ

ಅನುದಾನದಡಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳು,ಕಲಿಕಾ ಸಾಮಗ್ರಿಗಳು, ಪ್ರಯೋಗಾಲಯಗಳು,ಕುಡಿಯುವ ನೀರಿನ ವ್ಯವಸ್ಥೆ, ಡಿಜಿಟಲ್ ಗ್ರಂಥಾಲಯಗಳು,ಕ್ರೀಡಾ ಸಾಮಗ್ರಿಗಳ ವ್ಯವಸ್ಥೆ, ಉತ್ತಮವಾದ ತರಬೇತಿ ಪಡೆದಿರುವ ಶಿಕ್ಷಕರನ್ನು ನೇಮಿಸುವುದು, ಶಾಲೆಯ ಕಾಂಪೌಡ್ ನಿರ್ಮಾಣಮಾಡುವುದು ಮಕ್ಕಳಿಗೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ನೀಡುವುದು

ಈ ರೀತಿಯಲ್ಲಿ ಸಚಿವರು ಒಂದು ವಿಶಿಷ್ಟ ರೀತಿಯಲ್ಲಿ ಯೋಜನೆಯನ್ನು ರೂಪಿಸಿದ್ದು ಬಂಡವಾಳ ಶಾಹಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿ ಅಡಿ ಈ ಮೇಲ್ಕಂಡ ಎಲ್ಲಾ ವ್ಯವಸ್ಥೆಯನ್ನು ಒಳಗೊಂಡ ಮಾದರಿ ಶಾಲೆಗಳ ನಿರ್ಮಾಣಕ್ಕೆ ಸಚಿವ ಮುನಿಯಪ್ಪನವರು ಸುಮಾರು 1 ತಿಂಗಳಿನಿಂದ ಕಾರ್ಯಕ್ರಮ ರೂಪಿಸಿದ್ದು

ಈ ಗಾಗಲೇ ಪ್ರತಿಷ್ಟಿತ 15 ಕ್ಕೂ ಹೆಚ್ಚು ಕಂಪನಿಗಳ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯನ್ನು ನಡೆಸಿದ್ದು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ

ಕೆಲವು ಪ್ರಮುಖ ಕಂಪನಿಗಳ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಲೆಗಳ ಕಾಮಗಾರಿಗಳನ್ನು ನಡೆಸಲು ಮುಂದಾಗಿದ್ದು ಗಾಂಧೀಜಿಯವರ ಕನಸಿನಂತೆ ಮಾದರಿ ಶಾಲೆಗಳ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಎಲ್ಲಾ ಗ್ರಾಮಪಂಚಾಯತಿ ಮಟ್ಟದಲ್ಲಿ ಮಾದರಿ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದು

ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪನವರು ಸಹ ಈ ಕಾರ್ಯಕ್ರಮ ಕ್ಕೆ ಬೆಂಬಲವನ್ನು ಸೂಚಿಸಿದ್ದು ಅವರು ಸಹ ಈ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ .

ಆಹಾರ ಸಚಿವ ಕೆಹೆಚ್ ಮುನಿಯಪ್ಪನವರು ಬಡವರ ಪರ,ರೈತರ ಪರ ಹಾಗೂ ಗ್ರಾಮೀಣ ಮಟ್ಟದ ಮಕ್ಕಳ ಬೆಳವಣಿಗೆಯ ಹಿತ ದೃಷ್ಟಿಯಿಂದ ಈ ಸಂಕಲ್ಪವನ್ನು ತೊಟ್ಟಿದ್ದಾರೆ ಏನೇ ಆದರೂ ಕೇಂದ್ರ ಸರ್ಕಾರದಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಾನ್ಯ ಮುನಿಯಪ್ಪನವರ ಆಶಯ ಮತ್ತೊಬ್ಬರಿಗೆ ಪ್ರೇರಣಾದಾಯಕವಾಗಿರಬೇಕಾಗುತ್ತದೆ,

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಶ್ರಮಿಕರ ಮಕ್ಕಳೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವುದರಿಂದ ಅವರಿಗೆ ಎಲ್ಲಾ ರೀತಿಯ ಅನುಕೂಲಕರ ವಾತಾವರಣದಲ್ಲಿ ಬೆಳೆಸಬೇಕು ಮತ್ತು ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳ ಮಕ್ಕಳಿಗೆ ಸಮವಾಗಿ ಅವರನ್ನು ತಯಾರು ಮಾಡಬೇಕು ಎನ್ನುವುದು ಅವರ ಆಶಯ.

ಹಾಗೂ ನಮ್ಮೂರ ಶಾಲೆ ಮಾದರಿ ಶಾಲೆ ಎಂಬ ಸಂದೇಶ ಇಡೀ ರಾಜ್ಯದಾದ್ಯಂತ ಮುಂದುವರಿದರೆ ಪ್ರತಿಷ್ಠಿತ ಖಾಸಗಿ ಶಾಲೆಗಳ ಜೊತೆಗೆ ಗ್ರಾಮೀಣ ಮಟ್ಟದ ಶಾಲೆಗಳು ಬೆಳೆದಂತಾಗುತ್ತದೆ ಮತ್ತು ಪೋಷಕ ಆರ್ಥಿಕ ವಾಗಿ ಸಹಕಾರಿಯಾಗಲು ಸಾಧ್ಯವಾಗುತ್ತದೆ,

ಈ ಒಂದು ಸಂಕಲ್ಪವನ್ನು ಮಾನ್ಯ ಸಚಿವರು ಬಯಸಿದ್ದು ನಿಜಕ್ಕೂ ಶ್ಲಾಘನೀಯ ವಾದದ್ದು.ಇದನ್ನು ಗಾಂಧೀಜಿಯವರ ಜನ್ಮದಿನದಂದೆ ಕಾರ್ಯ ರೂಪಕ್ಕೆ ತರಲು ಮಾನ್ಯ ಸಚಿವರು ಉತ್ಸುಕರಾಗಿದ್ದಾರೆ.

ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ ಶಿಕ್ಷಣತಜ್ಞರು ಮಾದರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಕಲಿಕೆಯನ್ನು ನೀಡಬೇಕೆಂಬ ಬಯಕೆ ಅಂದಿನ ಮಾಜಿ ರಾಷ್ಟ್ರಪತಿಗಳಾದ ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಕನಸಾಗಿತ್ತು

ಇದನ್ನು ಮಕ್ಕಳಲ್ಲಿ ಮೂಡಿಸಬೇಕಾದರೆ ಒಂದು ಸುಸಜ್ಜಿತ ವಾತಾವರಣ ಬಹು ಮುಖ್ಯವಾಗಿರುತ್ತದೆ ಈ ಒಂದು ಬಯಕೆ ಈಡೇರಲು ಮಾನ್ಯ ಆಹಾರ ಸಚಿವರು ಕಾರ್ಯೋನ್ಮುಖರಾಗಿರುವುದು ಸಂತಸಕರವಾಗಿದೆ.

ಸರ್ವಪಲ್ಲಿ ರಾಧಾಕೃಷ್ಣನ್ ರವರು ಹೇಳಿದಂತೆ “ಶಿಕ್ಷಣದ ಅಂತಿಮ ಫಲಿತಾಂಶವು ಸ್ವತಂತ್ರ ಹಾಗೂ ಸೃಜನಶೀಲ ಮನುಷ್ಯನನ್ನು ರೂಪಿಸುವುದಾಗಬೇಕು. ಆಗ ಮಾತ್ರ ಅವರು ಕಹಿ ಸಂದರ್ಭ ಮತ್ತು ಪ್ರಕೃತಿಯ ಪ್ರತಿಕೂಲತೆಗಳ ವಿರುದ್ಧ ಹೋರಾಡಬಹುದು,ಶಾಲೆಗಳಲ್ಲಿ ವಿದ್ಯೆ ಕಲಿಸಿದವರು ಮಾತ್ರ ಶಿಕ್ಷಕರಲ್ಲ. ಮಕ್ಕಳ ಸರಿ ತಪ್ಪುಗಳನ್ನು ಗುರುತಿಸಿ ಕಲಿಸುವವರೇ ಶಿಕ್ಷಕರು. ಏನೇ ಆದರೂ ನಮ್ಮ ಶಾಲೆ ಮಾದರಿ ಶಾಲೆ,ನಮ್ಮ ಗ್ರಾಮ ಮಾದರಿ ಗ್ರಾಮವಾಗಬೇಕು ಎಂಬ ಬಯಕೆ ಮಕ್ಕಳಲ್ಲಿ ಮೂಡಬೇಕು ಎಂಬುವುದು ಸಚಿವರ ಆಶಯ ವಾಗಿದೆ.

ಪ್ರತಿಷ್ಠಿತ ಕಂಪನಿಗಳ ಜೊತೆ ಒಂದಾಗಿ ದೇವನಹಳ್ಳಿಯ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ ಶುಭ ಸಂದರ್ಭದಲ್ಲಿ *ಮಾದರಿ ಶಾಲೆ* ಎಂಬ ಯೋಜನೆಯನ್ನು ಮಾನ್ಯ ಶಾಲಾ ಶಿಕ್ಷಣ ಸಚಿವರ ನೇತೃತ್ವದಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್ ಮುನಿಯಪ್ಪನವರು ಉದ್ಘಾಟಿಸಲಿದ್ದಾರೆ.

ಗಾಂಧೀಜಿಯವರ ಹೇಳಿದಂತೆ ನಮಗಾಗಿ ನಾವು ಏನು ಮಾಡುತ್ತೇವೆ ಎಂಬುವುದು ಕೊನೆಗೊಳ್ಳುತ್ತದೆ ಇತರರಿಗೆ ಏನು ಮಾಡುತ್ತೇವೆ ಎಂಬುವುದು ಶಾಶ್ವತವಾಗಿರುತ್ತದೆ.

 

@@@@@@@@@@@@@@@@@@

ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರು

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 01:ಮಹಾತ್ಮ ಗಾಂಧೀಜಿಯವರ 154 ನೇ ಜಯಂತಿ ಸಂದರ್ಭದಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ಪ್ರತ್ಯೇಕ ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿತ್ತು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ

ಪ್ರೌಢಶಾಲಾ ವಿಭಾಗ

1) ಸಂಜನಾ ಕೆ (ಪ್ರಥಮ)
ಸರ್ಕಾರಿ ಪ್ರೌಢಶಾಲೆ
ಬರದಿ ಮಂಡಿಗೆರೆ
ನೆಲಮಂಗಲ ತಾಲೂಕು

2) ಸ್ನೇಹ ಆರ್ (ದ್ವಿತೀಯ)
10ನೇ ತರಗತಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
ಬಾಲೇಪುರ, ದೇವನಹಳ್ಳಿ ತಾಲ್ಲೂಕು 

3) ಲಹರಿ ಬಿ ಆರ್ (ತೃತೀಯ)
ಕಾರ್ಮೆಲ್ ಜ್ಯೋತಿ ಪ್ರೌಢಶಾಲೆ ರೋಜಿಪುರ ದೊಡ್ಡಬಳ್ಳಾಪುರ

ಪದವಿ ಪೂರ್ವ ವಿಭಾಗ

1)ಮೀನಾ ಎಂ (ಪ್ರಥಮ) ಕಲಾವಿಭಾಗ
ಶ್ರೀ ಕೊಂಗಾಡಿಯಪ್ಪ ಪಿಯು ಕಾಲೇಜ್ ದೊಡ್ಡಬಳ್ಳಾಪುರ

2) ಚಮನ್ ರಾಣಿ ಎಂ ಆರ್ (ದ್ವಿತೀಯ) ವಾಣಿಜ್ಯ ವಿಭಾಗ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜಯಪುರ ದೇವನಹಳ್ಳಿ ತಾಲ್ಲೂಕು.

3) ಮೇಘನಾ ಎಸ್ಎಲ್(ತೃತೀಯ) ವಿಜ್ಞಾನ ವಿಭಾಗ
ಶ್ರೀ ದೇವರಾಜ್ ಅರಸ್ ಪಿಯು ಕಾಲೇಜ್ ಕೊಡಿಗೆಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕ್

ಪದವಿ, ಸ್ನಾತಕೋತ್ತರ ವಿಭಾಗ

1) ಶಿವರಾಜ್ ಜಿಎನ್ (ಪ್ರಥಮ)
ದ್ವಿತೀಯ ಸೆಮಿಸ್ಟರ್ ಬಿಎಡ್ ಶ್ರೀ ಕೃಷ್ಣ ಶಿಕ್ಷಣ ಮಹಾವಿದ್ಯಾಲಯ ದೇವನಹಳ್ಳಿ

2) ಪ್ರಭಾವತಿ ಎಂ ಕೆ (ದ್ವಿತೀಯ)
ದ್ವಿತೀಯ ಸೆಮಿಸ್ಟರ್ ಬಿಎಡ್ ಶ್ರೀ ಕೃಷ್ಣ ಶಿಕ್ಷಣ ಮಹಾವಿದ್ಯಾಲಯ ದೇವನಹಳ್ಳಿ

3) ನಿರ್ಮಲಾ ಬಿಎನ್ (ತೃತೀಯ)
ಲಾವಣ್ಯ ಶಿಕ್ಷಣ ಮಹಾವಿದ್ಯಾಲಯ ದೊಡ್ಡಬಳ್ಳಾಪುರ.